ಮನೆ ರಾಜ್ಯ ರಾಜ್ಯದಲ್ಲಿ ಹೆಚ್ಚಿದ ಕೋವಿಡ್‌ ಪ್ರಕರಣ: 1478 ಮಂದಿಗೆ ಪಾಸಿಟಿವ್‌

ರಾಜ್ಯದಲ್ಲಿ ಹೆಚ್ಚಿದ ಕೋವಿಡ್‌ ಪ್ರಕರಣ: 1478 ಮಂದಿಗೆ ಪಾಸಿಟಿವ್‌

0

ಬೆಂಗಳೂರು (Bengaluru): ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ 1,478 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,90,057ಕ್ಕೆ ಏರಿಕೆಯಾಗಿದೆ.

ಇನ್ನೂ ರಾಜ್ಯದಲ್ಲಿ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ. ಸಾವಿನ ಸಂಖ್ಯೆ 40,089 ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ 1229 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 39,42,060ಕ್ಕೆ ಏರಿಕೆಯಾಗಿದೆ. ಇನ್ನು 7,866 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ 1,251 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 18,22,702ಕ್ಕೆ ಏರಿಕೆಯಾಗಿದೆ.

ಮೈಸೂರು ಜಿಲ್ಲೆಯಲ್ಲಿ 24 ಪ್ರಕರಣ:

ಮೈಸೂರಿನಲ್ಲಿ 24 ಮಂದಿಗೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 2,30,038ಕ್ಕೆ ಏರಿದೆ. ಇಂದು 14 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದು, ಇದುವರೆಗೂ 2,27,371 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 107 ಸಕ್ರಿಯ ಪ್ರಕರಣಗಳಿದೆ. ಇದುವರೆಗೂ 2,560 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಪ್ರಕರಣ:

ಬೆಂಗಳೂರು ಗ್ರಾಮಾಂತರ 32, ಬಾಗಲಕೋಟೆ, ಬೆಳಗಾವಿ ತಲಾ 15, ಬಳ್ಳಾರಿ 12, ಬೀದರ್ 04, ಚಾಮರಾಜನಗರ 07, ಚಿಕ್ಕಬಳ್ಳಾಪುರ 03, ಚಿತ್ರದುರ್ಗ, ಯಾದಗಿರಿ, ರಾಯಚೂರು ತಲಾ 01, ಧಾರವಾಡ 18, ಹಾಸನ, ಕಲಬುರಗಿ, ಉಡುಪಿ, ದಕ್ಷಿಣ ಕನ್ನಡ ತಲಾ 08, ಕೊಡಗು, ಶಿವಮೊಗ್ಗ, ವಿಜಯಪುರ ತಲಾ 06, ಕೋಲಾರ 13, ರಾಮನಗರ, ಕೊಪ್ಪಳ, ದಾವಣಗೆರೆ ತಲಾ 02, ಮಂಡ್ಯ 06, ಮೈಸೂರು 24, ತುಮಕೂರು 09, ಉತ್ತರಕನ್ನಡ 10, ಚಿಕ್ಕಮಗಳೂರು, ಗದಗ, ಹಾವೇರಿಯಲ್ಲಿ ಶೂನ್ಯ ಪ್ರಕರಣ ದಾಖಲಾಗಿವೆ.