ಮನೆ ಕ್ರೀಡೆ ಭಾರತ- ಪಾಕಿಸ್ತಾನ ಪಂದ್ಯದ ದಿನಾಂಕ ಬದಲು

ಭಾರತ- ಪಾಕಿಸ್ತಾನ ಪಂದ್ಯದ ದಿನಾಂಕ ಬದಲು

0

ಮುಂಬೈ: 2023ರ ಏಕದಿನ ವಿಶ್ವಕಪ್ ನ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಬದಲಾವಣೆ ಮಾಡಲಾಗಿದೆ. ಪಂದ್ಯವು ಯೋಜನೆಯಂತೆ ಅಹಮದಾಬಾದ್ ನಲ್ಲೇ ನಡೆಯಲಿದ್ದು, ದಿನಾಂಕ ಬದಲಾಗಿದೆ.

Join Our Whatsapp Group

ಈ ಮೊದಲು ಭಾರತ- ಪಾಕ್ ಹಣಾಹಣಿಯು ಅಕ್ಟೋಬರ್ 15ರಂದು ನಡೆಯಲಿದೆ ಎಂದು ಬಿಸಿಸಿಐ ಮತ್ತು ಐಸಿಸಿ ಬಿಡುಗಡೆ ಮಾಡಿದ ವೇಳಾಪಟ್ಟಿಯಲ್ಲಿ ತಿಳಿಸಲಾಗಿತ್ತು. ಇದೀಗ ಈ ಮಹತ್ವದ ಪಂದ್ಯ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 14ರಂದು ನಡೆಯಲಿದೆ ಎಂದು ವರದಿ ತಿಳಿಸಿದೆ.

ಅಕ್ಟೋಬರ್ 15ರಂದು ನವರಾತ್ರಿ ಆರಂಭವಾಗುವ ಕಾರಣದಿಂದ ಈ ಮಹತ್ವದ ಪಂದ್ಯಕ್ಕೆ ಭದ್ರತೆ ಒದಗಿಸುವುದು ಕಷ್ಟ ಎಂದು ಗುಜರಾತ್ ಪೊಲೀಸ್ ಇಲಾಖೆ ಹೇಳಿದ ಕಾರಣ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಕಳೆದ ವಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಏಕದಿನ ವಿಶ್ವಕಪ್‌ ನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದರು. 4-5 ದಿನಗಳ ಅಂತರವನ್ನು ಕಡಿಮೆ ಮಾಡಲು ಪಂದ್ಯಗಳ ದಿನಾಂಕಗಳು ಮತ್ತು ಸಮಯವನ್ನು ಬದಲಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮೂರು ದೇಶಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದ ಅವರು ಯಾವ ಮೂರು ದೇಶಗಳು ಎಂದು ಪ್ರಕಟಿಸಲಿಲ್ಲ.

ಸಂಭವನೀಯ ವೇಳಾಪಟ್ಟಿ ಬದಲಾವಣೆಯ ಘೋಷಣೆಯು ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನದ ಪಂದ್ಯಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಲ್ಲಿ ಅಹಮದಾಬಾದ್‌ ವಿಮಾನ ಮತ್ತು ಹೋಟೆಲ್‌ ಗಳನ್ನು ಬುಕಿಂಗ್ ಸೇರಿದಂತೆ ಈಗಾಗಲೇ ಪ್ರಯಾಣದ ವ್ಯವಸ್ಥೆಗಳನ್ನು ಮಾಡಿದ ಅಭಿಮಾನಿಗಳಿಗೆ ಕಳವಳ ಉಂಟು ಮಾಡಿದೆ.