ಬಹಳ ಕಲದವರಿಗೆ ಮಧುಮೇಹವಿದ್ದರೆ ದೇಹದ ಅಂಗಾಂಗಗಳ ಕಾರ್ಯ ನಾಶವಾಗುತ್ತದೆ ದೇಹದಲ್ಲಿ ನರಗಳ ದೌರ್ಬಲ್ಯ ಉಂಟಾಗಿ ಸ್ಪರ್ಶಜ್ಞಾನ ಕಡಿಮೆಯಾಗುತ್ತದೆ. ಮೂತ್ರಚೀಲದ ಕಾರ್ಯ ಸಮಂಜಸವಾಗಿರುವುದಿಲ್ಲ. ಲೈಂಗಿಕ ಶಕ್ತಿ ಕುಂಟಿತವಾಗುತ್ತದೆ.ಹೃದಯ ಮತ್ತು ರಕ್ತವಾಹಿನಿ ನಾಳಗಳು ಗಡುಸಾಗಿ ಚಿಕ್ಕದಾಗುತ್ತದೆ.ಅಧಿಕ ರಕ್ತದೊತ್ತಡ ದೀರ್ಘಕಾಲದವರೆಗೂ ಹೃದಯ ವ್ಯಾಧಿಗಳು,ಕಣ್ಣಿನ ನೇತ್ರಜಾಲವು ನಾಶವಾಗಿ,ಕಣ್ಣಿನ ದೃಷ್ಟಿ ಕಳೆದುಕೊಳ್ಳುವರು. ಇದು ಯೌವ್ವನಾ ವ್ಯವಸ್ಥೆಯಲ್ಲಿ ರುವವರಿಗೆ ಕಣ್ಣಿನಲ್ಲಿ ಪೊರೆ ಬೆಳೆಸುತ್ತದೆ. ಉಸಿರಾಟ ತೊಂದರೆ, ಶ್ವಾಸಕೋಶಕ್ಕೆ ಅಂಟುಜಾಗಳುಡ್ಯಗಳು, ಕ್ಷಯ ವ್ಯಾಧಿಗಳು ಬರುವ ಸಂಭವ, ಈ ವ್ಯಾದಿಯು ಜೀರ್ಣಶಕ್ತಿಗೆ ಅಸಾಧ್ಯವಾದ ತೊಂದರೆ ನೀಡುತ್ತದೆ.ವಾಂತಿವಾಕರಿಕೆ, ಅತಿ ಭೇದಿ ಮೂತ್ರದಲ್ಲಿ ಕಲ್ಲು ಇವು ಸಾಮಾನ್ಯವಾಗಿರುತ್ತದೆ.
ನಾನಾ ರೀತಿಯಲ್ಲಿ ಮಧುಮೇಹಕ್ಕೆ ಚಿಕಿತ್ಸೆ :
ಈ ಮಧುಮೇಹವನ್ನು ನಾವು ನಿಯಂತ್ರದಲ್ಲಿಡಲು, ನಿಯಮಿತವಾಗಿ ಆಹಾರ ಸೇವಿಸುವುದು ಮುಖ್ಯವಾದ ಚಿಕಿತ್ಸೆ ಕೇವಲ ಔಷಧಿ ಸೇವನೆಯಿಂದ ಮಾತ್ರ ಸ್ವಲ್ಪ ಭಾಗ ಮಾತ್ರ ಈ ವ್ಯಾದಿಯನ್ನು ನಿಯಂತ್ರಿಸಬಹುದು. ಆದರೆ ಆಹಾರ ಪತ್ಯವು ಅನೇಕ ವಿಧದಲ್ಲಿ ಈ ವ್ಯಾಧಿ ನಿಯಂತ್ರಣದಲ್ಲಿ ಬಂದಿರುವುದು ನಾವು ಗಮನಿಸಬಹುದು.
ಆಹಾರ ಸೇವನೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಸಕ್ಕರೆಯಿಂದ ತಯಾರಿಸಿದ ಸಿಹಿತಿಂಡಿಗಳು, ಐಸ್ ಕ್ರೀಮ್, ಸಿರಪ್, ಜೈನು, ಕೇಕ್, ಬಿಸ್ಕೆಟ್ ಗಳು, ಚಾಕಲೇಟ್, ತಂಪು ಪಾನೀಯಗಳು ಸಿಹಿಯಾದ ಹಣ್ಣುಗಳು ಕಡಿಮೆ ಮಾಡಿ ಅಥವಾ ನಿಲ್ಲಿಸಿ.ಮಧುಮೇಹಿಗಳಿಗೆ ಅಲ್ಪ ಪ್ರಮಾಣದಲ್ಲಿ ಮಾತ್ರ ಕಾರ್ಬೊಹೈಡ್ರೇಟ್ ಉಪಯೋಗಿಸುವ ಸಾಮರ್ಥ್ಯವಿರುತ್ತದೆ. ಉಳಿದ ಕಾರ್ಬೋ ಹೈಡ್ರೇಡ್ ನಮ್ಮ ರಕ್ತದಲ್ಲಿ ಸೇರಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ಬ್ರೆಡ್, ಆಲೂ, ಅನ್ನ, ಅವಲಕ್ಕಿ ಕಡಿಮೆ ಮಾಡಿ. ಕೆಲವು ಪ್ರಮಾಣದಲ್ಲಿ ಮಾತ್ರ ಈ ಸಕ್ಕರೆಯು ಮೂತ್ರ ರೂಪದಲ್ಲಿ ಹರಿದು ಹೋಗುತ್ತದೆ.
ಆಹಾರದಲ್ಲಿರುವ ಸಕ್ಕರೆ ಪ್ರಮಾಣವನ್ನು ಎರಡು ವಿಧದಲ್ಲಿ ಅಳೆಯುತ್ತೇವೆ. ಆಹಾರದಲ್ಲಿ ಗ್ಲೈಕಾಮಿಕ್ ಇಂಡೆಕ್ಸ್, ಇದು ಹೊಂದಿದ ಶರರ್ಕ ಪಿಷ್ಟಾದಿಗಳನ್ನು ವೇಗ ಶರರ್ಕ ಪಿಷ್ಟಾದಿಗಳೆಂದು ಅದು ಅನ್ನ ಆಲೂಗಡೆ ಇದು ಸಕ್ಕರೆ ಮತ್ತು ಚಾಕಲೇಟ್ ಗಿಂತ ಹೆಚ್ಚು ಅಪಾಯಕಾರಿ. ಇದು ವೇಗವಾಗಿ ಗ್ಲುಕೋಸ್ ಅನ್ನು ರಕ್ತದಲ್ಲಿ ಬಿಡುಗಡೆ ಮಾಡಿ ಬೀಟಾ ಜೀವಕೋಶಗಳಿಗೆ ಹೆಚ್ಚು ಹಾನಿಕರವಾಗಿದ್ದು, ಇನ್ಸುಲಿನ್ ನ ಉತ್ಪತ್ತಿ ಕಡಿಮೆ ಮಾಡುತ್ತದೆ.ಆದರೆ ಕ್ಯಾರೆಟ್ ನಂತಹ ನಾರಿನ ಅಂಶವನ್ನು ಹೊಂದಿ ಇದರಲ್ಲಿ ಗ್ಲೈಕೋರಿಕ್ ಇಂಡೆಕ್ಸ್ ಇರುತ್ತದೆ ಇವುಗಳಲ್ಲಿ ಜೀರ್ಣವಾಗಬಹುದಾದ ಶರ್ಕರ ವಿದಿಗಳಷ್ಟಾದಿಗಳ ಪ್ರಮಾಣ ಬಹಳ ಕಡಿಮೆ ಆಗಿದೆ. ಇದರಿಂದ ಬೀಟಾ ಜೀವಕೋಶಗಳಿಗೆ ಹಾನಿ ಇಲ್ಲ.
ನಾನು ಆಹಾರ ಪದಾರ್ಥಗಳಲ್ಲಿ ಅಪಾಯಕಾರಿ ಗ್ಲುಕೋಸ್ ಪ್ರಮಾಣ ಕಡಿಮೆ ಇದೆ.ನಾನು ಆಹಾರಗಳಾದ ಸೊಪ್ಪು ತರಕಾರಿ, ಗೆಡ್ಡೆಕೋಸು ಹೆಚ್ಚು ಸೇವಿಸಿ.
ಹಾಗಲಕಾಯಿ, ನೇರಳೆ ಹಣ್ಣು, ಮೆಂತ್ಯ, ಬೆಳ್ಳುಳ್ಳಿ,ಬೇವು ಇದರ ಸೇವನೆ ನೈಸರ್ಗಿಕವಾದ ಮಧುಮೇಹಕ್ಕೆ ಔಷಧಿ. ಇದನ್ನು ಆಗಾಗ ಸೇವಿಸುತ್ತಿದ್ದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಆಗುತ್ತದೆ. ನಾವು ಹಬ್ಬಗಳ ದಿನದಲ್ಲಿ ಸಕ್ಕರೆ ಯುಕ್ತ ಆಹಾರ ಹೆಚ್ಚು ಸೇವಿಸಿದರೂ ಸಹ ಈ ಹಾಗಲಕಾಯಿ, ಬೇವು ಸೇವನೆಯು ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಅಗಸೆ ಬೀಜ ಸೇವಿಸುವುದರಿಂದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ತೊಡಕನ್ನು ನಿವಾರಿಸಿ,ಸುಲಭ ರಕ್ತ ಹರಿಯುವಂತೆ ಮಾಡುತ್ತದೆ. ಇದರಿಂದ ದೇಹದ ಎಲ್ಲಾ ಭಾಗಗಳಿಗೂ ರಕ್ತವನ್ನು ಅದರಲ್ಲಿರುವ ಗ್ಲುಕೋಸ್ ಅನ್ನು ಹಂಚ್ಚುವುದರಿಂದ ಸಕ್ಕರೆ ಪ್ರಮಾಣ ರಕ್ತದಲ್ಲಿ ತಗ್ಗುತ್ತದೆ ಇದು ಹೃದಯವಾದಿ ರಕ್ತದೊತ್ತಡ, ಕ್ಯಾನ್ಸರ್ ಅನ್ನೂ ಸಹ ತಡೆಗಟ್ಟುತ್ತದೆ.
ದಿನನಿತ್ಯದ ಆಹಾರದಲ್ಲಿ ಗೈ ಕಾಮಿಕ್ ಇಂಡೆಕ್ಸ್ ಗ್ಲೂಕೋಸ್ ಪ್ರಮಾಣ ಶೇಕಡವಾರು ಕೆಂಪು ಆಲೂಗೆಡ್ಡೆ 91, ಅವಲಕ್ಕಿ 82,ಬ್ರೆಡ್ ಬಾಳೆಹಣ್ಣು 55, ಚಾಕಲೇಟ್ 49,ಓಟ್ಸ್ 49, ದ್ರಾಕ್ಷಿ ರಸ 48, ಸೇಬು 38, ಹಾಲು 27,ದ್ರಾಕ್ಷಿಹಣ್ಣು 25.
ಇದು ಸಾಮಾನ್ಯವಾಗಿ ಶ್ರೀಮಂತ ವ್ಯಾಧಿ ಇದು ವ್ಯಾಯಾಮ ಮಾಡದೆ ಕೂಳಿತಲ್ಲೇ ಕುಳಿತು ಕೊಳ್ಳುವ ಸುಖ ವರ್ಗದವರಿಗೆ, ಮಾನಚಿಕವಾಗಿ ಶ್ರಮಿಸುವ ಬುದ್ಧಿಜೀವಿಗಳಿಗೆ ಈ ವ್ಯಾಧಿ ಹೆಚ್ಚು ಬರುತ್ತದೆ.ಆದ್ದರಿಂದ ಇವರಿಗೆ ವ್ಯಾಯಾಮ ಅವಶ್ಯಕ ಅಥವಾ ಹೆಚ್ಚು ನಡೆಯುವುದರಿಂದ ರಕ್ತಚಲನೆ ದೇಹದಾದ್ಯಂತವಾಗಿ ಸಕ್ಕರೆ ರಕ್ತದಲ್ಲಿ ಸೇರುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಗ್ಲುಕೋಸ್ ನಲ್ಲಿ ಆಮ್ಲಜನಕವಿರುತ್ತದೆ.ನಾವು ಹೆಚ್ಚು ವ್ಯಾಯಾಮ ಅಥವಾ ಕೆಲಸ ಮಾಡದಷ್ಟು ನಮ್ಮ ದೇಹದ ಅಂಗಾಂಗಗಳಿಗೆ ಹೆಚ್ಚು ಆಮ್ಲಜನಕ ಬೇಕಾಗುತ್ತದೆ. ಆಗ ನಾವು ಸೇವಿಸುವ ಗಾಳಿ ಉಸಿರಾಟದಲ್ಲಿ ಆಮ್ಲಜನಕವು ಸಾಕಷ್ಟು ಪಡೆಯದೇ ಇದ್ದಾಗ ದೇಹವು ನಮ್ಮ ರಕ್ತದಲ್ಲಿರುವ ಗ್ಲೂಕೋಸ್ ನಲ್ಲಿರುವ ಆಮ್ಲಜನಕವನ್ನು ಪಡೆಯಲಾರಂಭಿಸುತ್ತದೆ.ಇದರಿಂದ ರಕ್ತದಲ್ಲಿರುವ ಗ್ಲುಕೋಸ್ ಪ್ರಮಾಣ ಕಡಿಮೆ ಕ್ರಮೇಣ ಕಡಿಮೆಯಾಗುತ್ತದೆ ಆದ್ದರಿಂದ ವ್ಯಾಯಾಮ ಅಥವಾ ನಡಿಗೆ ಅವಶ್ಯಕ.ಊಟದ ನಂತರ ತಕ್ಷಣ ಸಕ್ಕರೆ ಪ್ರಮಾಣ ರಕ್ತದಲ್ಲಿ ಏರಿಕೆ ಯಾದರೆ ಅಂತಹವರಿಗೆ ಮುಂದೆ ಈ ವ್ಯಾಧಿ ಬರುತ್ತದೆ ವ್ಯಾಯಾಮ ನಡಿಗೆಯ ಅವಶ್ಯಕ. ಊಟದ ನಂತರ ತಕ್ಷಣ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆಯಾದರೆ ಅಂತಹವರಿಗೆ ಮುಂದೆ ಈ ವ್ಯಾಧಿ ಬರುತ್ತದೆ. ವ್ಯಾಯಾಮ ಅಥವಾ ನಡಿಗೆಯು ಈ ರೀತಿಯಲ್ಲಿ ಊಟದ ನಂತರ ತಕ್ಷಣ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆಯಾಗದು ಆದ್ದರಿಂದ 10,000 ಹೆಜ್ಜೆ ನಡಿಗೆ ಈ ವ್ಯಾದಿಯಿಂದ ಪಾರು ಮಾಡುತ್ತದೆ.