ಮನೆ ರಾಜ್ಯ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವ ಮೂಲಕ ಸಮಾಜದ ಸುಧಾರಣೆ ಸಾದ್ಯ: ಎಲ್ ನಾಗೇಂದ್ರ

ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವ ಮೂಲಕ ಸಮಾಜದ ಸುಧಾರಣೆ ಸಾದ್ಯ: ಎಲ್ ನಾಗೇಂದ್ರ

0

ಮೈಸೂರು(Mysuru):  ನಮ್ಮ ಸಮಾಜ ಏಳಿಗೆ ಆಗಬೇಕೆಂದರೆ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ತುಂಬಾ ಮುಖ್ಯ ಆಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದು ಚಾಮರಾಜ ಕ್ಷೇತ್ರದ ವಿಧಾನಸಭಾ ಶಾಸಕ ಎಲ್.ನಾಗೇಂದ್ರ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಜಯಂತೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕಲಾಮಂದಿರದಲ್ಲಿ ವಿಶ್ವಕರ್ಮ ಜಯಂತಿ 2022ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಈ ಸಮಾಜದ ಏಳಿಗೆಗೋಸ್ಕರ ನಾವೆಲ್ಲರೂ ಸಹ ಶ್ರಮಿಸೋಣ ಎಂದು ತಿಳಿಸಿದರು.
 ನಂತರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ ಅವರು ಮಾತನಾಡಿ ಯಜ್ಞ ಯಾಗಾದಿಗಳನ್ನು ವಿಶ್ವಕರ್ಮರೆ ಸೃಷ್ಟಿಸಿದರು ಎಂಬ ಪ್ರತಿತಿಯಿದೆ. ಶಿಲ್ಪದಲ್ಲಿ ದೈವ ಶಿಲ್ಪ, ಲೌಕಿಕ ಶಿಲ್ಪ ಎಂಬ ಎರಡು ವಿಧಗಳಿವೆ, ವಾಲ್ಮೀಕಿ ರಾಮಾಯಣದ ಪ್ರಕಾರ ವಿಶ್ವಕರ್ಮ ಸ್ವರ್ಗದಲ್ಲಿ ಬ್ರಹ್ಮದೇವರಿಗಾಗಿ ಸರ್ವ ರತ್ನ ಖಚಿತ ಪುಷ್ಪಕ ವಿಮಾನವನ್ನು ರಚಿಸುತ್ತಾರೆ ಎಂದು ಹೇಳಿದರು.
ವಿಶ್ವಕರ್ಮನು ಮೊಟ್ಟ ಮೊದಲ ದೂರದರ್ಶಕವನ್ನು ರೂಪಿಸಿದವರು. ಮುಂದೆ ವಿಜ್ಞಾನಿಗಳು ದೂರದರ್ಶಕವನ್ನು ಸುಧಾರಿತ ಮಾದರಿಯಲ್ಲಿ ತಯಾರಿಸಿದರು. ಕೃಷ್ಣ ದ್ವಾರಕ ನಗರ ನಿರ್ಮಾಣ ಮಾಡುವಾಗ, ಶಂಖ ಶಿವ ಮಂದಿರ ನಿರ್ಮಿಸುವಾಗ ವಿಶ್ವಕರ್ಮನನ್ನು ಜ್ಞಾನಿಸಿ ಪೂಜೆ ಮಾಡಿ ಸ್ತೋತ್ರ ಮಾಡುತ್ತಾರೆ. ತಾರಕ ನಗರವನ್ನು ಶ್ರೀ ಕೃಷ್ಣನು ಕನ್ಯಾಪರಿಕ್ರಮಣದಂದು ವಿಶ್ವಕರ್ಮ ನಿಂದ ಸ್ವೀಕರಿಸುತ್ತಾರೆ ಎಂಬ ಪ್ರತೀತಿ ಇದೆ ಎಂದು ತಿಳಿಸಿದರು.
ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಲೇಖಕರು ಹಾಗೂ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ.ಸಿ.ನಾಗಣ್ಣ ಅವರು ಮಾತನಾಡಿ ಕುಶಲಕರ್ಮಿಗಳಾದ ವಿಶ್ವಕರ್ಮರು ಸಮಾಜದ ಸ್ವಾಸ್ಥö್ಯ ಕಾಪಾಡುವುದರಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ. ಭಾರತೀಯ ಸಂಸ್ಕೃತಿ ಕಾಪಾಡುವಲ್ಲಿ ವಿಶ್ವಕರ್ಮರು ವಹಿಸಿರುವ ಪಾತ್ರ ಬಹಳ ದೊಡ್ಡದು ಎಂದು ತಿಳಿಸಿದರು.
 ಭಾರತದ ಹಿಂದೂ ಸಂಪ್ರದಾಯದ ದೇವಾಲಯಗಳಲ್ಲಿ ಮೂರ್ತಿ ಪೂಜೆಗೆ ಮೊದಲ ಆದ್ಯತೆ ಇದೆ ಮೂರ್ತಿ ಪೂಜೆ ತೆಗೆದುಹಾಕಿದರೆ ನಮ್ಮ ಸಂಸ್ಕೃತಿ ಚಹರೆ ಗುರುತುಗಳು ಅಳಿಸಿ ಹೋಗುತ್ತದೆ ಎಂದು ಹೇಳಿದರು.
 ರಾಜ ಮಹಾರಾಜರ ಧೀಮಂತ ಜನನಾಯಕರ ತದ್ರೂಪಗಳನ್ನು ಕೆತ್ತನೆ ಮಾಡಿ ಅವರ ನೆನಪು ಸಾರ್ವಜನಿಕ ಹೃದಯಗಳಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂತೆ ಮಾಡಿದವರು ವಿಶ್ವಕರ್ಮರು. ಒಟ್ಟು ಸಮಾಜದ ಜನಜೀವನದಲ್ಲಿ ಭಾಗವಾಗಿ ಹೋಗಿರುವಂತಹ ಒಂದು ಜನ ಸಮುದಾಯ ಇದಾಗಿದೆ ಎಂದು ತಿಳಿಸಿದರು.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷರಾದ ರಘು ಕೌಟಿಲ್ಯ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ್ , ನಗರ ಪಾಲಿಕೆಯ ಸದಸ್ಯರಾದ ರಮಣಿ, ವಿಶ್ವಕರ್ಮ ಸಮಾಜದ ಮುಖಂಡರಾದ ರಾಮಲಿಂಗ ಚಾರ್, ಶಾಂತಮ್ಮ, ನಾಗಮ್ಮ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.