ಮನೆ ರಾಜಕೀಯ ಬಿಜೆಪಿಯಲ್ಲಿ ಕಾಳು ಸಂತೆಕೋರರು, ಬೆಟ್ಟಿಂಗ್ ದಂದೆಕೋರರಿಗೆ ಟಿಕೆಟ್: ಎಚ್.ಡಿ.ಕುಮಾರಸ್ವಾಮಿ

ಬಿಜೆಪಿಯಲ್ಲಿ ಕಾಳು ಸಂತೆಕೋರರು, ಬೆಟ್ಟಿಂಗ್ ದಂದೆಕೋರರಿಗೆ ಟಿಕೆಟ್: ಎಚ್.ಡಿ.ಕುಮಾರಸ್ವಾಮಿ

0

ಶಿರಸಿ: ಬಿಜೆಪಿಯಲ್ಲಿ ಕಾಳು ಸಂತೆಕೋರರು, ಬೆಟ್ಟಿಂಗ್ ದಂದೆಕೋರರು ಹೆಚ್ಚಿದ್ದಾರೆ. ಅಂಥವರಿಗೆ ಹೆಚ್ಚು ಟಿಕೆಟ್ ನೀಡಲಾಗುತ್ತಿದೆ ಎಂದು ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

Join Our Whatsapp Group

ನಗರದಲ್ಲಿ ಬುಧವಾರ ಜೆಡಿಎಸ್ ಕಾರ್ಯಕರ್ಯರ ರ್ಯಾಲಿಗೆ ಚಾಲನೆ ನೀಡಲು ಆಗಮಿಸಿದ್ದ ಅವರು ಬಿಜೆಪಿಯಲ್ಲಿ ರೌಡಿ ಶೀಟರ್ ಗಳಿಗೆ ಟಿಕೆಟ್ ಹಂಚಿಕೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ವೇದಿಕೆ ಮೇಲೆ ಹೇಳುವುದಕ್ಕು, ಅಲ್ಲಿನ ನಾಯಕರು ಮಾಡುವ ಕಾರ್ಯಕ್ಕು ಸಾಕಷ್ಟು ವ್ಯತ್ಯಾಸವಿದೆ ಎಂಬುದನ್ನು ಮೊದಲಿನಿಂದಲೂ ನೋಡಿದ್ದೇವೆ. ಹಾಗಾಗಿ ನಿನ್ನೆ ಬಿಜೆಪಿ ಬಿಡುಗಡೆ ಮಾಡಿದ ಟಿಕೆಟ್ ಅಚ್ಚರಿ ಮೂಡಿಸಿಲ್ಲ ಎಂದರು.

ಈ ಹಿಂದೆ 2004ರಲ್ಲಿ ಜನತಾ ಪರಿವಾರ ತೊರೆದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿವೆ ಹಲವರು ಹೋಗಿದ್ದರು. ಇದೀಗ್ ಟಿಕೆಟ್ ಸಿಗದ ಕಾರಣ ಮಾತೃಪಕ್ಷಕ್ಕೆ ವಾಪಸ್ಸಾಗುವ ಸ್ಥಿತಿ ಬಂದಿದೆ. ಈಗ ಪಕ್ಷ ತೊರೆದವರಿಗೆ ಇನ್ನೆರಡು ವರ್ಷದಲ್ಲಿ ಬುದ್ದಿ ಬರಲಿದೆ. ಎಂದ ಅವರು, ಇನ್ನೆರಡು ದಿನಗಳಲ್ಲಿ ಪಕ್ಷಕ್ಕೆ ಬರುವವರ ಹೆಸರು ಅಂತಿಮ ಆಗಲಿದೆ ಎಂದರು.

ಸಮ್ಮಿಶ್ರ ಸರ್ಕಾರ ರಚನೆಗೆ ಆದ್ಯತೆ ನೀಡದೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಶ್ರಮಿಸಲಾಗುತ್ತಿದೆ. ಉತ್ತರ ಕನ್ನಡದಲ್ಲಿ ಈ ಬಾರಿ 4 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.