ಇಸ್ಲಾಮಾಬಾದ್(Islamabad): ಹಂಗಾಮಿ ಪ್ರಧಾನ ಮಂತ್ರಿ ನೇಮಕವಾಗುವವರೆಗೂ ಇಮ್ರಾನ್ ಖಾನ್(Imran khan) ಪಾಕಿಸ್ತಾನದ (Pakisthan) ಪ್ರಧಾನ ಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಅಧ್ಯಕ್ಷ ಆರಿಫ್ ಅಲ್ವಿ (Arif alvi) ಸೋಮವಾರ ಮಾಹಿತಿ ನೀಡಿದ್ದಾರೆ.
ಹಂಗಾಮಿ ಪ್ರಧಾನ ಮಂತ್ರಿ ನೇಮಕವಾಗುವವರೆಗೂ ಹಾಲಿ ಪ್ರಧಾನ ಮಂತ್ರಿಯೇ ಕಚೇರಿ ಜವಾಬ್ದಾರಿಯನ್ನು ಮುಂದುವರೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಮುನ್ನ ಕ್ಯಾಬಿನೇಟ್ ಸೆಕ್ರೆಟರಿಯೇಟ್ ಹೊರಡಿಸಲಾದ ಪ್ರಕಟಣೆಯಲ್ಲಿ ಕೂಡಲೇ ಜಾರಿಯಾಗುವಂತೆ ಪ್ರಧಾನಿ ಕಾರ್ಯಾಲಯದ ಜವಾಬ್ದಾರಿಯನ್ನು ಇಮ್ರಾನ್ ಖಾನ್ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಲಾಗಿತ್ತು.
ಆದಾಗ್ಯೂ, ಸಂವಿಧಾನದ 94ನೇ ವಿಧಿ ಅನ್ವಯ, ಹಂಗಾಮಿ ಪ್ರಧಾನಿ ನೇಮಕವಾಗುವವರೆಗೂ ಪ್ರಧಾನಿ ತನ್ನ ಕಚೇರಿ ಜವಾಬ್ದಾರಿಯನ್ನು ಮುಂದುವರೆಸಬಹುದು ಎಂದು ರಾಷ್ಟ್ರಾಧ್ಯಕ್ಷರು ಹೇಳಬಹುದಾಗಿದೆ.
ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಉಪ ಸ್ಪೀಕರ್ ಖಾಸಿಂ ಸೂರಿ (Khasim suri) ತಿರಸ್ಕರಿಸಿದ ಕೂಡಲೇ ಪ್ರಧಾನಿ ಇಮ್ರಾನ್ ಖಾನ್ ಅವರ ಸಲಹೆ ಮೇರೆಗೆ ರಾಷ್ಟ್ರಾಧ್ಯಕ್ಷ ಆರಿಫ್ ಅಲ್ವಿ ಪಾಕಿಸ್ತಾನ ಸಂಸತ್ ನ್ನು ಭಾನುವಾರ ವಿಸರ್ಜಿಸಿದ್ದಾರೆ.