ಮನೆ ರಾಜಕೀಯ ಕಾಂಗ್ರೆಸ್ ಸೇರಿದ್ರೆ 50 ಸಾವಿರ ಲೀಡ್’ನಲ್ಲಿ ಗೆಲ್ತೀನಿ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಆಡಿಯೋ ವೈರಲ್

ಕಾಂಗ್ರೆಸ್ ಸೇರಿದ್ರೆ 50 ಸಾವಿರ ಲೀಡ್’ನಲ್ಲಿ ಗೆಲ್ತೀನಿ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಆಡಿಯೋ ವೈರಲ್

0

ಹಾಸನ: ಅರಸೀಕೆರೆ ಜೆಡಿಎಸ್​ ಶಾಸಕ‌ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್​ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕಾರ್ಯಕರ್ತರೊಬ್ಬರ ಜೊತೆ ಮಾತನಾಡಿರುವ ಶಾಸಕರು, ನಾನು ಕಾಂಗ್ರೆಸ್ ಸೇರಿದ್ರೆ ಐವತ್ತು ಸಾವಿರ ಲೀಡ್’ನಲ್ಲಿ ಗೆಲ್ತಿನಿ. ಯಾರೇ ಬಂದರೂ ಗೆಲ್ಲೋದು ಮಾತ್ರ ನಾನೇ ಎಂದಿದ್ದಾರೆ.

ಶಾಸಕ ಶಿವಲಿಂಗೇಗೌಡ ಕಳೆದ ಒಂದು ವರ್ಷದಿಂದ ಜೆಡಿಎಸ್​ನಿಂದ  ದೂರ ಉಳಿದಿದ್ದಾರೆ. ಶಿವಲಿಂಗೇಗೌಡ ಕಾಂಗ್ರೆಸ್​ ಸೇರ್ತಾರೆ ಎಂಬ ಬಗ್ಗೆ ವದಂತಿ ಕೂಡ ಈ ಹಿಂದೆ ಹರಡಿತ್ತು. ಇದೀಗ ತಾವು ಕಾಂಗ್ರೆಸ್ ಸೇರಿದ್ರೆ ದೊಡ್ಡ ಮಟ್ಟದ ಲೀಡಲ್ಲಿ ಗೆಲ್ತಿನಿ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.