ಮನೆ ರಾಜಕೀಯ ವಿಧಾನಪರಿಷತ್ ಚುನಾವಣೆ ಮತ ಎಣಿಕೆ: ಇಳಕಲ್ ನಿಂದ 5 ಮತ ಹೆಚ್ಚಿಗೆ

ವಿಧಾನಪರಿಷತ್ ಚುನಾವಣೆ ಮತ ಎಣಿಕೆ: ಇಳಕಲ್ ನಿಂದ 5 ಮತ ಹೆಚ್ಚಿಗೆ

0

ಬೆಳಗಾವಿ(Belagavi): ವಾಯವ್ಯ ಶಿಕ್ಷಕರ ಕ್ಷೇತ್ರದ  ಚುನಾವಣೆ  ಮತಪೆಟ್ಟಿಗೆ ಎಣಿಕೆ ಸಂದರ್ಭದಲ್ಲಿ ಬಾಲಕೋಟೆ ಜಿಲ್ಲೆಯ ಇಳಕಲ್ ಮತಗಟ್ಟೆಯಿಂದ ತರಲಾದ ಮತಪೆಟ್ಟಿಗೆಯಲ್ಲಿ ಐದು ಮತಗಳು ಹೆಚ್ಚಿಗೆ  ಬಂದಿದೆ.

ಈ ಬಗ್ಗೆ ಪಕ್ಷೇತರ ಅಭ್ಯರ್ಥಿ ಎನ್.ಬಿ.ಬನ್ನೂರ ಚುನಾವಣಾಧಿಕಾರಿಗೆ ಆಕ್ಷೇಪ ಸಲ್ಲಿಸಿದ್ದರಿಂದ, ಆ ಪೆಟ್ಟಿಗೆಯನ್ನು ಪರಿಶೀಲನೆಗೆ ಪ್ರತ್ಯೇಕವಾಗಿ ಇಡಲಾಯಿತು.

ಮಾಧ್ಯಮದವರೊಂದಿಗೆ ಮಾತನಾಡಿದ ಎನ್.ಬಿ.ಬನ್ನೂರ, ಇಳಕಲ್ ಪಟ್ಟಣದ ಮತಕೇಂದ್ರದಲ್ಲಿ 71 ಮತಗಳು ಚಲಾವಣೆಯಾಗಿವೆ ಎಂದು ನಮೂದಿಸಲಾಗಿದೆ. ಆದರೆ, ಮತಪೆಟ್ಟಿಗೆಯಲ್ಲಿ 76 ಮತಪತ್ರಗಳು ಇವೆ. ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರ ಪರವಾದ ಮತಗಳು ಇರಬಹುದು ಎಂಬ ಸಂದೇಹವಿದೆ. ಹೀಗಾಗಿ, ಆಕ್ಷೇಪ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಕೆಲವೊಮ್ಮೆ ಮತಪತ್ರಗಳ ಸಂಖ್ಯೆ ಬರೆಯುವ ಸಿಬ್ಬಂದಿ ಕೂಡ ತಪ್ಪು ಮಾಡಿರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಹೆಚ್ಚು- ಕಡಿಮೆ ಕಂಡುಬಂದಲ್ಲ ಎಲ್ಲ ಅಭ್ಯರ್ಥಿಗಳೂ ಏಕ ಮನಸ್ಸಿನಿಂದ ತಕರಾರು ನೀಡಿದ್ದೇವೆ. ಒಂದೇ ಒಂದು ಮತ ವ್ಯತ್ಯಾಸ ಬಂದರೂ ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಕೊನೆಯಲ್ಲಿ ಈ ಗೊಂದಲ ಬಗೆಹರಿಸುವುದಾಗಿ ಚುನಾವಣಾಧಿಕಾರಿ ತಿಳಿಸಿದ್ದಾರೆ ಎಂದೂ  ಹೇಳಿದರು.