ಮನೆ ಆರೋಗ್ಯ ಏನೇ ಆದರೂ ರಾತ್ರಿ ಈ ಹಣ್ಣುಗಳನ್ನು ತಿನ್ನಲೇಬಾರದಂತೆ!

ಏನೇ ಆದರೂ ರಾತ್ರಿ ಈ ಹಣ್ಣುಗಳನ್ನು ತಿನ್ನಲೇಬಾರದಂತೆ!

0

ಊಟ ಆದ ಮೇಲೆ ಹಣ್ಣು ತಿನ್ನಬೇಕು ಎನ್ನುವುದು ಹಿಂದಿನಿಂದ ಬಂದ ವಾಡಿಕೆ. ತುಂಬಾ ಜನರು ಇದನ್ನು ತಪ್ಪು ತಿಳಿದುಕೊಂಡು ರಾತ್ರಿ ಊಟ ಆದ ನಂತರದಲ್ಲಿ ಮಲಗುವ ಮುಂಚೆ ಹಣ್ಣುಗಳನ್ನು ತಿನ್ನುತ್ತಾರೆ. ಆದರೆ ಇದರಿಂದ ಆರೋಗ್ಯ ನಕಾರಾತ್ಮಕವಾಗಿ ಬದಲಾಗುತ್ತಾ ಹೋಗುತ್ತದೆ.

ಹೊಸ ಹೊಸ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಏಕೆ ಈ ರೀತಿ ಆಯಿತು ಎಂದು ನಮಗೆ ಸಂಪೂರ್ಣ ಗೊಂದಲ ಹುಟ್ಟುತ್ತದೆ. ಏಕೆಂದರೆ ನಾವು ತಿಳಿದುಕೊಂಡಿರುವುದು ಹಣ್ಣುಗಳು ತುಂಬಾ ಆರೋಗ್ಯಕರ ಎಂದು. ಆದರೆ ಯಾವ ಸಮಯದಲ್ಲಿ ತಿನ್ನಬೇಕು ಎನ್ನುವುದು ನಮಗೆ ಇದುವರೆಗೂ ಗೊತ್ತಿಲ್ಲ. ಈ ಲೇಖನದಲ್ಲಿ ಈ ಬಗ್ಗೆ ತಿಳಿಸಿಕೊಡಲಾಗಿದೆ. ಯಾವೆಲ್ಲಾ ಹಣ್ಣುಗ ಳನ್ನು ರಾತ್ರಿ ಸಮಯದಲ್ಲಿ ತಿನ್ನಬಾರದು ಎಂಬುದನ್ನು ತಿಳಿದು ಕೊಳ್ಳಬಹುದು.

ಸೇಬು ಹಣ್ಣು

• ದಿನಕ್ಕೊಂದು ಸೇಬು ತಿನ್ನಬೇಕು ಎಂದು ಡಾಕ್ಟರ್ ಹೇಳು ತ್ತಾರೆ. ಆದರೆ ರಾತ್ರಿ ಹೊತ್ತು ಬೇಡ ಎಂದು ಕೂಡ ಹೇಳು ತ್ತಾರೆ.

• ಪ್ರತಿದಿನ ಸೇಬುಹಣ್ಣು ತಿನ್ನುವುದರಿಂದ ಹೃದಯದ ಕಾಯಿಲೆ ಸೇರಿದಂತೆ ಇನ್ನಿತರ ಹಲವಾರು ಕಾಯಿಲೆ ಗಳಿಂದ ದೂರವಿರಲು ಸಹಾಯವಾಗುತ್ತದೆ.

• ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಬೆಳಗಿನ ಸಮಯದಲ್ಲಿ ಮಾತ್ರ ಸೇಬು ಹಣ್ಣು ತಿನ್ನಬೇಕು, ರಾತ್ರಿ ಸಮಯದಲ್ಲಿ ಬೇಡ ಎಂದು ವೈದ್ಯರು ಸಲಹೆ ಕೊಡುತ್ತಾರೆ.

• ಏಕೆಂದರೆ ಸೇಬು ಹಣ್ಣು ತನ್ನಲ್ಲಿ ನಾರಿನ ಅಂಶ ಹೊಂದಿದೆ. ಇದು ನಮ್ಮ ದೇಹದ ಕೊಲೆಸ್ಟ್ರಾಲ್ ಮತ್ತು ಬ್ಲಡ್ ಶುಗರ್ ಕಂಟ್ರೋಲ್ ಮಾಡುವ ಶಕ್ತಿ ಹೊಂದಿದೆ.

• ಆದರೆ ರಾತ್ರಿ ಹೊತ್ತು ಸೇಬು ಹಣ್ಣು ತಿನ್ನುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಅಚ್ಚುಕಟ್ಟಾಗಿ ಕೆಲಸ ಮಾಡಲು ಸಾಧ್ಯವಿರುವುದಿಲ್ಲ.

• ನಾವು ತಿನ್ನುವ ಊಟದಲ್ಲಿ ಅದಾಗಲೇ ನಮಗೆ ಸಾಕಷ್ಟು ನಾರಿನ ಪ್ರಮಾಣ ಸಿಕ್ಕಿರುತ್ತದೆ. ಸೇಬುಹಣ್ಣಿನಲ್ಲೂ ಸಿಗುವುದರಿಂದ ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ ಹೆಚ್ಚಾಗುವ ಸಾಧ್ಯತೆ ಇದೆ.

ಸೀಸನಲ್ ಹಣ್ಣುಗಳು ಕೂಡ ಡೇಂಜರ್

• ರಾತ್ರಿ ಸಮಯದಲ್ಲಿ ಮಲಗುವ ಮುಂಚೆ ಸೀಸನಲ್ ಹಣ್ಣುಗಳನ್ನು ತಿನ್ನುವ ಅಭ್ಯಾಸವನ್ನು ಯಾರು ಮಾಡಿ ಕೊಂಡಿರುತ್ತಾರೆ ಅವರಿಗೆ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಿಯ ಪ್ರಮಾಣ ಲಭ್ಯವಾಗುತ್ತಾ ಹೋಗುತ್ತದೆ.

• ಇದು ಹೃದಯ ಜೋರಾಗಿ ಬಡಿದುಕೊಳ್ಳುವಂತೆ ಮಾಡು ತ್ತದೆ ಮತ್ತು ನಿದ್ರೆಗೆ ತೊಂದರೆ ಕೊಡುತ್ತದೆ. ಹಾಗಾಗಿ ಇಂತಹ ಹಣ್ಣುಗಳು ರಾತ್ರಿಯಲ್ಲಿ ಬೇಡ.

ಕಿತ್ತಳೆ ಹಣ್ಣು ಮತ್ತು ದ್ರಾಕ್ಷಿ ಹಣ್ಣು

• ಇವುಗಳಲ್ಲಿ ಆಮ್ಲೀಯ ಪ್ರಮಾಣ ಸ್ವಲ್ಪ ಕಡಿಮೆ ಇರುತ್ತದೆ. ಆದರೂ ಕೂಡ ರಾತ್ರಿ ಹೊತ್ತು ತಿನ್ನಬಾರದು ಎಂದು ಡಾಕ್ಟರ್ ಹೇಳುತ್ತಾರೆ.

• ಪ್ರಮುಖವಾಗಿ ವಿಟಮಿನ್ ಸಿ ಮತ್ತು ನಾರಿನ ಪ್ರಮಾಣ ಹೆಚ್ಚಾಗಿರುವ ಹಣ್ಣುಗಳು ಇವಾಗಿದ್ದು, ಒಂದು ವೇಳೆ ತಿಂದ ನಂತರದಲ್ಲಿ ನಿಮಗೆ ನಿದ್ರಾಹೀನತೆ ಸಮಸ್ಯೆ ಎದುರಾದರೆ ಇವುಗಳಿಂದ ನಿಮಗೆ ಗ್ಯಾಸ್ಟ್ರಿಕ್ ಹಾಗೂ ಅಸಿಡಿಟಿ ಉಂಟಾಗಿದೆ ಎಂದರ್ಥ.

• ಸಿಹಿ ತಿನ್ನಬೇಕು ಎನಿಸಿದರೆ ಕಿತ್ತಳೆ ಹಣ್ಣು, ದ್ರಾಕ್ಷಿ ಹಣ್ಣು ಮತ್ತು ಕಿವಿ ಹಣ್ಣು ಇವುಗಳನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿ, ಆದರೆ ಹೆಚ್ಚಿಗೆ ಬೇಡ.

ಸಪೋಟ ಹಣ್ಣು

• ಸಪೋಟ ಹಣ್ಣು ರಾತ್ರಿ ಹೊತ್ತು ಏಕೆ ತಿನ್ನಬಾರದು ಎಂದು ಬಹುತೇಕ ನಿಮಗೆ ಗೊತ್ತಿರುತ್ತದೆ ಅನಿಸುತ್ತದೆ.

• ಇದರಲ್ಲಿ ಸಕ್ಕರೆ ಪ್ರಮಾಣ ಅತಿಯಾಗಿ ಕಂಡು ಬರುತ್ತದೆ ಮತ್ತು ರಾತ್ರಿ ಮಲಗುವಾಗ ಸಪೋಟ ಹಣ್ಣು ಸೇವಿಸಿದರೆ ನಿಮ್ಮ ದೇಹದ ಬ್ಲಡ್ ಶುಗರ್ ಸಾಕಷ್ಟು ಏರಿಕೆ ಕಾಣುತ್ತದೆ.

• ಇದರಿಂದ ನಿಮಗೆ ನಿದ್ರೆ ಬರದೇ ಹೋಗಬಹುದು. ಆದ್ದರಿಂದ ರಾತ್ರಿ ಹೊತ್ತು ಸಪೋಟ ಹಣ್ಣು ತಿನ್ನಬೇಡಿ.

ಬಾಳೆಹಣ್ಣು

• ವ್ಯಾಯಾಮ ಮಾಡುವ ಮುಂಚೆ ಬಾಳೆಹಣ್ಣುತಿನ್ನಬೇಕು ಎಂದು ವ್ಯಾಯಾಮ ಶಾಲೆಯಲ್ಲಿ ಟ್ರೈನಿಂಗ್ ಕೊಡುವವರು ಕೂಡ ಹೇಳುತ್ತಾರೆ, ಡಾಕ್ಟರ್ ಕೂಡ ಹೇಳುತ್ತಾರೆ. ಆದರೆ ರಾತ್ರಿ ಹೊತ್ತು ಬೇಡ ಎನ್ನುವುದು ಇಬ್ಬರ ಮಾತು ಕೂಡ. ಏಕೆ ಬಾಳೆಹಣ್ಣನ್ನು ರಾತ್ರಿ ಹೊತ್ತು ತಿನ್ನಬಾರದು?

• ಬಾಳೆಹಣ್ಣು ತಿನ್ನುವ ಪ್ರಮುಖ ಉದ್ದೇಶವೆಂದರೆ ನಮಗೆ ಶಕ್ತಿ ಬರಲಿ ಎಂದು. ಇದರ ಜೊತೆಗೆ ಚರ್ಮಕ್ಕೆ ಸಂಬಂಧ ಪಟ್ಟ ಹಲವಾರು ಸಮಸ್ಯೆಗಳನ್ನು ಇದು ಹೋಗಲಾಡಿ ಸುತ್ತದೆ ಮತ್ತು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

• ಆದರೆ ರಾತ್ರಿ ಹೊತ್ತು ಬಾಳೆಹಣ್ಣು ಸೇವನೆ ಆರೋಗ್ಯಕ ರವಲ್ಲ. ಏಕೆಂದರೆ ಇದು ಕತ್ತಲಿನಲ್ಲಿ ಮಲಗಿರುವಾಗ ದೇಹದ ತಾಪಮಾನ ವನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ ಜೊತೆಗೆ ನಿದ್ರೆ ಬರದಂತೆ ಮಾಡಬಹುದು.

• ದೀರ್ಘ ಸಮಯದವರೆಗೆ ನೀವು ಸೇವಿಸಿದ ಬಾಳೆಹಣ್ಣು ಜೀರ್ಣವಾಗದೆ ಹೋಗಬಹುದು. ಇದೇ ಕಾರಣಕ್ಕೆ ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದು.

ಹಣ್ಣುಗಳನ್ನು ತಿನ್ನಲು ಸೂಕ್ತ ಸಮಯ ಯಾವುದು?

• ಬೆಳಗ್ಗೆ ತಿಂಡಿ ತಿಂದ ನಂತರದಲ್ಲಿ 11 ಅಥವಾ 12 ಗಂಟೆ ಸಮಯದಲ್ಲಿ ನೀವು ನಿಮಗಿಷ್ಟವಾದ ಯಾವುದೇ ಹಣ್ಣು ಗಳನ್ನು ತಿನ್ನಬಹುದು. ಅದನ್ನು ಬಿಟ್ಟರೆ, ಮಧ್ಯಾಹ್ನ ಊಟ ಆದ ನಂತರದಲ್ಲಿ ಹಣ್ಣು ತಿನ್ನಬಹುದು.

• ಸಂಜೆಯ ಸ್ನಾಕ್ಸ್ ಸಮಯದಲ್ಲಿ ಅಂದರೆ ಮಧ್ಯಾಹ್ನ 3:0 0ಯಿಂದ ಸಂಜೆ 5:00 ಗಂಟೆಯವರೆಗೆ ಹಣ್ಣುಗಳನ್ನು ತಿನ್ನಲು ಸೂಕ್ತ ಸಮಯ.

• ಇದರಿಂದ ನಿಮ್ಮ ದೇಹಕ್ಕೆ ಸಂಪೂರ್ಣ ಪ್ರಮಾಣದಲ್ಲಿ ಹಣ್ಣುಗಳಿಂದ ಆರೋಗ್ಯ ಲಾಭಗಳು ಸಿಗುತ್ತವೆ. ನಿಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ.

ಕೊನೆ ಮಾತು

• ಪೌಷ್ಟಿಕಾಂಶಗಳು ಅಪಾರ ಪ್ರಮಾಣದಲ್ಲಿ ಸಿಗುವ ಹಣ್ಣು ಗಳನ್ನು ತಿನ್ನಲು ಹಿಂದೆ ಮುಂದೆ ನೋಡಬೇಡಿ.

• ನಿಸರ್ಗದಲ್ಲಿ ಸಿಗುವ ಅತ್ಯಂತ ಆರೋಗ್ಯಕರವಾದ ಆಹಾರಗಳು ಇವು.

• ಆದರೆ ರಾತ್ರಿ ಸಮಯದಲ್ಲಿ ಸೇವನೆ ಮಾಡುವುದರಿಂದ, ಹೊಟ್ಟೆಯ ಆರೋಗ್ಯಕ್ಕೆ, ಜೀರ್ಣಾಂಗ ವ್ಯವಸ್ಥೆಗೆ, ನಿದ್ರೆಗೆ ತೊಂದರೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಮೇಲೆ ತಿಳಿಸಿದ ಸಮಯದಲ್ಲಿ ಹಣ್ಣುಗಳನ್ನು ಸೇವಿಸಿ.