ಮಂಡ್ಯ: ರೈತರ ಪ್ರತಿಭಟನೆಯ ನಡುವೆಯೂ ತಮಿಳುನಾಡಿಗೆ ಹರಿಸಲಾಗುತ್ತಿರುವ ಕಾವೇರಿ ನೀರಿನ ಪ್ರಮಾಣವನ್ನು ರಾಜ್ಯ ಸರ್ಕಾರ ಹೆಚ್ಚಿಸಿದ್ದು, ಕೆ ಆರ್ ಎಸ್ ಡ್ಯಾಮ್ ನಿಂದ ಕಾವೇರಿ ನದಿಗೆ 7279 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸುತ್ತಿರುವ ಹಿನ್ನಲೆ 100 ಅಡಿಗೆ ಕೆ ಆರ್ ಎಸ್ ಜಲಾಶಯ ನೀರಿನ ಮಟ್ಟ ಕುಸಿದಿದೆ.
ರೈತರ ಪ್ರತಿಭಟನೆ
ಕೆಆರ್ ಎಸ್ ಡ್ಯಾಂ ನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಹಿನ್ನಲೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಧರಣಿ ನಡೆಯಲಿದ್ದು, ಇಂದಿನ ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳು,ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಮನವಿ ಮಾಡಲಾಗಿದೆ.
ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ಬೆಳಗ್ಗೆ 11 ಗಂಟೆಗೆ ಶ್ರೀರಂಗಪಟ್ಟಣದ ಕಾವೇರಿ ನದಿ ಸ್ನಾನಘಟ್ಟದಿಂದ ತಾಲೂಕು ಕಚೇರಿ ವರೆಗೆ ರೈತರು ಅರೆ ಬೆತ್ತಲೆ ಮೆರವಣಿಗೆ ನಡೆಸಲಿದ್ದಾರೆ.
ಇಂದಿನ ನೀರಿನ ಮಟ್ಟ
ಒಳಹರಿವು 1610 ಕ್ಯೂಸೆಕ್.
ಡ್ಯಾಮ್ ನ ಗರಿಷ್ಠ ಮಟ್ಟ 124.80 ಅಡಿ.
ಇಂದಿನ ಮಟ್ಟ 100.96 ಅಡಿ.
ಗರಿಷ್ಠ 49.452 ಟಿಎಂಸಿ.
ಇಂದು 23.571 ಟಿಎಂಸಿ.