ಮನೆ ಸ್ಥಳೀಯ ಕಂದಾಯದ ಕೊರತೆ ಭರಿಸಲು ವಿದ್ಯುತ್‌ ದರ ಹೆಚ್ಚಿಸಿ: ಜಿ. ಶೀಲಾ ಮನವಿ

ಕಂದಾಯದ ಕೊರತೆ ಭರಿಸಲು ವಿದ್ಯುತ್‌ ದರ ಹೆಚ್ಚಿಸಿ: ಜಿ. ಶೀಲಾ ಮನವಿ

0

ಮೈಸೂರು: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌)ದ ಕಂದಾಯದ ಕೊರತೆ ಭರಿಸಲು ವಿದ್ಯುತ್ ದರ ಪರಿಷ್ಕರಣೆ ಅಗತ್ಯವಿದೆ ಎ೦ದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌)ದ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಶೀಲಾ ಅವರು ಕರ್ನಾಟಕ ವಿದ್ಯುತ್‌ ವಿದ್ಯುಚ್ಛಕ್ತಿ ನಿಯ೦ತ್ರಣ ಆಯೋಗ(ಕೆಇಆರ್‌ಸಿ)ಕ್ಕೆ ಮನವಿ ಮಾಡಿದರು.

Join Our Whatsapp Group

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕೆಇಆರ್‌ಎಸ್‌ ಅಧ್ಯಕ್ಷ ಪಿ. ರವಿಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ವಿದ್ಯುತ್ ದರ ಪರಿಷ್ಕರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಸಾರ್ವಜನಿಕ ವಿಚಾರಣೆಯಲ್ಲಿ ದರ ಏರಿಕೆ ಅವಶ್ಯಕತೆ ಕುರಿತು ಪ್ರಸ್ತಾವನೆ ಸಲ್ಲಿಸಿದ ಅವರು, “ಮುಂದಿನ ಆರ್ಥಿಕ ವರ್ಷ 2025-26ರಲ್ಲಿ 609.56 ಕೋಟಿ ರೂ. ಕೊರತೆಗೆ 0.68 ಪೈಸೆ, 2026-27ನೇ ಸಾಲಿನ 970.30 ಕೋಟಿ ರೂ.ಕೊರತೆ ನೀಗಿಸಲು 1.03 ಪೈಸೆ ಮತ್ತು 2027-28ನೇ ಸಾಲಿನಲ್ಲಿ 1214.15 ಕೋಟಿ ರೂ. ಕೊರತೆ ಭರಿಸಲು ಪ್ರತಿ ಯೂನಿಟ್ ಗೆ 1.23 ರೂ.ನಷ್ಟು ದರ ಹೆಚ್ಚಿಸುವಂತೆ ಪ್ರಸ್ತಾಪ ಸಲ್ಲಿಸಿ, ಇದಕ್ಕೆ ತಕ್ಷಣವೇ ಅನುಮತಿ ನೀಡಬೇಕು” ಎಂದು ಮನವಿ ಮಾಡಿದರು.

ದರ ಏರಿಕೆಗೆ ಆಕ್ಷೇಪ:

ವಿದ್ಯುತ್ ದರ ಪರಿಷ್ಕರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಸಾರ್ವಜನಿಕ ವಿಚಾರಣೆಯಲ್ಲಿ ಪಾಲ್ಗೊಂಡಿದ್ದ ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷರಾದ ಕೆ.ಬಿ.ಲಿಂಗರಾಜು, ಮೈಸೂರು ಕೈಗಾರಿಕೆ ಸಂಘದ ಸುರೇಶ್ ಕುಮಾರ್ ಜೈನ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹೊಸಕೋಟೆ ಬಸವರಾಜು, ಮೈಸೂರು ಜಿಲ್ಲಾ ವಿದ್ಯುತ್ ಗ್ರಾಹಕರ ಹಿತರಕ್ಷಣಾ ವೇದಿಕೆಯ ಎಚ್.ಡಿ. ನವೀನರಾಜೇ ಅರಸ್ ಸೇರಿದಂತೆ ಹಲವರು ವಿದ್ಯುತ್‌ ದರ ಏರಿಕೆ ಮಾಡದಂತೆ ಮನವಿ ಮಾಡಿದರು.

ಅಲ್ಲದೇ, “2026ರಲ್ಲಿ 8982.28, 2027ರಲ್ಲಿ 9398.14 ಹಾಗೂ 2028ರಲ್ಲಿ 9836.16 ಮಿಲಿಯನ್‌ ಯೂನಿಟ್‌ನಷ್ಟು ವಿದ್ಯುತ್ ವಿದ್ಯುತ್ ಮಾರಾಟವಾಗುವ ನಿರೀಕ್ಷೆಯಿದ್ದು, ಪ್ರಸ್ತುತ ವಿದ್ಯುತ್ ದರದಲ್ಲಿ 2026ಕ್ಕೆ 7551.01 ಕೋಟಿ ರೂ., 2027ಕ್ಕೆ 7919.82 ಕೋಟಿ ರೂ. ಹಾಗೂ 2028ಕ್ಕೆ 8309.99 ಕೋಟಿ ರೂ. ಆದಾಯವಾಗುವ ನಿರೀಕ್ಷೆ ಹೊಂದಲಾಗಿದೆ. ಇದರಲ್ಲಿ ಕ್ರಮವಾಗಿ ವಿದ್ಯುತ್ ಖರೀದಿ ವೆಚ್ಚ 2026ರಲ್ಲಿ 6329.14, 2027ರಲ್ಲಿ 6671.16 ಹಾಗೂ 2028ರಲ್ಲಿ 7137.57 ಕೋಟಿ ರೂ.ಗಳಾಗಿವೆ. ಕಾರ್ಯ ಮತ್ತು ನಿರ್ವಹಣಾ ವೆಚ್ಚಗಳು 2026ರಲ್ಲಿ 1234.1, 2027ರಲ್ಲಿ 1332.74 ಹಾಗೂ 2028ರಲ್ಲಿ 1404.7 ಕೋಟಿ. ರೂ. ಆಗಲಿದೆ. ಅಲ್ಲದೇ ಸವಕಳಿ, ಬಡ್ಡಿ ಮತ್ತು ಹಣಕಾಸು ವೆಚ್ಚಗಳು, ಇತರೆ ಡೆಬಿಟ್‌ಗಳು, ಇತರೆ ಆದಾಯ, ಎಆರ್‌ಆರ್, 2026ಕ್ಕೆ ಮುಂದುವರಿಸಲಾದ 2024ರ ದರ ಹೆಚ್ಚಳ ಸೇರಿದಂತೆ 2026ಕ್ಕೆ 8160.57 ಕೋಟಿ ರೂ., 2027ಕ್ಕೆ 8890.12 ಕೋಟಿ ರೂ ಹಾಗೂ 2028ಕ್ಕೆ 9524.12 ಕೋಟಿ ರೂ. ಆಗಲಿದೆ” ಎಂದು ವಿವರಿಸಿದರು.

ಸೆಸ್ಕ್‌ ಕಂದಾಯದ ಕೊರತೆ ಕ್ರಮವಾಗಿ 2025-26ನೇ ಸಾಲಿನಲ್ಲಿ 609.56 ಕೋಟಿ ರೂ., 2026-27ನೇ ಸಾಲಿನಲ್ಲಿ 970.30 ಕೋಟಿ ರೂ. ಹಾಗೂ 2027-28ನೇ ಸಾಲಿನಲ್ಲಿ 1214.15 ಕೋಟಿ ರೂ.ಗಳಾಗಿದೆ. ಈ ಕೊರತೆ ಭರಿಸುವ ಸಲುವಾಗಿ 2025-26ನೇ ಸಾಲಿನಲ್ಲಿ ರೂ. 0.68, 2026-27ನೇ ಸಾಲಿನಲ್ಲಿ ರೂ. 1.03 ಹಾಗೂ 2027-28ನೇ ಸಾಲಿನಲ್ಲಿ ರೂ. 1.23 ಪ್ರತಿ ಯೂನಿಟ್‌ಗೆ ವಿದ್ಯುತ್‌ ದರ ಹೆಚ್ಚುವರಿ ಮಾಡಬೇಕಿದೆ.

– ಜಿ. ಶೀಲಾ, ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್‌.

“ಮುಂದಿನ ಮೂರು ವರ್ಷಗಳ ವಿದ್ಯುತ್ ಸರಬರಾಜಿನ ಸರಾಸರಿ ಬೆಲೆ, ಪ್ರತಿ ಯೂನಿಟ್‌ಗೆ (3/1)ನಂತೆ 2026ಕ್ಕೆ 9.08 ರೂ., 2027ಕ್ಕೆ 9.45 ರೂ, 2028ಕ್ಕೆ 9.68 ರೂ.ಆಗಲಿದೆ. ಸರಾಸರಿ  ಬೇಡಿಕೆ, ಪ್ರತಿ ಯೂನಿಟ್‌ಗೆ (2/1)ರೂ. ನಂತೆ 2026ಕ್ಕೆ 8.40ರೂ, 2027ಕ್ಕೆ 8.42 ರೂ. ಹಾಗೂ 2028ಕ್ಕೆ 8.44 ರೂ. ಆಗಲಿರುವ ಕಾರಣ 2026ಕ್ಕೆ 609.56 ಕೋಟಿ ರೂ., 2027ಕ್ಕೆ 970.3  ಕೋಟಿ ರೂ. ಹಾಗೂ 2028ಕ್ಕೆ 1214.1 ಕೋಟಿ ರೂ. ಕೊರತೆಯಾಗಲಿದೆ. ಈ ಕ೦ದಾಯ ಕೊರತೆಯನ್ನು ಪ್ರಸ್ತಾವಿತ ವಿದ್ಯುತ್ ದರ ಪರಿಷ್ಕರಣೆಯ ಮೂಲಕ ಭರಿಸಲು ವಿದ್ಯುತ್ ದರ ಪರಿಷ್ಕರಣೆ ಅಗತ್ಯವಿದೆ” ಎಂದು ವ್ಯವಸ್ಥಾಪಕ ನಿರ್ದೇಶಕರಾದ ಜಿ. ಶೀಲಾ ಅವರು ಪ್ರಸ್ತಾವನೆಯಲ್ಲಿ ವಿವರಿಸಿದರು. 

ಸಭೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯ೦ತ್ರಣ ಆಯೋಗದ ಸದಸ್ಯರಾದ ಎಚ್.ಕೆ. ಜಗದೀಶ್‌, ಜಾವೇದ್‌ ಅಖ್ತರ್‌, ಸೆಸ್ಕ್‌ ತಾಂತ್ರಿಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್‌ ರಾಜು ಸೇರಿದಂತೆ ನಿಗಮದ ಅಧಿಕಾರಿಗಳು ಭಾಗವಹಿಸಿದ್ದರು.