ನವದೆಹಲಿ (New Delhi): ಇಸ್ಲಾಮೋಫೋಬಿಯಾವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಭಾರತ ಕೈ ಜೋಡಿಸಬೇಕು ಎಂದು ಮಲೇಷ್ಯಾ ಕರೆ ನೀಡಿದೆ.
ಬಿಜೆಪಿ ನಾಯಕರು ಪ್ರವಾದಿಯ ಬಗ್ಗೆ ನೀಡಿದ್ದ ಹೇಳಿಕೆಯನ್ನು ಖಂಡಿಸಿರುವ ಮಲೇಷ್ಯಾ, ಶಾಂತಿ, ಸ್ಥಿರತೆಯ ಹಿತಾಸಕ್ತಿಗಳಿಗೆ ಧಕ್ಕೆ ಉಂಟು ಮಾಡುವ ಯಾವುದೇ ಪ್ರಚೋದನಕಾರಿ ನಡೆಯನ್ನು ತಡೆಗಟ್ಟಬೇಕು ಹಾಗೂ ಇಸ್ಲಾಮೋಫೋಬಿಯಾವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಭಾರತ ಕೈ ಜೋಡಿಸಬೇಕು ಎಂದಿದೆ.
ಪ್ರವಾದಿಯ ಬಗ್ಗೆ ನೀಡಿದ್ದ ಹೇಳಿಕೆಯನ್ನು ಖಂಡಿಸಿರುವ ಇರಾಕ್, ಲಿಬಿಯಾ, ಟರ್ಕಿಗಳೊಂದಿಗೆ ಧ್ವನಿಗೂಡಿಸಿರುವ ಮಲೇಷ್ಯಾದ ವಿದೇಶಾಂಗ ಸಚಿವಾಲಯ, ಭಾರತದ ಹೈಕಮಿಷನರ್ ಗೆ ಸಮನ್ಸ್ ಕಳಿಸಿರುವುದಾಗಿ ಹೇಳಿದೆ.
ಇದೇ ವೇಳೆ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರನ್ನು ಅಮಾನತುಗೊಳಿಸಿರುವ ಆಡಳಿತಾರೂಢ ಪಕ್ಷದ ಕ್ರಮವನ್ನು ಮಲೇಷ್ಯಾ ಸ್ವಾಗತಿಸಿದೆ. ಬಿಜೆಪಿ ನಾಯಕರ ಹೇಳಿಕೆಗಳು ಸರ್ಕಾರದ ದೃಷ್ಟಿಕೋನವನ್ನು ಪ್ರತಿನಿಧಿಸುವುದಿಲ್ಲ ಎಂದು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.