ಮನೆ ಸ್ಥಳೀಯ ಯುವಜನರ ಜೀವನಕ್ಕೆ ಧೈರ್ಯವನ್ನು ತುಂಬಲು ಯುವನಿಧಿ ಯೋಜನೆ ಜಾರಿ: ಡಾ. ಕೆ.ವಿ ರಾಜೇಂದ್ರ

ಯುವಜನರ ಜೀವನಕ್ಕೆ ಧೈರ್ಯವನ್ನು ತುಂಬಲು ಯುವನಿಧಿ ಯೋಜನೆ ಜಾರಿ: ಡಾ. ಕೆ.ವಿ ರಾಜೇಂದ್ರ

0

ಮೈಸೂರು: ನಿರುದ್ಯೋಗ ಪದವೀಧರರ ಕನಸನ್ನು ಸಾಕಾರಗೊಳಿಸಲು ಹಾಗೂ ಅವರ ಜೀವನಕ್ಕೆ ಧೈರ್ಯವನ್ನು ತುಂಬಲು ಯುವನಿಧಿ ಯೋಜನೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಅವರು ಹೇಳಿದರು.

ಇಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನಡೆದ ಸ್ವಾಮಿವಿವೇಕಾನಂದರ ಜಯಂತಿ ಹಾಗೂ ಯುವನಿಧಿ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟೀಯ ಯುವದಿನದಂದು ಜಾರಿಯಾಗುತ್ತಿರುವ ಯುವನಿಧಿ ಯೋಜನೆಯಡಿಯಲ್ಲಿ ನಿರುದ್ಯೋಗ ಯುವಜನರಿಗೆ ಪದವಿಧರರಿಗೆ ರೂ.3000 ಹಾಗೂ ಡಿಪ್ಲೋಮಾ ಮಾಡಿದವರಿಗೆ ರೂ.1500 ಗಳನ್ನು ನೀಡಲಾಗುತ್ತಿದೆ. ಈ ಹಣವನ್ನು ಯಾವುದೇ ರೀತಿಯ ದುರುಪಯೋಗ ಪಡಿಸಿಕೊಳ್ಳದೆ ತಮ್ಮ ಮುಂದಿನ ವಿದ್ಯಾಭ್ಯಾಸ ಇಲ್ಲವೇ ಸ್ವಯಂ ಉದ್ಯೋಗಕ್ಕಾಗಿ ಬಳಸಿಕೊಳ್ಳಬೇಕು. ಸಮಯ ಎಂಬುದು ಕ್ಷಣಾರ್ಧದಲ್ಲಿ ಕಳೆದುಹೋಗುತ್ತದೆ ಹಾಗಾಗಿ ಇದನ್ನು ನಿಮ್ಮ ಗುರಿ ತಲುಪಲು ಒಂದು  ಸಹಾಯವಾಗಿ ಬಳಸಿಕೊಂಡು ಇದರ ಪ್ರಯೋಜನ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡಿ ಸಾಮಾಜಿಕ ಕಳಕಳಿ ಇರುವ ಸ್ವಾವಲಂಬಿ ಯುವಜನರಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಪ್ರಸ್ತುತ ಡ್ರಗ್ಸ್ ಎಂಬುದು ಎಲ್ಲಾ ಕಾಲೇಜುಗಳಲ್ಲೂ ಅವರಿಸುತ್ತಿದೆ. ಹೆಣ್ಣು ಗಂಡು ಎಂಬ ಬೇಧವಿಲ್ಲದೆ ಎಲ್ಲರೂ ಅದಕ್ಕೆ ದಾಸರಗುತ್ತಿದ್ದಾರೆ. ಹೆಣ್ಣಾಗಲಿ ಗಂಡಾಗಲಿ ಈ ದುಶ್ಚಟಗಳಿಗೆ   ಗುರಿಯಾಗದಂತೆ ನೋಡಿಕೊಂಡು ಡ್ರಗ್ಸ್ ಮುಕ್ತ ಕ್ಯಾಂಪಸ್ ಮಾಡಲು ಮುಂದಾಗಬೇಕು ಎಂದರು.

ಯುವಜನರಿಗೆ ಮಾದರಿಯಾಗಿರುವ ವಿವೇಕಾನಂದರ ದಿನದಂದು ಎಲ್ಲಾ ಯುವಜನರು ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಒಳ್ಳೆಯ ಮಾರ್ಗದಲ್ಲಿ ನಡೆದು ಇತರರಿಗೆ ಮಾದರಿಯಾಗಬೇಕು ಎಂದು ಪ್ರೋತ್ಸಾಹದ ಮಾತುಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಭಿವೃದ್ಧಿ ಅಧಿಕಾರಿ ಕೆ. ನಾರಾಯಣ ಮೂರ್ತಿ, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ಎಚ್.ಎಂ ಮಂಜುನಾಥ್, ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ ಅಬ್ದುಲ್ ರಹಿಮಾನ್ ಎಂ ಹಾಗೂ ಇತರರು ಉಪಸ್ಥಿತರಿದ್ದರು.

ಹಿಂದಿನ ಲೇಖನಹುಣಸೂರು: ಬೆಳ್ಳುಳ್ಳಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿ ಬಂಧನ
ಮುಂದಿನ ಲೇಖನವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣ ಸಿಬಿಗೆ ವರ್ಗ