ಮನೆ ರಾಷ್ಟ್ರೀಯ ಕೋವಿಡ್‌ : ದೇಶದಲ್ಲಿ 12 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು

ಕೋವಿಡ್‌ : ದೇಶದಲ್ಲಿ 12 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು

0

ನವದೆಹಲಿ (New Delhi): ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 12,899 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 15 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 4,32,96,692 ಕ್ಕೆ, ಮೃತರ ಸಂಖ್ಯೆ 5,24,855 ಕ್ಕೆ ಏರಿಕೆಯಾಗಿದೆ. ಇದುವರೆಗೆ 4,26,99,363 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 72,474 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇ 0.60 ರಷ್ಟಿದೆ.

ಮಹಾರಾಷ್ಟ್ರದಲ್ಲಿ 22,828, ಕೇರಳದಲ್ಲಿ 21,275, ದೆಹಲಿಯಲ್ಲಿ 5,119, ಕರ್ನಾಟಕದಲ್ಲಿ 4,825, ತಮಿಳುನಾಡಿನಲ್ಲಿ 3,073, ಹರಿಯಾಣದಲ್ಲಿ 2,945, ಉತ್ತರ ಪ್ರದೇಶದಲ್ಲಿ 2,323 ಸಕ್ರಿಯ ಪ್ರಕರಣಗಳಿವೆ.

ದೇಶದಾದ್ಯಂತ ಒಟ್ಟು 196.14 ಕೋಟಿ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ.