ಮನೆ ಅಪರಾಧ ಆಧಾರ್‌ನಲ್ಲಿ ಮಗುವಿನ ಹೆಸರು ‘ಮಧುವಿನ ಐದನೇ ಮಗು

ಆಧಾರ್‌ನಲ್ಲಿ ಮಗುವಿನ ಹೆಸರು ‘ಮಧುವಿನ ಐದನೇ ಮಗು

0

ಬದೌನ್(ಉತ್ತರ ಪ್ರದೇಶ) (Uttarpradesh): ಆಧಾರ್ ಕಾರ್ಡ್(Adhar card) ನಲ್ಲಿ ಮಗುವಿನ ಹೆಸರಿನ ಬದಲಾಗಿ  ಮಧುವಿನ ಐದನೇ ಮಗು(Baby five of madhu) ಎಂದು ನಮೂದಿಸಿರುವ ಘಟನೆ ಉತ್ತರ ಪ್ರದೇಶದ ಬದೌನ್ ನಲ್ಲಿ ನಡೆದಿದೆ.

 ಬಿಲ್ಸಿ ತಹಸಿಲ್‌ನ ರಾಯ್‌ಪುರ ಗ್ರಾಮದ ದಿನೇಶ್ ಮತ್ತು ಮಧು ದಂಪತಿ ತನ್ನ ಮಗಳು ಆರತಿಯನ್ನು ಶಾಲೆ(School)ಗೆ ಸೇರಿಸಲು ಕರೆದೊಯ್ದಾಗ ವಿಷಯ ಬೆಳಕಿಗೆ ಬಂದಿದೆ. ಶಾಲೆಯ ಶಿಕ್ಷಕಿಗೆ ಮಗಳ ಆಧಾರ್​ ಕಾರ್ಡ್​ ನೀಡಿದಾಗ ಅದರಲ್ಲಿ ಆರತಿ ಎಂಬ ಹೆಸರಿನ ಬದಲಿಗೆ ‘ಮಧುವಿನ ಐದನೇ ಮಗು’ ಎಂದು ನಮೂದಿಸಲಾಗಿದೆ. ಇದನ್ನು ನೋಡಿ ನಕ್ಕ ಶಿಕ್ಷಕಿ(Teacher) ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡು ಬರುವಂತೆ ಪೋಷಕರಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ, ಮಗುವಿಗೆ ಶಾಲಾ ದಾಖಲಾತಿ ನಿರಾಕರಿಸಲಾಗಿದೆ ಎನ್ನಲಾಗಿದೆ. ಆರತಿಗೆ ನೀಡಿರುವ ಆಧಾರ್ ಕಾರ್ಡ್​ನಲ್ಲಿ 12 ಅಂಕೆಗಳ ಆಧಾರ್ ನಂಬರ್ ಕೂಡಾ ಇಲ್ಲ. ದಂಪತಿಗಳು ಆನಕ್ಷರಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಬಾಲಕಿಯ ತಂದೆ ದಿನೇಶ್ ಮಾತನಾಡಿ, ‘ಶಾಲೆಯಲ್ಲಿ ಆಧಾರ್ ಕಾರ್ಡ್ ದೋಷದ ಕಾರಣದಿಂದ ನಗೆಪಾಟಲಿಗೆಗೀಡಾಗಬೇಕಾಯಿತು. ನಾನು ಬಡವ, ಐವರು ಮಕ್ಕಳೊಂದಿಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದೇನೆ. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಅನ್ನೋದು ನನ್ನ ಮಹದಾಸೆ. ಆಧಾರ್ ಕಾರ್ಡ್‌ನಲ್ಲಿನ ವ್ಯತ್ಯಾಸದಿಂದ ಹೆಣ್ಣು ಮಗುವಿಗೆ ಪ್ರವೇಶ ಸಿಗುತ್ತಿಲ್ಲ’ ಎಂದು ಅಲವತ್ತುಕೊಂಡರು.

ಬದೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಾ ರಂಜನ್ ಈ ಕುರಿತು ಪ್ರತಿಕ್ರಿಯಿಸಿ, ‘ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್ ಮಾಡಲಾಗುತ್ತಿದೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ತಪ್ಪು ನಡೆದಿದೆ. ಹೀಗಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು. ಇಂತಹ ನಿರ್ಲಕ್ಷ್ಯ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.