ಹಾಸನ (Hassan)- ಹಾಸನ ಕ್ಷೇತ್ರದಲ್ಲಿ ರೇವಣ್ಣ ಯಾಕೆ, ಒಬ್ಬ ಸಾಮಾನ್ಯ ಕಾರ್ಯಕರ್ತರನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಿರುಗೇಟು ನೀಡಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಹೆಚ್.ಡಿ ರೇವಣ್ಣ ವಿರುದ್ಧ ಗೆದ್ದು ತೋರಿಸುತ್ತೇವೆ ಎಂದವರಿಗೆ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ.
2022ಕ್ಕೆ ಫಲಿತಾಂಶ ಏನು ಅನ್ನೋದನ್ನು ನೀವು ಕಾದು ನೋಡಿ. ಅದ್ಯಾರು ಒಬ್ಬ ರೇವಣ್ಣ ವಿರುದ್ಧ 50 ಸಾವಿರ ಮತಕ್ಕಿಂತ ಕಮ್ಮಿ ಬಂದ್ರೇ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ರೇವಣ್ಣ ಯಾಕೆ ಒಬ್ಬ ಸಾಮಾನ್ಯ ಕಾರ್ಯಕರ್ತನ ವಿರುದ್ದ ಗೆದ್ದು ತೋರಿಸಲಿ ಎಂದು ಸವಾಲು ಅವರು ಹಾಕಿದರು.
ಇನ್ನು ಹಳೆ ಮೈಸೂರು ಭಾಗದಲ್ಲಿ ದಳಪತಿಗಳನ್ನು ಛಿದ್ರ ಮಾಡುತ್ತೇವೆ ಎಂದಿದ್ದ ಬಿಜೆಪಿ ನಾಯಕರಿಗೆ ಹೆಚ್ಡಿಕೆ ಚಾಟಿ ಬೀಸಿದ್ದಾರೆ. ಬಿಜೆಪಿ ನಾಯಕರು ದಳಪತಿಗಳ ಕೋಟೆ ಅಲ್ಲ ಇಡೀ ರಾಜ್ಯವನ್ನೇ ಛಿದ್ರ ಮಾಡಿದ್ದಾರೆ. ನಮ್ಮ ಕೋಟೆ ತುಂಬಾ ಬಲಿಷ್ಠವಾಗಿದೆ ಅದನ್ನು ಛಿದ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಯಾರ ಕೋಟೆ ಛಿದ್ರವಾಗುತ್ತೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಜನರೇ ತೀರ್ಮಾನಿಸುತ್ತಾರೆ. ನಾವು ನಮ್ಮ ಸರ್ಕಾರದಲ್ಲಿ 56 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೇವೆ. ಆದರೆ ಬಿಜೆಪಿ ಸರ್ಕಾರದ ತರಹ ಭ್ರಷ್ಟಚಾರ ಮಾಡಿಲ್ಲ. ಅಸಲಿಗೆ ಎರಡು ರಾಷ್ಟ್ರೀಯ ಪಕ್ಷಕ್ಕೆ ನೈತಿಕತೆ ಅನ್ನೋದೆ ಇಲ್ಲ ಎಂದು ಕಿಡಿಕಾರಿದರು.














