ಮನೆ ಸ್ಥಳೀಯ ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ: ಪತಿ ವಿಡಿಯೋ ಮಾಡಲು ಹೋದ ಪತ್ನಿಗೆ ಕಾರಿನಲ್ಲಿ ಡಿಕ್ಕಿ ಹೊಡೆದ ಪತಿ

ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ: ಪತಿ ವಿಡಿಯೋ ಮಾಡಲು ಹೋದ ಪತ್ನಿಗೆ ಕಾರಿನಲ್ಲಿ ಡಿಕ್ಕಿ ಹೊಡೆದ ಪತಿ

0

ಮೈಸೂರು: ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡ ಪತಿಯ ವಿಡಿಯೋ ತೆಗೆಯಲು ಹೋದ ಪತ್ನಿ ಮೇಲೆ ಕಾರಿನಿಂದ ಢಿಕ್ಕಿ ಹೊಡೆದು ಗಾಯಗೊಳಿಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪತಿ ಹಾಗೂ ಪ್ರಿಯಕರಳ ಮೇಲೆ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೆಸಿ ಲೇಔಟ್ ನಿವಾಸಿಯಾದ ಪತ್ನಿ ವಿಜಯನಗರದ ಸುದೀಪ್ ಎಂಬುವರನ್ನ ವಿವಾಹವಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಸುದೀಪ್ ಪರಸ್ತ್ರೀಯೊಂದಿಗೆ ಅಕ್ರಮ ಸಂಭಂಧ ಬೆಳೆಸಿದ್ದಾರೆ. ಈ ಕುರಿತಂತೆ ಪತ್ನಿ ಸುದೀಪ್ ವಿರುದ್ದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ಹಾಗೂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೀಗಿದ್ದೂ ಇಬ್ಬರ ಅಕ್ರಮ ಸಂಭಂಧ ಮುಂದುವರೆದಿದೆ.

ವಿಜಯನಗರ 3 ನೇ ಹಂತದ ಮನೆಯೊಂದರಲ್ಲಿ ಪತಿ ಸುದೀಪ್ ತನ್ನ ಪ್ರಿಯಕರಳೊಂದಿಗೆ ಇದ್ದಾರೆಂಬ ಮಾಹಿತಿ ಅರಿತ ಪತ್ನಿ ಸ್ಥಳಕ್ಕೆ ಧಾವಿಸಿದ್ದಾರೆ. ಅಕ್ರಮ ಜೋಡಿಗಳು ಕಾರಿನಲ್ಲಿ ಕುಳಿತಿರುವ ದೃಶ್ಯ ಪತ್ನಿಗೆ ಕಂಡು ಬಂದಿದೆ. ಕೂಡಲೇ ವಿಡಿಯೋ ತೆಗೆಯಲು ಪತ್ನಿ ಮುಂದಾಗಿದ್ದಾರೆ. ಈ ವೇಳೆ ಸುದೀಪ್ ಕಾರಿನಿಂದ ಪತ್ನಿಗೆ ಢಿಕ್ಕಿ ಹೊಡೆದು ಗಾಯಗೊಳಿಸಿ ಜಾತಿ ನಿಂದನೆ ಮಾಡಿ ಪ್ರಿಯಕರಳ ಜೊತೆ ಎಸ್ಕೇಪ್ ಆಗಿದ್ದಾರೆ.

ಗಾಯಗೊಂಡ ಪತ್ನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂದ ಗಾಯಗೊಂಡ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಪ್ರಿಯಕರಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹಿಂದಿನ ಲೇಖನಸದರನ್ ಸ್ಟಾರ್ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದು ಹಣ ಪಾವತಿಸದೆ ವಂಚಿಸಿದ ಗ್ರಾಹಕ: ದೂರು ದಾಖಲು
ಮುಂದಿನ ಲೇಖನಹೂಡಿಕೆ ಹಣಕ್ಕೆ ಹೆಚ್ಚು ಲಾಭ ನೀಡುವ ಆಮಿಷವೊಡ್ಡಿ 7 ಲಕ್ಷ ವಂಚನೆ: ದೂರು ದಾಖಲು