ಮನೆ ರಾಜ್ಯ ನಿಯಮಾನುಸಾರ ಆಗದ ವರ್ಗಾವಣೆ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಪೊಲೀಸರು

ನಿಯಮಾನುಸಾರ ಆಗದ ವರ್ಗಾವಣೆ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಪೊಲೀಸರು

0

ವಿಜಯಪುರ: ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯ ವರ್ಗದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ನಿಯಮಾನುಸಾರ ವರ್ಗಾವಣೆ ಮಾಡುತ್ತಿಲ್ಲವೆಂದು ಆರೋಪಿಸಿ ವಿಜಯಪುರ ಜಿಲ್ಲೆಯ ಪೊಲೀಸರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ.

ವಿಜಯಪುರ ಜಿಲ್ಲೆಯ ಪೊಲೀಸರು ದಯಾಮರಣ ಕೋರಿ ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿ ಇರುವ ಪತ್ರ ಬರೆಯಲು ಪ್ರಮುಖ ಕಾರಣ ವರ್ಗಾವಣೆಯ ಸಮಸ್ಯೆ.

ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರು, ಇಲಾಖೆಯಲ್ಲಿ ಸಾಮಾನ್ಯ ವರ್ಗದವರಿಗೆ ಕಳೆದ ನಾಲ್ಕು ವರ್ಷಗಳಿಂದ ವರ್ಗಾವಣೆ ಮಾಡಿಲ್ಲ ಎಂದು ದೂರಿದ್ದಾರೆ.

ಮಾನವ ಸಂಪನ್ಮೂಲ ವಿಭಾಗದ ಡಿಜಿ ಪೊಲೀಸರ ವರ್ಗಾವಣೆ ವಿಷಯವಾಗಿ HRM-3 (1)270/2022-23 ಹಾಗೂ HD/93/PPS/2022 ರಂತೆ ಆದೇಶ ನೀಡಿದ್ದಾರೆ. ಪಾರ್ದರ್ಶಕ ವರ್ಗಾವಣೆಗಾಗಿ ಪೋರ್ಟಲ್ ಪ್ರಕಾರ ಅರ್ಹ ಸಿಬ್ಬಂದಿಗಳಿಗೆ ವರ್ಗಾವಣೆ ಆದೇಶ ಮಾಡುವಂತೆ ತಿಳಿಸಿದ್ದಾರೆ.

ಇದರನ್ವಯ ವಿಜಯಪುರ ಜಿಲ್ಲೆಯ ವರ್ಗಾವಣೆ ಅರ್ಹತೆ ಇರುವ ನಾವು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದು, ವರ್ಷವಾದರೂ ವರ್ಗಾವಣೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರ್ಗಾವಣೆ ಕೋರಿರುವ ಬಹುತೇಕ ಪೊಲೀಸರು ಅನಾರೋಗ್ಯ ಪೀಡಿತ, ವಿಕಲಾಂಗ ಪೋಷಕರಿದ್ದಾರೆ. ಬಹುತೇಕ ಪೊಲೀಸರ ಪ್ರಕರಣದಲ್ಲಿ ಕುಟುಂಬದ ಒಬ್ಬನೇ ಮಗ ಇದ್ದೇವೆ. ಪರಿಸ್ಥಿತಿ ಮನವರಿಕೆ ಮಾಡಿದರೂ ವರ್ಗಾವಣೆ ಮಾಡಿಲ್ಲ ಎಂದು ದೂರಿದ್ದಾರೆ.

ಗೃಹ ಸಚಿವರು ಪತಿ‌-ಪತ್ನಿ, ನಿವೃತ್ತ ಯೋಧರ ವರ್ಗಾವಣೆಗೆ ಆದೇಶ ಮಾಡಿದ್ದಾರೆ. ಇದೇ ರೀತಿ ಸಾಮಾನ್ಯ ವರ್ಗದ ಪೊಲೀಸರಿಗೂ ವರ್ಗಾವಣೆ ಆದೇಶ ನೀಡಬೇಕು.  ಇಲ್ಲವೇ ನಮ್ಮ ಪೋಷಕರಿಗೆ ನಮಗೆ ದಯಾಮರಣ ನೀಡಬೇಕೆಂದು ನೊಂದ ಪೊಲೀಸರು ರಾಷ್ಟ್ರಪತಿ, ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.