ಮೈಸೂರು( Mysuru): ಹೆಗ್ಗಡದೇವನಕೋಟೆ ತಾಲೂಕಿನ ಗಿರಿಜನ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಮತ್ತು ಸಂಘದ 57ನೇ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು.
ಸಂಘದ ಅಧ್ಯಕ್ಷ ಕಾವೇರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರ ಮುಂದಾಳತ್ವದಲ್ಲಿ ಸಭೆಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲ್ಯಾಮ್ಸ್ ಫೆಡರೇಶನ್ ನ ಅದ್ಯಕ್ಷರಾದ ಮುತ್ತಪ್ಪ, ವಿಜಯ್ ಕುಮಾರ್, ಪುರಸಭಾ ಹಣಕಾಸು ಸಮಿತಿಯ ಅದ್ಯಕ್ಷರಾದಾ H.C. ನರಸಿಂಹ ಮೂರ್ತಿ, ಆದಿವಾಸಿ ಮುಖಂಡರುಗಳಾದ ಮುದ್ದಯ್ಯ, ಚಲುವರಾಜು, ಗಣೇಶ್, ಚಿಕ್ಕಬೋಮ್ಮ, ಪುಟ್ಟ ಬಸವ, ಕಾಳ ಕಲ್ಕರ್, ಚಿಕ್ಕಣ್ಣ ವಡ್ಡರಗುಡಿ, ನಾಗರಾಜು ವಿಸ್ತೀರ್ಣ ಅಧಿಕಾರಿ , ಬಸಮ್ಮ ಬಸವನಗಿರಿ ಹಾಡಿ, ದೇವಮ್ಮ ಸೇರಿದಂತೆ 1000 ಕ್ಕು ಹೆಚ್ಚು ಆದಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














