ಮನೆ ಸುದ್ದಿ ಜಾಲ ಅಕ್ರಮ ಕಲ್ಲು ಗಣಿಗಾರಿಕೆ; ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ..!

ಅಕ್ರಮ ಕಲ್ಲು ಗಣಿಗಾರಿಕೆ; ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ..!

0

ಯಾದಗಿರಿ : ಜಿಲ್ಲೆಯಲ್ಲಿ ಪರವಾನಗಿ ಪಡೆಯದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸುಮಾರು ವರ್ಷಗಳಿಂದ ತೆರಿಗೆ ಪಾವತಿಸಿದೇ ಬಿಳಿ ಕಲ್ಲಿನ ಗಣಿಗಾರಿಕೆ ನಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳ ಹಾಗೂ ಅಣಬಿ ಗ್ರಾಮದಲ್ಲಿ ಅಕ್ರಮ ದಂಧೆಕೋರರು ಭೂಗರ್ಭ ಅಗೆದು ಭಾರಿ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಜೊತೆಗೆ ಯಾವುದೇ ಪರವಾನಗಿ ಪಡೆಯದೇ ತೆರಿಗೆ ಪಾವತಿಸಿದೇ ಅನಧಿಕೃತವಾಗಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ರಸ್ತೆ ಪಕ್ಕದಲ್ಲಿಯೇ ಜೆಸಿಬಿ ಬಳಕೆ ಮಾಡಿ ನೂರಾರು ಅಡಿ ಭೂಗರ್ಭ ಅಗೆದು ಗಣಿಗಾರಿಕೆ ಮಾಡುತ್ತಿದ್ದರೆ, ಇತ್ತ ಅಕ್ರಮ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಸೈಲೆಂಟ್ ಆಗಿದ್ದಾರೆ. ಇನ್ನೂ ರಸ್ತೆ ಮಾರ್ಗದಲ್ಲಿ ನಿತ್ಯವು ನೂರಾರು ವಾಹನಗಳು ಸಂಚರಿಸುತ್ತಿದ್ದು, ಅಪ್ಪಿ-ತಪ್ಪಿ ಅನಾಹುತವಾದರೂ ಕೂಡ ಜೀವಕ್ಕೆ ಕಂಟಕ ಎದುರಾಗುತ್ತದೆ.

ಈ ಅಕ್ರಮ ಗಣಿಗಾರಿಕೆಯಿಂದ ಲಕ್ಷಾಂತರ ರೂ. ವಹಿವಾಟು ನಡೆಯುತ್ತಿದ್ದು, ಕಲಬುರಗಿ, ಯಾದಗಿರಿ ಸೇರಿದಂತೆ ವಿವಿಧ ಭಾಗಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಕಲ್ಲುಗಳನ್ನು ಮನೆ ನಿರ್ಮಾಣ, ಕಟ್ಟಡ ಹಾಗೂ ಇನ್ನಿತರ ಕಟ್ಟಡಕ್ಕೆ ಕಲ್ಲುಗಳ ಬಳಕೆ ಮಾಡಲಾಗುತ್ತಿದೆ. ಈ ಸಂಬಂಧ ತಹಶೀಲ್ದಾರ್ ಸಿದ್ಧಾರೂಢ ಮಾಹಿತಿ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.