ಚಿಕ್ಕಮಗಳೂರು: ತನ್ನಿಂದ ದೂರವಾದ ಹೆಂಡತಿ ಮೇಲಿನ ವಿಪರೀತ ಸಿಟ್ಟಿಗೆ ಮಗಳು, ಅತ್ತೆ ಮತ್ತು ನಾದಿನಿಯನ್ನು ಬಂದೂಕಿನಿಂದ ಗುಂಡು ಹಾರಿಸಿ, ಬಳಿಕ ವ್ಯಕ್ತಿಯೋರ್ವ ತಾನೂ ಆತ್ಮಹತ್ಯೆಗೆ ಶರಣಾಗಿರುವಂತಹ ಭಯಾನಕ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ನಿನ್ನೆ ನಡೆದಿದೆ.
ಅತ್ತೆ ಜ್ಯೋತಿ(50), ನಾದಿನಿ ಸಿಂಧು(26), ಮೌಲ್ಯಾ(7) ಕೊಲೆಯಾದರು. ಗುಂಡು ಹಾರಿಸಿಕೊಂಡು ರತ್ನಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸತೊಡಕು ಹಬ್ಬದ ರಾತ್ರಿ ನಡೆದ ಮೂರವ ಕೊಲೆ ಮತ್ತು ಒಂದು ಆತ್ಮಹತ್ಯೆ ಸದ್ಯ ಕಾಫಿನಾಡನ್ನು ಬೆಚ್ಚಿಬೀಳಿಸಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸತೊಡಕು ಹಬ್ಬದ ರಾತ್ರಿ ನಾಡ ಬಂದೂಕಿನಿಂದ ಮೂವರನ್ನು ಹತ್ಯೆ ಮಾಡಿ ತಾನು ನಾಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ನಡೆದಿದೆ. ಅಳಿಯ ರತ್ನಾಕರ್ ನಿಂದ ಅತ್ತೆ, ನಾದಿನಿ ಹಾಗೂ ತನ್ನ ಮಗಳನ್ನ ಗುಂಡು ಹಾರಿಸಿ ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಗಲು ಗ್ರಾಮದ ಅತ್ತೆ ಜ್ಯೋತಿ ಅವರ ಮನೆಗೆ ರಾತ್ರಿ ಏಕಾಏಕಿ ನುಗ್ಗಿದ ರತ್ನಾಕರ್, ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ 7 ವರ್ಷದ ಮಗು ಮೌಲ್ಯಳನ್ನ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಬಳಿಕ ತಾನು ಮನೆಯ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಮೂವರನ್ನ ಕೊಂದ ನಾಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.















