ಬೆಂಗಳೂರು: ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಮಾಹಿತಿ ನೀಡಿದರು.
ಈ ಕುರಿತು ಇಂದು ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ನಾಳೆಯಿಂದ ಅನ್ನಭಾಗ್ಯ ಯೋಜನೆ ಜಾರಿಯಾಗಲಿದೆ. ಅಕೌಂಟ್ ಇಲ್ಲದವರು ಅಕೌಂಟ್ ಮಾಡಿಸಬೇಕು. ನಾಳೆಯಿಂದ 5 ಕೆಜಿ ಅಕ್ಕಿ ಜೊತೆ ಹಣ ಕೊಡುತ್ತೇವೆ. ಒಬ್ಬರಿಗೆ 170 ರೂ ಹಾಕುತ್ತೇವೆ. ಕುಟುಂಬ ಸದಸ್ಯರ ಅಕೌಂಟ್ ಗೆ ಹಣ ಹಾಕುತ್ತೇವೆ ಎಂದರು.
ನಾಳೆಯಿಂದಲೇ 8 ಕೆಜಿ ಅಕ್ಕಿ 2 ಕೆಜಿ ರಾಗಿ ನೀಡಲು ತೀರ್ಮಾನ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜೋಳ ನೀಡಲು ಕ್ರಮ ವಹಿಸಲಾಗುತ್ತದೆ. ಅಕ್ಕಿ ನೀಡುವ ಬಗ್ಗೆ ಸಮಯ ಹೇಳಲು ಆಗಲ್ಲ. ಅಕ್ಕಿ ಸಂಗ್ರಹಿಸಿ ಶೀಘ್ರವೇ ಹಂಚಿಕೆ ಮಾಡುತ್ತೇವೆ ಎಂದು ಕೆ.ಎಚ್ ಮುನಿಯಪ್ಪ ತಿಳಿಸಿದರು.