ಮನೆ ಕ್ರೀಡೆ ಕೆಕೆಆರ್ vs ಆರ್ ಆರ್ ಪಂದ್ಯದಲ್ಲಿ ಆರ್’ಸಿಬಿ ಪಾಲಿಗೆ ಕೆಕೆಆರ್ ಗೆಲ್ಲಬೇಕು..!

ಕೆಕೆಆರ್ vs ಆರ್ ಆರ್ ಪಂದ್ಯದಲ್ಲಿ ಆರ್’ಸಿಬಿ ಪಾಲಿಗೆ ಕೆಕೆಆರ್ ಗೆಲ್ಲಬೇಕು..!

0

ಐಪಿಎಲ್​’ನ 56ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಆರ್’​ಸಿಬಿ ಪಾಲಿಗೂ ನಿರ್ಣಾಯಕ ಎಂಬುದು ವಿಶೇಷ.

Join Our Whatsapp Group

ಅಂದರೆ ಐಪಿಎಲ್ ಪ್ಲೇಆಫ್ ರೇಸ್’​ನಲ್ಲಿ ಕೆಕೆಆರ್, ಆರ್’​ಸಿಬಿ, ರಾಜಸ್ಥಾನ್ ರಾಯಲ್ಸ್ ತಂಡಗಳಿವೆ. ಆದರೆ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಕೆಆರ್ ಗೆಲ್ಲುವುದರಿಂದ ಅದು ಆರ್’​ಸಿಬಿ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ.

ಏಕೆಂದರೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಇಂದು ಗೆದ್ದರೆ 4ನೇ ಸ್ಥಾನಕ್ಕೇರಬಹುದು. ಒಂದು ವೇಳೆ ಸೋತರೆ ಆರ್​’ಸಿಬಿ ತಂಡದ ಪ್ಲೇಆಫ್ ಕನಸು ಮತ್ತಷ್ಟು ಜೀವಂತವಾಗಿರಲಿದೆ. ಏಕೆಂದರೆ ಆರ್’​ಸಿಬಿ ತಂಡದ ಮುಂದಿನ ಎದುರಾಳಿ ರಾಜಸ್ಥಾನ್ ರಾಯಲ್ಸ್.

ಅಂದರೆ ರಾಜಸ್ಥಾನ್ ರಾಯಲ್ಸ್ ತಂಡವು ಕೆಕೆಆರ್ ಹಾಗೂ ಆರ್’​ಸಿಬಿ ವಿರುದ್ಧ ಸೋತರೆ ಪ್ಲೇಆಫ್ ರೇಸ್’​ನಿಂದ ಹೊರಬೀಳುವುದು ಖಚಿತ. ಅತ್ತ ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನಕ್ಕೇರಬಹುದು.

ಮತ್ತೊಂದೆಡೆ ಸಿಎಸ್’​ಕೆ ತಂಡವು ಮುಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಪ್ಲೇಆಫ್​ ಪ್ರವೇಶವನ್ನು ಖಚಿತಪಡಿಸಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಸಿಎಸ್’​ಕೆ ತಂಡದ ಮುಂದಿನ ಎದುರಾಳಿ ಕೆಕೆಆರ್. ಅತ್ತ ಕೆಕೆಆರ್ ತಂಡವನ್ನು ಸಿಎಸ್’​ಕೆ ಸೋಲಿಸಿದರೆ, ಆರ್’​ಸಿಬಿ ಹಾದಿ ಸುಗಮವಾಗಲಿದೆ.

ಏಕೆಂದರೆ ಕೆಕೆಆರ್​ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಂದಿನ 3 ಪಂದ್ಯಗಳಲ್ಲಿ 1 ರಲ್ಲಿ ಸೋತು, 2 ಪಂದ್ಯಗಳನ್ನು ಗೆದ್ದರೂ ಒಟ್ಟು 14 ಪಾಯಿಂಟ್ಸ್ ಮಾತ್ರ ಆಗಲಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್​ ಕೂಡ 1 ಪಂದ್ಯದಲ್ಲಿ ಸೋಲುವುದನ್ನು ಎದುರು ನೋಡಬೇಕು. ಇದರಿಂದ ಕೊನೆಯ 3 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ 16 ಪಾಯಿಂಟ್ಸ್​ಗಳೊಂದಿಗೆ ಪ್ಲೇಆಫ್​’ಗೆ ಪ್ರವೇಶಿಸುವ ಅವಕಾಶವನ್ನು ಆರ್​’ಸಿಬಿ ಹೊಂದಿರಲಿದೆ.

ಈ ಎಲ್ಲಾ ಲೆಕ್ಕಚಾರದಂತೆ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಕೆಆರ್ ಗೆಲ್ಲಬೇಕು. ಇದರಿಂದ ಆರ್​ಆರ್​ ತಂಡದ 16 ಪಾಯಿಂಟ್ಸ್’​ಗಳಿಸುವ ಅವಕಾಶ ಅಂತ್ಯವಾಗಲಿದೆ. ಇತ್ತ ಆರ್’​ಸಿಬಿ 16 ಪಾಯಿಂಟ್ಸ್​ಗಳ ಟಾರ್ಗೆಟ್’​ನೊಂದಿಗೆ ಆರ್’​ಸಿಬಿ ಪ್ಲೇಆಫ್’​ಗೆ ಪ್ರವೇಶಿಸುವ ಅವಕಾಶ ಇಮ್ಮಡಿಯಾಗಲಿದೆ.

ಹಿಂದಿನ ಲೇಖನರಾಜ್ಯದಲ್ಲಿ ಯಾವುದೇ  ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಆರ್.ಅಶೋಕ್
ಮುಂದಿನ ಲೇಖನಶಿವಮೊಗ್ಗದಲ್ಲಿ ಎರಡು ಬಸ್’ಗಳ ನಡುವೆ ಭೀಕರ ಅಪಘಾತ: 4ಕ್ಕಿಂತ ಹೆಚ್ಚು ಜನರು ಸಾವು