ಮನೆ ಕ್ರೀಡೆ 2-1 ಅಂತರದಿಂದ ವೆಸ್ಟ್ಇಂಡೀಸ್ ವಿರುದ್ಧ ಸರಣಿ ಏಕದಿನ ಸರಣಿ ಗೆದ್ದ ಭಾರತ

2-1 ಅಂತರದಿಂದ ವೆಸ್ಟ್ಇಂಡೀಸ್ ವಿರುದ್ಧ ಸರಣಿ ಏಕದಿನ ಸರಣಿ ಗೆದ್ದ ಭಾರತ

0

ತರೌಬಾ(ವೆಸ್ಟ್ಇಂಡೀಸ್) : ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು 2-1 ರಿಂದ ಕೈವಶ ಮಾಡಿಕೊಂಡಿತು. ವೆಸ್ಟ್ ಇಂಡೀಸ್ ವಿರುದ್ಧದ 3ನೇ, ಅಂತಿಮ ಏಕದಿನ ಪಂದ್ಯದಲ್ಲಿ 200 ರನ್ ಅಂತರದ ಜಯ ದಾಖಲಿಸಿತು.

Join Our Whatsapp Group

ಟಾಸ್ ಗೆದ್ದ ವಿಂಡೀಸ್, ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಗೆ ಆರಂಭಿಸಿದ ಭಾರತ ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ವಿಂಡೀಸ್ ಬೌಲಿಂಗ್ ವಿಭಾಗದ ಮೇಲೆ ಆರಂಭದಲ್ಲೇ ಸವಾರಿ ನಡೆಸಿದರು. ಆರಂಭಿಕರಿಬ್ಬರೂ ಅರ್ಧಶತಕದ ಇನ್ನಿಂಗ್ಸ್ ಆಡುವುದರೊಂದಿಗೆ 19.4 ಓವರ್ಗಳಲ್ಲಿಯೇ ತಂಡದ ಮೊತ್ತವನ್ನು 143 ರನ್ಗಳ ಗಡಿ ದಾಟಿಸಿದರು.

ಗಿಲ್ ಅಂತಿಮವಾಗಿ ಅರ್ಧಶತಕದ ಇನ್ನಿಂಗ್ಸ್ ಆಡಿ ಮಿಂಚಿದರು. ಆದರೆ 85 ರನ್ ಸಿಡಿಸಿ ಶತಕದತ್ತ ಸಾಗುತ್ತಿದ್ದ ಗಿಲ್, ಸ್ಪಿನ್ ಬಲೆಗೆ ಬಿದ್ದು ವಿಕೆಟ್‌ ಒಪ್ಪಿಸಿದ್ದರು . ಮೂರನೇ ಕ್ರಮಾಂಕದಲ್ಲಿ ಬಂದ ರುತುರಾಜ್ ಗಾಯಕ್ವಾಡ್ (8) ಔಟದರು, ನಾಲ್ಕನೇ ಕ್ರಮಾಂಕದಲ್ಲಿ ಬಂದು  ಬ್ಯಾಟಿಂಗ್‌ ಮಾಡಿದ ಸಂಜು ಸ್ಯಾಮ್ಸನ್ 41 ಎಸೆತಗಳಲ್ಲಿ 51 ರನ್ ಬಾರಿಸಿ, ಪೆವಿಲಿಯನ್‌ ಸೇರಿದರು.

ಟೀಂ ಇಂಡಿಯಾ 39 ಓವರ್ ಗಳಲ್ಲಿಯೇ 240 ರನ್ ದಾಖಲಿಸಿತ್ತು, ನಂತರ ಸೂರ್ಯಕುಮಾರ್ ಯಾದವ್ (35) ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಜೊತೆಗೂಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಸೂರ್ಯಕುಮಾರ್ ಯಾದವ್ (35) ಮತ್ತು ನಾಯಕ ಹಾರ್ದಿಕ್ ಪಾಂಡ್ಯ   5 ಸಿಕ್ಸರ್, 4 ಬೌಂಡರಿ 70 ರನ್ ಬಾರಿಸಿದರು. ಇದರ ಆಧಾರದ ಮೇಲೆ ತಂಡ  50ಓವರ್‌ ಗೆ 5ವಿಕೆಟ್ ಕಳೆದುಕೊಂಡು  351 ರನ್ ಕಲೆ ಹಾಕಿತು.

ದೊಡ್ಡ ಮೊತ್ತ ಗುರಿ ಬೆನ್ನಟ್ಟಿದ ವಿಂಡೀಸ್ ಭಾರತದ ಬೌಲರ್ ಗಳನ್ನು ಎದುರಿಸಲಾಗದೇ ಪೆವಿಲಿಯನ್ ಗೆ ಪರೇಡ್ ನಡೆಸಿದರು. ಅಲಿಕ್ ಅಥಾಂಜೆ 32, ಸ್ಪಿನ್ನರ್ ಗುಡಕೇಶ್ ಮೋಟಿ 39, ಅಲ್ಜಾರಿ ಜೋಸೆಫ್ 26, ಯನ್ನಿಕ್ ಕಾರಿಯಾ 19 ರನ್ ಗಳಿಸಿದರೆ, ಉಳಿದವರು ಒಂದಂಕಿ ದಾಟಲಿಲ್ಲ. ಇದರಿಂದ ತಂಡ 35.3 ಓವರ್ ಗಳಲ್ಲಿ 151 ರನ್ಗೆ ಗಂಟುಮೂಟೆ ಕಟ್ಟಿತು. ಮಾರಕ ದಾಳಿ ನಡೆಸಿದ ಶಾರ್ದೂಲ್ ಠಾಕೂರ್ 4, ಮುಕೇಶ್ ಕುಮಾರ್ 3, ಕುಲದೀಪ್ ಯಾದವ್ 2 ವಿಕೆಟ್ ಕಿತ್ತು ವಿಂಡೀಸ್ ಸಂಹಾರ ಮಾಡಿದರು.

ಕೊನೆಗೆ ಭಾರತ ತಂಡ 2-1 ಆಂತದಿಂದ ವೆಸ್ಟ್ ಇಂಡೀಸ್ ವಿರುದ್ದ ಸರಣಿ ಗೆದ್ದಿತ್ತು.