ಮನೆ ಯೋಗಾಸನ ಸಹಿತ ಮತ್ತು ಕೇವಲ ಕುಂಭಕ ಪ್ರಾಣಾಯಾಮಗಳು

ಸಹಿತ ಮತ್ತು ಕೇವಲ ಕುಂಭಕ ಪ್ರಾಣಾಯಾಮಗಳು

0

‘ಸಹಿತ’ವೆಂದರೆ ಒಡಗೂಡಿದ, ಒಟ್ಟಿಗೆ ಅಥವಾ ಜೊತೆ ಸೇರಿದ.

Join Our Whatsapp Group

ಪ್ರಾಣಾಯಾಮಾಭ್ಯಾಸವನ್ನು ಉದ್ದೇಶ ಪೂರ್ವಕವಾದ ನೆರವಿನಿಂದ ಕಡ್ಡಾಯವಾಗಿ ‘ಅಂತರಕುಂಭಕ’, ‘ಬಾಹ್ಯ ಕುಂಭಕ’ ಇವೆರಡನ್ನೂ ‘ಪೂರಕ, ರೇಚಕ’ ಗಳೊಡನೆಯೇ ಬಿಡದೆ ಆಚರಿಸಿದುದೇ ಆದರೆ – ಅವು ‘ಸಹಿತ ಕುಂಭಕ ಪ್ರಾಣಾಯಾಮಗಳು’

‘ಕೇವಲ’ = ಬೇರ್ಪಡಿಸಿದ, ಒಂದೇ ಸ್ವಚ್ಚ, ಪವಿತ್ರ ಮತ್ತು ಪೂರ್ಣ

ಪ್ರಾಣಾಯಾಮಾಭ್ಯಾಸಗಳಲ್ಲಿ ‘ಕುಂಭಕ’ಗಳನ್ನು ಸಹಜ ಪ್ರವೃತ್ತಿಯಿಂದ ನಡೆಸಿದುದೇ ಆದರೆ – ಅವು ‘ಕೇವಲ ಕುಂಭಕ’ ಪ್ರಾಣಾಯಾಮಗಳು, ಅಭ್ಯಾಸಿಯು ‘ಕೇವಲ ಕುಂಭಕ ಪ್ರಾಣಾಯಾಮ’ದಲ್ಲಿ ಸ್ವಾಮ್ಯವನ್ನು ಪಡೆದುದೇ ಆದರೆ, ಆತನು ಈ ಬಾಹ್ಯ ಪ್ರಪಂಚದಿಂದ ಕ್ರಮ ಕ್ರಮವಾಗಿ ಬೇರ್ಪಟ್ಟು ಕಾಲಕ್ರಮದಿಂದ ಸರ್ವವ್ಯಾಪ್ತಿಯಾದ ಪರಮಾರ್ಥ ತತ್ತ್ವ ದೆಡೆಗೆ ಸರಿಯುತ್ತಾನೆ. ಏಕೆಂದರೆ ಯಾವೊಂದು ಮೂಲವಸ್ತು, ಅಂದರೆ ಪ್ರಾಣವಾಯುವು ಸಣ್ಣ ಸಣ್ಣ ರಂಧ್ರಗಳಿಂದ ಮೊದಲ್ಗೊಂಡು ಎಲ್ಲೆಲ್ಲಿಯೂ ಇಡೀ ಆಕಾಶವನ್ನೇ ತುಂಬಿಕೊಂಡಿದೆಯೋ ಅಂಥ ಪ್ರಾಣವಾಯುವನ್ನು ಈ ಪ್ರಾಣಾಯಾಮಾಭ್ಯಾಸದಿಂದ ತನ್ನ ಆಳ್ವಿಕೆಗೆ ಒಳಪಡಿಸಿ ಕೊಂಡಿರುತ್ತಾನೆ. ಅವನ ಮನಸ್ಸೆಲ್ಲವೂ ಈ ‘ಪ್ರಾಣ’ದಲ್ಲಿಯೇ ನೆಲೆಸಿರುವುದರಿಂದ ಅವನು ಕೊನೆಗೆ ಆ ‘ಪ್ರಾಣ’ವೇ ಆಗಿಬಿಡುತ್ತಾನೆ. ಬೀಸುವ ಗಾಳಿಯು ವಾಯುಮಂಡಲದಲ್ಲಿರುವ ಹೊಗೆ ಮತ್ತು ಇತರ ಕಲ್ಮಶಗಳನ್ನೆಲ್ಲಾ ದೂಡಿ ಅದನ್ನು ಸ್ವಚ್ಛಗೊಳಿಸುವಂತೆ, ‘ಪ್ರಾಣಾಯಾಮ’ವು ದೇಹ ಮತ್ತು ಮನಸ್ಸಿನ ಕಲ್ಮಶಗಳನ್ನೆಲ್ಲಾ ದೂಡಿ ಅದನ್ನು ನಿರ್ಮಲ ಸ್ಥಿತಿಗೆ ತರುತ್ತದೆ. ಆಗ ‘ಪತಂಜಲಿ ಮಹರ್ಷಿಯ ಅಭಿಪ್ರಾಯದಂತೆ ಒಳಗಿರುವ ದಿವ್ಯಾಗಿ ಇಲ್ಲವೆ ‘ವಿವ್ಯಜ್ಯೋತಿ’ಯು ಯೋಗಿಯ ಒಳಗೇ ಅತಿ ವೈಭವದಿಂದ ಹೊಳೆದು, ಅವನ ಮನಸ್ಸನ್ನು ‘ಧಾರಣ’ ಸ್ಥಿತಿಗೂ ‘ಧ್ಯಾನ’ ಸ್ಥಿತಿಗೂ ಒಯ್ಯುತ್ತದೆ. ಯೋಗಸೂತ್ರ 11 ಅಧ್ಯಾಯ 52-53 ರಲ್ಲಿ ಈ ವಿಷಯವನ್ನು ‘ಶತಃ ಕ್ಷೀಯತೇ ಪ್ರಕಾಶಾವರಣಂ’ ಮತ್ತು ‘ಧಾರಣಾಸು ಯೋಗ್ಯಾ ಮನರ್ಸ’ ಎಂಬ ಸೂತ್ರಗಳಿಂದ ಸೂಚಿಸಿದೆ. ಆದರೆ ಈ ಹಂತವನ್ನು ತಲುಪಲೂ ಬಹುಕಾಲ ಹಿಡಿಯುತ್ತದೆ. ಮುಂಜಾನೆಯು ಕತ್ತಲನ್ನು ಹಂತ ಹಂತವಾಗಿ ದೂಡುತ್ತದೆಯಲ್ಲವೆ ?