ಮನೆ ಕ್ರೀಡೆ ಟಿ20, ಏಕದಿನ ಸರಣಿಗಾಗಿ ಬಾಂಗ್ಲಾ ಪ್ರವಾಸ ಮಾಡಲಿರುವ ಭಾರತ

ಟಿ20, ಏಕದಿನ ಸರಣಿಗಾಗಿ ಬಾಂಗ್ಲಾ ಪ್ರವಾಸ ಮಾಡಲಿರುವ ಭಾರತ

0

ಹರ್ಮನ್‌ ಪ್ರೀತ್ ಕೌರ್ ನೇತೃತ್ವದ ಭಾರತ ವನಿತಾ ಪಡೆ ಜುಲೈನಲ್ಲಿ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿಗಾಗಿ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದೆ.

Join Our Whatsapp Group

ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್‌ ನಲ್ಲಿ ಭಾರತ ತಂಡ ಕೊನೆಯದಾಗಿ ಆಡಿತ್ತು. ಇದಲ್ಲದೆ, ಸೆಪ್ಟೆಂಬರ್ 2022 ರಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿತ್ತು.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮಹಿಳಾ ವಿಭಾಗದ ಅಧ್ಯಕ್ಷ ಶಫಿಯುಲ್ ಆಲಂ ಚೌಧರಿ ನಡೆಲ್ ಈ ಬಗ್ಗೆ ಮಾಹಿತಿ ನೀಡಿದ್ದು. “ಹೌದು, ನಾವು ಜುಲೈನಲ್ಲಿ ಭಾರತ ಮಹಿಳಾ ತಂಡದ ವಿರುದ್ಧ ವೈಟ್ ಬಾಲ್ ಸರಣಿಯನ್ನು ಆಡಲಿದ್ದೇವೆ. ಎಲ್ಲಾ ಪಂದ್ಯಗಳನ್ನು ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಾಗುವುದು” ಎಂದು ಕ್ರಿಕ್ಬಜ್ ಜೊತೆ ಮಾತನಾಡುತ್ತಾ ಹೇಳಿದರು.

ಈ ಮೈದಾನದಲ್ಲಿ ಕೊನೆಯ ಬಾರಿಗೆ ಮಹಿಳಾ ಪಂದ್ಯವನ್ನು 2012ರಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಆಯೋಜಿಸಲಾಗಿತ್ತು. ವೇಳಾಪಟ್ಟಿಯ ಪ್ರಕಾರ, ಎಲ್ಲಾ ಪಂದ್ಯಗಳು ಬೆಳಿಗ್ಗೆ ಪ್ರಾರಂಭವಾಗುತ್ತವೆ. ಜುಲೈ 6 ರಂದು ಟೀಂ ಇಂಡಿಯಾ ಢಾಕಾಗೆ ತೆರಳಲ್ಲಿದ್ದು, ಜುಲೈ 9 ರಿಂದ ಟಿ20 ಸರಣಿ ಆರಂಭವಾಗಲಿದೆ. ಆ ಬಳಿಕ ಜುಲೈ 11 ಮತ್ತು 13 ರಂದು ಉಳಿದೆರಡು ಟಿ20 ಪಂದ್ಯಗಳು ನಡೆಯಲ್ಲಿವೆ.

ಟಿ20 ಸರಣಿ ಮುಗಿದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 16 ರಂದು ಆರಂಭವಾಗಲಿದ್ದು, ಎರಡನೇ ಪಂದ್ಯ ಜುಲೈ 19 ರಂದು ನಡೆಯಲಿದೆ. ಭಾರತದ ಬಾಂಗ್ಲಾದೇಶ ಪ್ರವಾಸವು ಜುಲೈ 22 ರಂದು ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ.

ಬಾಂಗ್ಲಾದೇಶ ಪ್ರವಾಸವು ಜುಲೈ 22 ರಂದು ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ.