ಹೃದಯ ದೇಹದ ಬಹಳ ಮುಖ್ಯವಾದ ಅಂಗ. ಇದು ದೇಹದ ಎಲ್ಲಾ ಕಡೆ ರಕ್ತವನ್ನು ಸರಬರಾಜು ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಿ. ಅದಕ್ಕಾಗಿ ನೀವು ಪ್ರತಿದಿನ 10 ನಿಮಿಷಗಳ ಕಾಲ ಈ ಕೆಲಸ ಮಾಡಿ.
ಸಂಶೋಧನೆಯ ಪ್ರಕಾರ, ಪ್ರತಿದಿನ 10 ನಿಮಿಷಗಳ ಕಾಲ ವಾಕಿಂಗ್ ಮಾಡಿ. ಇದರಿಂದ ಹೃದಯ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆಯಂತೆ. ಇದರಿಂದ ಅಕಾಲಿಕ ಮರಣವನ್ನು ತಪ್ಪಿಸಬಹುದಂತೆ.
ಪ್ರತಿದಿನ 10 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಇದರಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬು ಕರಗುತ್ತದೆ. ಹಾಗಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದರಿಂದ ಹೃದಯ ಆರೋಗ್ಯವಾಗಿರುತ್ತದೆಯಂತೆ.