ಧಾರವಾಡ : ಹಣ ಅಪನಗದೀಕರಣದ ವೇಳೆ ಹಳೆಯ ನೋಟುಗಳ ಬದಲಿಸುವಲ್ಲಿ ಅಕ್ರಮವೆಸಗಿದ ಆರೋಪ ಸಾಬೀತಾದ ಬ್ಯಾಂಕ್ ಕ್ಯಾಶಿಯರ್ ಗೆ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಜೈಲ್ ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿದೆ.
ಕಲಬುರ್ಗಿ ಯ ನೆಹರು ಗಂಜ್ ನ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದನ ಶಾಖೆಯ ಮುಖ್ಯ ಕ್ಯಾಶೀಯರ್ ಆಗಿದ್ದ ಶ್ರೀಹರಿ ಕಾಮನಕರ್ ಅವರೇ ಶಿಕ್ಷೆಗೆ ಒಳಗಾದ ಕ್ಯಾಶಿಯರ್ .
2017 ರಲ್ಲಿ ಬೆಂಗಳೂರು ಸಿಬಿಐ, ಎಸಿಬಿ ವತಿಂದ ಇವರ ವಿರುದ್ದ ಧಾರವಾಡದ ಸಿಬಿಐ ಕೋಟ್೯ ನಲ್ಲಿ ದೂರು ದಾಖಲಾಗಿತ್ತು. ತಮ್ಮ ಹುದ್ದೆಯನ್ನು ದುರುಪಯೋಗ ಮಾಡಿಕೊಂಡು ಹಳೆಯ ನೋಟುಗಳನ್ನು ಆರ್ ಬಿಐ ನಿಯಮಗಳನ್ನು ಗಾಳಿಗೆ ತೂರಿ ಬದಲಿಸಿ, ಅಕ್ರಮ ಎಸೆಗಿದ್ದು ಸಾಕ್ಷಾಧಾರಗಳಿಂದ ಸಾಬೀತಾಗಿದೆ.
ಅತ್ಯಂತ ಕಡಿಮೆ ಅವಧಿಯಲ್ಲಿ 1.9 ಕೋಟಿ ರೂ. ಮೌಲ್ಯದ ಹಳೆ ನೋಟುಗಳನ್ನು ಅಕ್ರಮವಾಗಿ ಬದಲಾವಣೆ ಮಾಡಲಾಗಿತ್ತು. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎನ್. ಸುಬ್ರಹ್ಮಣ್ಯ ಅವರು ಶಿಕ್ಷೆ ಪ್ರಕಟಿಸಿದ್ದಾರೆ.