ಮನೆ ಆರೋಗ್ಯ ಊಟದ ಬಳಿಕ ಸಿಗರೇಟ್ ಸೇದುವ, ಟೀ ಕುಡಿಯುವ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿ

ಊಟದ ಬಳಿಕ ಸಿಗರೇಟ್ ಸೇದುವ, ಟೀ ಕುಡಿಯುವ ಅಭ್ಯಾಸವಿದ್ದರೆ ಇಂದೇ ನಿಲ್ಲಿಸಿ

0
coffee time

ಪ್ರತಿಯೊಬ್ಬ ವ್ಯಕ್ತಿಯು ಊಟದ ನಂತರ ವಿಶ್ರಾಂತಿ ಪಡೆಯುವ ವಿಭಿನ್ನ ಮಾರ್ಗವನ್ನು ಹೊಂದಿರುತ್ತಾನೆ. ಕೆಲವರು ಆರಾಮ ತೆಗೆದುಕೊಳ್ಳಲು ಬಯಸಿದರೆ ಇನ್ನೂ ಕೆಲವರು ಬೇರೆ ಬೇರೆ ರೀತಿಯ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಊಟದ ಬಳಿಕ ನಾವು ಮಾಡುವ ಈ ತಪ್ಪುಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮಬೀರಬಲ್ಲವು.

Join Our Whatsapp Group

ಊಟದ ನಂತರ ನಿದ್ದೆ

ಊಟದ ನಂತರ ಚಿಕ್ಕನಿದ್ರೆ ಮಾಡುವುದು ಮನಸ್ಸಿಗೆ ಉಲ್ಲಾಸವನ್ನು ನೀಡುವ ಅನುಭವವನ್ನು ಮಾಡಬಲ್ಲದು. ಆದರೆ ಊಟದ ನಂತರ ತಕ್ಷಣ ಮಲಗುವುದು ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡಬಲ್ಲದು.

ಆಹಾರದ ಕಣಗಳನ್ನು ಕರಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಹೊಟ್ಟೆ ತುಂಬಾ ತಿಂದ ತಕ್ಷಣ ನಿದ್ದೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.

ಧೂಮಪಾನ ಮಾಡಬಾರದು

ಕೆಲವರಿಗೆ ಊಟವಾದ ತಕ್ಷಣ ಸಿಗರೇಟ್ ಸೇದುವ ಅಭ್ಯಾಸವಿರುತ್ತದೆ. ನಿಮಗೂ ಆ ಅಭ್ಯಾಸವಿದ್ದರೆ ತಕ್ಷಣ ನಿಲ್ಲಿಸುವುದು ಉತ್ತಮ. ಯಾಕೆಂದರೆ ಊಟವಾದ ತಕ್ಷಣ ಸಿಗರೇಟ್ ಸೇದುವುದು ನಿಮ್ಮ ಆರೋಗ್ಯ ಹಾಗೂ ಚಯಾಪಚಯದ ಮೇಲೆ ಪರಿಣಾಮ ಬೀರುತ್ತದೆ. ಊಟದ ತಕ್ಷಣ ಸಿಗರೇಟ್ ಸೇದುವುದು ೧೦ ಸಿಗರೇಟ್ ಸೇದಿರುವುದಕ್ಕೆ ಸಮ ಎನ್ನಲಾಗುತ್ತದೆ.

ಚಹಾ ಕುಡಿಯುವುದು

ಹೆಚ್ಚಿನವರಿಗೆ ಊಟದ ಬಳಿಕೆ ಚಹಾ ಕುಡಿಯುವ ಅಭ್ಯಾಸವಿದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ತಿಳಿದಿರಲಿ. ಚಹಾದಲ್ಲಿರುವ ಕೆಫಿನ್ ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ.

ಇದು ನಮ್ಮ ಆಹಾರದಲ್ಲಿದ್ದ ಪ್ರೋಟೀನ್ ಅಂಶವನ್ನು ನಾಶಮಾಡುತ್ತದೆ. ಜೊತೆಗೆ ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ . ಆದ್ದರಿಂದ ಊಟದ ತಕ್ಷಣ ಚಹಾ ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡಬೇಕು.

ಸ್ನಾನ ಮಾಡುವುದನ್ನು ತಪ್ಪಿಸಿ

ಕೆಲವರು ಊಟ ಆದ ಮೇಲೆ ಸ್ನಾನ ಮಾಡುತ್ತಾರೆ. ಅದರಲ್ಲೂ ಕೆಲವೊಮ್ಮೆ ರಾತ್ರಿ ಊಟವಾದ ನಂತರ ಮಲಗುವಾಗ ಸ್ನಾನ ಮಾಡಿ ಮಲಗಿದರೆ ಫ್ರೆಶ್ ಆಗಿರುವುದಲ್ಲದೆ, ನಿದ್ದೆ ಚೆನ್ನಾಗಿ ಬರುತ್ತದೆ ಎನ್ನುವ ಕಾರಣಕ್ಕೆ ಊಟದ ತಕ್ಷಣ ಸ್ನಾನ ಮಾಡುತ್ತಾರೆ.

ಇದು ಹೊಟ್ಟೆಯ ಸುತ್ತಲೂ ರಕ್ತದ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ. ಸ್ನಾನ ಮಾಡುವುದರಿಂದ ದೇಹದ ಇತರ ಭಾಗಗಳಿಗೆ ರಕ್ತಸಂಚಾರವಾಗುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

ಹಣ್ಣನ್ನು ಸೇವಿಸದಿರಿ

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಹಣ್ಣಿನ ಸೇವನೆಯು ಆರೋಗ್ಯಕರ. ಆದರೆ ಊಟದ ತಕ್ಷಣ ಹಣ್ಣನ್ನು ಸೇವಿಸುವುದು ಅರ್ಜೀಣಕ್ಕೆ ಕಾರಣವಾಗಬಲ್ಲದು. ಹಣ್ಣುಗಳನ್ನು ಸೇವಿಸಲು ಉತ್ತಮ ಸಮಯವೆಂದರೆ ಊಟದ ಎರಡು ಗಂಟೆ ನಂತರ ಅಥವಾ ಊಟದ ಎರಡು ಗಂಟೆ ಮೊದಲು.

ಹೀಗೆ ಮಾಡುವುದರಿಂದ ಹಣ್ಣಿನಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸೇರುತ್ತದೆ, ಜೀರ್ಣಕ್ರಿಯೆಯೂ ಉತ್ತಮವಾಗುತ್ತದೆ.