ಮನೆ ಸ್ಥಳೀಯ ಸಿರಿಧಾನ್ಯ ಪದಾರ್ಥಗಳನ್ನು ಖರೀದಿಸಿದರೆ ಬೆಳೆಗಾರರಿಗೆ ಪ್ರೋತ್ಸಾಹ: ಶಾಸಕ ಜಿ.ಟಿ.ದೇವೇಗೌಡ

ಸಿರಿಧಾನ್ಯ ಪದಾರ್ಥಗಳನ್ನು ಖರೀದಿಸಿದರೆ ಬೆಳೆಗಾರರಿಗೆ ಪ್ರೋತ್ಸಾಹ: ಶಾಸಕ ಜಿ.ಟಿ.ದೇವೇಗೌಡ

0

ಮೈಸೂರು:ರಾಸಾಯನಿಕ ಗೊಬ್ಬರದಿಂದಬೆಳೆಯುವ ಆಹಾರ ಪದಾರ್ಥಗಳನ್ನು ತಿರಸ್ಕರಿಸಿ ಸಿರಿಧಾನ್ಯ ಪದಾರ್ಥಗಳನ್ನು ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮಾಲ್‌ನಲ್ಲಿ ದೊರೆಯುವ ವಿದೇಶಿ ಉತ್ಪನ್ನಗಳಿಗೆ ಮಾರುಹೋಗದೆ ದೇಶಿಯ ಪದಾರ್ಥಗಳನ್ನು ಉಪಯೋಗಿಸಲು ಮುಂದಾಗಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಬಳಗ ಆಯೋಜಿಸಿರುವ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಿ ಮಾತನಾಡಿ,  ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ ಎನ್ನುವಂತೆ ರೈತರು ಕಾಯಕ ಜೀವಿಗಳು. ಧಾರವಾಡ, ಗುಲ್ಬರ್ಗಾ, ವಿಜಯಪುರ, ಮೈಸೂರು, ಶಿವಮೊಗ್ಗ, ಕೋಲಾರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯುವ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದರಿಂದ ನಗರ ಪ್ರದೇಶದ ಜನರಿಗೆ ಸಿರಿಧಾನ್ಯ ದೊರೆಯುತ್ತಿದೆ ಎಂದರು.

ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ,ಸಾರಂಸ ಹಾಳಾಗುತ್ತಿದೆ. ಮಣ್ಣಿನ ಫಲವತ್ತತೆ ಹಾಳಾದರೆ ಉತ್ತಮ ಬೆಳೆ ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ,ರೈತರು ರೈತರು ರಾಸಾಯನಿಕ ಗೊಬ್ಬರದಿಂದ ಮುಕ್ತರಾಗಿ ಸಿರಿಧಾನ್ಯಗಳನ್ನುಬೆಳೆಯಬೇಕು. ಇಂದು ದೇಶವಲ್ಲದೆ ಹೊರ ದೇಶಗಳಲ್ಲೂ ಸಿರಿಧಾನ್ಯಗಳಿಗೆ ಬೇಡಿಕೆ ಬರುತ್ತಿರುವುದರಿಂದ ಅತಿ ಹೆಚ್ಚು ರೈತರು ಬೆಳೆಯುತ್ತಿದ್ದಾರೆ. ಉತ್ತಮ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿರಿಧಾನ್ಯಬೆಳೆಯುವ ರೈತರ ಪ್ರಮಾಣ ಹೆಚ್ಚಾಗಬೇಕಿದೆ ಎಂದು ನುಡಿದರು.

ನಾನು ಪ್ರಗತಿಪರ ಕೃಷಿಕನಾಗಿದ್ದೇನೆ. ೧೯೬೫ರಲ್ಲಿ ಉತ್ತಿ,ಬಿತ್ತನೆ ಮಾಡಿ ಬೆಳೆದಿದ್ದೇನೆ. ಅಂದು ೧೧ಕೆಜಿ ಬಾಳೆಗೋನೆ ಬೆಳೆದಿದ್ದೆ.ಪಪ್ಪಾಯಿ,ಅವರೆಕಾಯಿ ಬೆಳೆದಿದ್ದರಿಂದ ಪ್ರಗತಿಪರ ಕೃಷಿಕ ಎನ್ನುವ ಪ್ರಶಸ್ತಿ ಬಂದಿತ್ತು. ಕೃಷಿಯನ್ನು ನಂಬಿದವರಿಗೆ ಭೂತಾಯಿ ಎಂದಿಗೂ ಕೈ ಬಿಡಲ್ಲ ಎನ್ನುವುದಕ್ಕೆ ನಾನೇ ಉದಾಹರಣೆಯಾಗಿದ್ದೇನೆ.

  • ಜಿ.ಟಿ.ದೇವೇಗೌಡ,ಶಾಸಕರು.

ನಗರ ಪ್ರದೇಶಗಳ ಜನರು ಮಾಲ್‌ಗಳಲ್ಲಿ ದೊರೆಯುವ ಪದಾರ್ಥಗಳಿಗೆಮಾರು ಹೋಗುತ್ತಿದ್ದಾರೆ. ಈ ಪದಾರ್ಥಗಳಿಂದ ಆರೋಗ್ಯ ಹದಗೆಡಲಿದೆ. ಅದರ ಬದಲಿಗೆ ನಮ್ಮ ರೈತರು ಬೆಳೆಯುವ ಸಿರಿಧಾನ್ಯ ಬಳಸಬೇಕು. ನಮ್ಮ ಮಣ್ಣಲ್ಲಿ ಬೆಳೆದು ಮಾರಾಟ ಮಾಡುವ ವಸ್ತುಗಳನ್ನು ಖರೀದಿಸಿ ಬಳಸಿದರೆ ಆರೋಗ್ಯ ಕಾಪಾಡಿಕೊಳ್ಳಬೇಕು.ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ರೀತಿಯಲ್ಲಿ ವಿದೇಶಿ ಕಂಪೆನಿಗಳ ಆಹಾರ ಕಂಪನಿಗಳಿಂದ ದೂರವಾಗಿ ದೇಶಿಯ ಪದಾರ್ಥಗಳನ್ನು ಉಪಯೋಗಿಸಿದರೆ ಕೃಷಿ ಉಳಿಯಲಿದೆ ಎಂದು ಹೇಳಿದರು. ಸಿರಿಧಾನ್ಯಗಳಿಂದ ಅನೇಕ ಪದಾರ್ಥಗಳನ್ನು ತಯಾರಿಸಬಹುದು. ರಾಸಾಯನಿಕ ಗೊಬ್ಬರದಿಂದ ಬೆಳೆದ ಆಹಾರ ಪದಾರ್ಥಗಳಿಂದ ಕ್ಯಾನ್ಸರ್,ಹೃದಯಾಘಾತ ಸೇರಿದಂತೆ ಅನೇಕ ಕಾಯಿಲೆಗಳು ಬರುತ್ತಿವೆ. ಅವುಗಳು ಬರದಂತೆ ತಡೆಯಬೇಕಾದರೆ ಪೌಷ್ಠಿಕಾಂಶವಿರುವ ಸಿರಿಧಾನ್ಯಗಳು ಉತ್ತಮ ಆಹಾರವಾಗಿದೆ ಎಂದು ಅಭಿಪ್ರಾಯಪಟ್ಟರು. 

ಸಣ್ಣ ಸಣ್ಣ ರೈತರು ಇಂದು ಸಾವಯವ ಕೃಷಿಗೆ ಬದಲಾಗಿ ಸಿರಿಧಾನ್ಯ ಬೆಳೆಯುತ್ತಿದ್ದಾರೆ. ಇದಲ್ಲದೆ ಬೇರೆಯವರಿಗೂ ಸಸಿಗಳು,ಬಿತ್ತನೆ ಬೀಜಗಳನ್ನು ನೀಡಿ ಪ್ರೋತ್ಸಾಹ ಮಾಡುತ್ತಿದ್ದಾರೆ. ಸಿರಿಧಾನ್ಯ ವರ್ಷವೆಂದು ಕೇಂದ್ರಸರ್ಕಾರ ಘೋಷಣೆ ಮಾಡಿದ ಮೇಲೆ ಅನೇಕ ರಾಷ್ಟ್ರಗಳು ನಮ್ಮ ಕಡೆಗೆ ತಿರುಗಿವೆ. ಬೇಡಿಕೆಗೆ ತಕ್ಕಂತೆ ಪೂರೈಕೆಮಾಡಬೇಕಾಗಿದೆ ಎಂದು ತಿಳಿಸಿದರು.

ಸಿರಿಧಾನ್ಯ ಬೆಳೆಯುವ ರೈತರು ಸಾಧಕರು, ನಿಜವಾದ ದೇಶ ಸೇವಕರು ಅಂತ ಹೇಳಿದರೆ ತಪ್ಪಾಗಲಾರದು. ಕೂಲಿಗಾಗಿ,ಬದುಕಿಗಾಗಿ ಸಿರಿಧಾನ್ಯಗಳನ್ನು ಬೆಳೆಯದೆ ಜನರ ಆರೋಗ್ಯ ಕಾಪಾಡಲು ಬೆಳೆಯುತ್ತಿರುವುದು ಸಂತೋಷವಾಗಿದೆ. ಸಹಜ ಸಮೃದ್ಧ ಬಳಗದ ಕೆಲಸ ಬಗ್ಗೆ ನನಗೆ ಹೆಚ್ಚು ಮಾಹಿತಿ ಇರಲಿಲ್ಲ. ಈಗ ನನ್ನೊಂದಿಗೆಸಂಪರ್ಕ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಸಿರಿಧಾನ್ಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ, ಪ್ರೋತ್ಸಾಹಿಸುವ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಮೈಸೂರಿನ  ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಬಳಗ ಆಯೋಜಿಸಿರುವ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ ವಿವಿಧ ಉತ್ಪನ್ನಗಳನ್ನು ವೀಕ್ಷಿಸಿದರು

ಸಿರಿಧಾನ್ಯ ಮೇಳದಲ್ಲಿ ವಿವಿಧ ಉತ್ಪನ್ನಗಳನ್ನು ಶಾಸಕ ಜಿ.ಟಿ.ದೇವೇಗೌಡರು ಖರೀದಿಸಿದರು.