Saval TV on YouTube
ನವದೆಹಲಿ(Newdelhi): ಭಾರತೀಯ ಸೇನಾ ವಾಹನ ಕಣಿವೆಗೆ ಉರುಳಿದ ಪರಿಣಾಮ 16 ಮಂದಿ ಯೋಧರು ಮೃತಪಟ್ಟಿರುವ ದುರಂತ ಉತ್ತರ ಸಿಕ್ಕಿಂನ ಝೆಮಾದಲ್ಲಿ ಶುಕ್ರವಾರ ನಡೆದಿದೆ.
ಚಟ್ಟೆನ್’ನಿಂದ ಥಂಗು ಪ್ರದೇಶಕ್ಕೆ ತೆರಳುತ್ತಿದ್ದ ಮೂರು ಸೇನಾ ವಾಹನಗಳ ಪೈಕಿ ಒಂದು ವಾಹನ ಅಪಘಾತಕ್ಕೀಡಾಗಿದೆ.
ದಾರಿ ಮಧ್ಯೆ, ಝೆಮಾ ಬಳಿ ಕಡಿದಾದ ಇಳಿಜಾರಿನಲ್ಲಿ ಆಯತಪ್ಪಿದ ಸೇನಾ ವಾಹನ ಕಣಿವೆಗೆ ಉರುಳಿದೆ.
ಡಿಸೆಂಬರ್ 23ರಂದು ಉತ್ತರ ಸಿಕ್ಕಿಂನ ಝೆಮಾ ಬಳಿ ಬಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಂಭವಿಸಿದ ಸೇನಾ ಟ್ರಕ್ ಅಪಘಾತದಲ್ಲಿ ಭಾರತೀಯ ಸೇನೆಯ 16 ಮಂದಿ ಯೋಧರು ಜೀವ ಕಳೆದುಕೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.
16 ಮೃತದೇಹಗಳನ್ನೂ ಹೊರತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.














