ಮನೆ ಕಾನೂನು ಅತ್ಯಾಚಾರ ಪ್ರಕರಣ;ಮದುವೆಯ ಭರವಸೆ ಈಡೇರಿಸದಿದ್ದರೆ ಭರವಸೆ ಸುಳ್ಳು ಎಂದರ್ಥವಲ್ಲ: ಬಾಂಬೆ ಹೈಕೋರ್ಟ್

ಅತ್ಯಾಚಾರ ಪ್ರಕರಣ;ಮದುವೆಯ ಭರವಸೆ ಈಡೇರಿಸದಿದ್ದರೆ ಭರವಸೆ ಸುಳ್ಳು ಎಂದರ್ಥವಲ್ಲ: ಬಾಂಬೆ ಹೈಕೋರ್ಟ್

0

ಕಕ್ಷಿದಾರರ ನಡುವಿನ ಲೈಂಗಿಕ ಸಂಬಂಧವು ಕೇವಲ ಮದುವೆಯಾಗುವ ಭರವಸೆಯ ಮೇಲೆ ಆಧಾರಿತವಾಗಿಲ್ಲ, ಬದಲಿಗೆ ಅದು ಒಮ್ಮತದ ಸಂಬಂಧವಾಗಿದೆ ಎಂದು ಗಮನಿಸಿದ ನಂತರ ನ್ಯಾಯಾಲಯವು ಒಬ್ಬ ವ್ಯಕ್ತಿಗೆ ನಿರೀಕ್ಷಣಾ ಜಾಮೀನನ್ನು ನೀಡಿದೆ.

ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಆರೋಪಿಗೆ ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠವು ನಿರೀಕ್ಷಣಾ ಜಾಮೀನನನ್ನು ನೀಡಿದೆ. [ಗುಲಾಬ್ ಲಕ್ಷ್ಮಣ್ ಮೆಶ್ರಮ್ ವಿರುದ್ಧ ಮಹಾರಾಷ್ಟ್ರ ರಾಜ್ಯ]

ಮದುವೆಯ ಭರವಸೆಯನ್ನು ಈಡೇರಿಸಲು ವಿಫಲವಾದರೆ ಆ ಭರವಸೆಯೇ ಸುಳ್ಳು ಎಂದು ಅರ್ಥವಲ್ಲ ಎಂಬುದಾಗಿ ಏಕಸದಸ್ಯ ನ್ಯಾಯಮೂರ್ತಿ ಎಸ್‌ಪಿ ತಾವಡೆ ಅವರು ತಿಳಿಸಿದ್ದಾರೆ.

ಲೈಂಗಿಕ ಸಂಬಂಧವು ಇಬ್ಬರ ನಡುವಿನ ಕೇವಲ ಮದುವೆಯಾಗುವ ಭರವಸೆಯನ್ನು ಮಾತ್ರ ಆಧರಿಸಿಲ್ಲ. ಇಬ್ಬರ ಒಮ್ಮತದ ಸಂಬಂಧವಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಪ್ರಥಮ ವರ್ತಮಾನ ವರದಿಯಲ್ಲಿ ಅರ್ಜಿದಾರರು ದೂರುದಾರರನ್ನು ಕೆಟ್ಟ ನಂಬಿಕೆಯಿಂದ ಹಾಗೂ  ಮೋಸಗೊಳಿಸುವ ಉದ್ದೇಶದಿಂದ ಮದುವೆಯಾಗುವ ಭರವಸೆ ನೀಡಿದ್ದಾರೆ ಎಂಬ ಆರೋಪವಿಲ್ಲ. ದೀರ್ಘಕಾಲದ ದೈಹಿಕ ಸಂಬಂಧದಿಂದಾಗಿ ಈ ಅಂಶವನ್ನು ಅರಿಯಬಹುದಾಗಿದೆ. ಅರ್ಜಿದಾರನು ಮದುವೆಯಾಗುವ ತನ್ನ ಭರವಸೆಯನ್ನು ಪೂರೈಸುವಲ್ಲಿ ವಿಫಲವಾದರೆ, ಭರವಸೆಯೇ ಸುಳ್ಳು ಎಂದು ಅರ್ಥೈಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರಾದ ಗುಲಾಬ್ ಮೆಶ್ರಮ್, ದೂರುದಾರ ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಮತ್ತು ಆಕೆಯನ್ನು ಮದುವೆಯಾಗುವುದಾಗಿ ಒಲವು ವ್ಯಕ್ತಪಡಿಸುವ ಮೊದಲು ಸುಮಾರು ನಾಲ್ಕು ವರ್ಷಗಳ ಕಾಲ ಆಕೆಯೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದರು.

ಮೆಶ್ರಾಮ್‌ನ ನಿರಾಸಕ್ತಿ ಬಗ್ಗೆ ತಿಳಿದುಕೊಂಡ ಮಹಿಳೆ, ಆತನ ವಿರುದ್ಧ ದೂರು ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ರ ಅಡಿಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಎಫ್ ಐಆರ್ ದಾಖಲಿಸಿದ ನಂತರ ಮೆಶ್ರಾಮ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು.

ಎಫ್‌ಐಆರ್‌ನಲ್ಲಿನ ವಿಷಯಗಳನ್ನು ಪರಿಶೀಲಿಸಿದ ನಂತರ, ನ್ಯಾಯಮೂರ್ತಿ ಎಸ್‌ಪಿ ತವಡೆ ಅವರು ಅರ್ಜಿದಾರರ ಭರವಸೆ ಸುಳ್ಳು ಅಥವಾ ಮದುವೆಯಾಗುವ ಭರವಸೆಯ ಆಧಾರದ ಮೇಲೆ ದೂರುದಾರರು ಲೈಂಗಿಕ ಸಂಬಂಧದಲ್ಲಿ ತೊಡಗಿದ್ದಾರೆ ಎಂಬುದು ಪ್ರಾಥಮಿಕವಾಗಿ ಕಂಡುಬಂದಿಲ್ಲ ಎಂದು ತಿಳಿಸಿದರು.

ಎಫ್‌ಐಆರ್‌ನಲ್ಲಿ ಅರ್ಜಿದಾರರು ದೂರುದಾರರನ್ನು ಮದುವೆಯಾಗುವುದಾಗಿ ಭರವಸೆ ನೀಡಿದಾಗ, ಅದು ಕೆಟ್ಟ ನಂಬಿಕೆ ಮತ್ತು ಅವಳನ್ನು ವಂಚಿಸುವ ಉದ್ದೇಶದಿಂದ ಮಾಡಲಾಗಿದೆ ಎಂಬ ಆರೋಪವಿಲ್ಲ, ಇದು ಕಕ್ಷಿದಾರರ ನಡುವಿನ ದೀರ್ಘಕಾಲದ ದೈಹಿಕ ಸಂಬಂಧದಿಂದ ಸ್ಥಾಪಿತವಾಗಿದೆ. ಅರ್ಜಿದಾರರು ಮದುವೆಯಾಗುವ ಭರವಸೆಯನ್ನು ಈಡೇರಿಸಲು ವಿಫಲರಾಗಿರುವುದನ್ನು ಭರವಸೆಯೇ ಸುಳ್ಳು ಎಂದು ಅರ್ಥೈಸಲಾಗುವುದಿಲ್ಲ ಎಂದು ಆದೇಶವನ್ನು ದಾಖಲಿಸಲಾಗಿದೆ.ದೂರುದಾರರಿಗೆ ತಾನು ಎಂದಿಗೂ ಮದುವೆಯ ಭರವಸೆ ನೀಡಿಲ್ಲ ಎಂದು ಮೆಶ್ರಾಮ್ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ.

ಮೆಶ್ರಮ್ ಪರವಾಗಿ ವಾದ ಮಂಡಿಸಿದ ವಕೀಲ ಆರ್.ಜೆ.ಮಿರ್ಜಾ, ಇಬ್ಬರು ಜೋಡಿಗಳು ದೀರ್ಘ ಕಾಲದಿಂದ ಸಂಬಂಧ ಹೊಂದಿದ್ದರು ಮತ್ತು ಅರ್ಜಿದಾರರು ಮದುವೆಯ ಭರವಸೆಯ ನೆಪದಲ್ಲಿ ಎಂದಿಗೂ ಲೈಂಗಿಕ ಸಂಬಂಧವನ್ನು ಹೊಂದಿರಲಿಲ್ಲ. ಅಲ್ಲದೇ ವಾಸ್ತವವಾಗಿ, ಅರ್ಜಿದಾರರು ಎಂದಿಗೂ ದೂರುದಾರರಿಗೆ ಯಾವುದೇ ರೀತಿಯ ಭರವಸೆಯನ್ನು ನೀಡಿಲ್ಲ ಎಂದು ವಾದಿಸಿದರು.

ತನ್ನ ಮುಂದೆ ಇರಿಸಲಾದ ಸಾಕ್ಷ್ಯದ ಆಧಾರದ ಮೇಲೆ, ಕಕ್ಷಿದಾರರ ನಡುವೆ ವಿವಾಹದ ಭರವಸೆ ಇದ್ದರೂ, ದೀರ್ಘಕಾಲದ ದೈಹಿಕ ಸಂಬಂಧವು ಒಮ್ಮತದ ಸಂಬಂಧವಾಗಿತ್ತು ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಅರ್ಜಿದಾರರೊಂದಿಗಿನ ಲೈಂಗಿಕ ಸಂಬಂಧಕ್ಕೆ ದೂರುದಾರರು ನೀಡಿದ ಸಮ್ಮತಿಯು ಕೇವಲ ಮದುವೆಯ ಭರವಸೆಯನ್ನು ಆಧರಿಸಿಲ್ಲ ಎಂಬುದಕ್ಕೆ ದಾಖಲೆಗಳಿವೆ. ಅವರು ಒಮ್ಮತದ ಸಂಬಂಧವನ್ನು ಹೊಂದಿದ್ದರು,” ಎಂದು ನಾನು ಅಭಿಪ್ರಾಯಪಟ್ಟಿದ್ದೇನೆ ಆದ್ದರಿಂದ ಅರ್ಜಿದಾರ ಬಂಧನ ಪೂರ್ವ ಜಾಮೀನಿಗೆ ಅರ್ಹರಾಗಿದ್ದರು ಎಂದು ನ್ಯಾಯಮೂರ್ತಿ ತವಡೆ ಆದೇಶದಲ್ಲಿ ಹೇಳಿದ್ದಾರೆ.

ಬಂಧನದ ಸಂದರ್ಭದಲ್ಲಿ, 15,000 ರೂ ಜಾಮೀನು ಬಾಂಡ್ ಅನ್ನು ಒದಗಿಸಿದ ನಂತರ ಅರ್ಜಿದಾರನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಮತ್ತು ಮೂರು ವಾರಗಳವರೆಗೆ ಪ್ರತಿದಿನ ಸಂಬಂಧಿಸಿದ ಪೊಲೀಸ್ ಠಾಣೆಗೆ ಹಾಜರಾಗುವಂತೆ ನ್ಯಾಯಾಲಯವು ಸೂಚಿಸಿದೆ.