ಮನೆ ಉದ್ಯೋಗ ಭಾರತ ಆರ್ಥಿಕ ಸೇವೆ, ಅಂಕಿಅಂಶಗಳ ಸೇವೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ ಆರ್ಥಿಕ ಸೇವೆ, ಅಂಕಿಅಂಶಗಳ ಸೇವೆ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಕೇಂದ್ರ ಲೋಕಸೇವಾ ಆಯೋಗವು ಭಾರತ ಆರ್ಥಿಕ ಸೇವೆ ಹಾಗೂ ಭಾರತ ಅಂಕಿಅಂಶ ಸೇವೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪರೀಕ್ಷೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಪರೀಕ್ಷೆ ಮೂಲಕ ಒಟ್ಟು 51 ಹುದ್ದೆಗಳನ್ನು ಎರಡು ಸೇವೆಗಳಲ್ಲಿ ಭರ್ತಿ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

Join Our Whatsapp Group

ಹುದ್ದೆಗಳ ವಿವರ

ಭಾರತ ಆರ್ಥಿಕ ಸೇವೆ ಹುದ್ದೆಗಳು : 18

ಭಾರತ ಅಂಕಿಅಂಶ ಸೇವೆ ಹುದ್ದೆಗಳು: 33

ಒಟ್ಟು ಹುದ್ದೆಗಳ ಸಂಖ್ಯೆ : 51

ಯುಪಿಎಸ್ ಸಿ ಐಇಎಸ್, ಐಎಸ್ಎಸ್ ಪರೀಕ್ಷೆ ಕುರಿತ ವೇಳಾಪಟ್ಟಿ

ಆನ್ ಲೈನ್ ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ : 20-04-2023

ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 09-05-2023 ರ ಸಂಜೆ 6 ಗಂಟೆ ವರೆಗೆ.

ಬ್ಯಾಂಕ್ ಗಳಲ್ಲಿ ನೇರವಾಗಿ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 08-05-2023

ಆನ್ ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ: 09-05-2023 ರ ಸಂಜೆ 6 ಗಂಟೆ.

ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ : 10-05-2023 ರಿಂದ 16-05-2023 ರವರೆಗೆ.

ಐಇಎಸ್, ಐಎಸ್ಎಸ್ ಪರೀಕ್ಷೆ ದಿನಾಂಕ: 23-06-2023

ಪರೀಕ್ಷೆ ತೆಗೆದುಕೊಳ್ಳಲು ಶೈಕ್ಷಣಿಕ ಅರ್ಹತೆಗಳು

ಭಾರತೀಯ ಆರ್ಥಿಕ ಸೇವೆ: ಅರ್ಥಶಾಸ್ತ್ರ / ಅಪ್ಲೈಡ್ ಎಕನಾಮಿಕ್ಸ್ / ಬ್ಯುಸಿನೆಸ್ ಎಕನಾಮಿಕ್ಸ್ / ಎಕೊನಾಮೆಟ್ರಿಕ್ಸ್ ಸಬ್ಜೆಕ್ಟ್ ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಭಾರತ ಸಂಖ್ಯಾಶಾಸ್ತ್ರ ಸೇವೆ: ಸ್ಟ್ಯಾಟಿಸ್ಟಿಕ್ಸ್ / ಮ್ಯಾಥ್ಸ್ ಸ್ಟ್ಯಾಟಿಸ್ಟಿಕ್ಸ್ / ಅಪ್ಲೈಡ್ ಸ್ಟ್ಯಾಟಿಸ್ಟಿಕ್ಸ್ ವಿಷಯಗಳಲ್ಲಿ ಬ್ಯಾಚುಲರ್ ಡಿಗ್ರಿ ಅಥವಾ ಮಾಸ್ಟರ್ ಡಿಗ್ರಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಅರ್ಹತೆಗಳು

ಯುಪಿಎಸ್ಸಿ ಐಇಎಸ್, ಐಎಸ್ ಎಸ್ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಬಯಸುವವರಿಗೆ ಕನಿಷ್ಠ 21 ವರ್ಷ ಆಗಿರಬೇಕು. ಆಗಸ್ಟ್ 01 ಕ್ಕೆ ಗರಿಷ್ಠ 30 ವರ್ಷ ವಯಸ್ಸು ಮೀರಬಾರದು. ಕೇಂದ್ರ ಸರ್ಕಾರದ ವಯೋಮಿತಿ ಸಡಿಲಿಕೆ ನಿಯಮಗಳು ಒಬಿಸಿ, ಎಸ್ ಸಿ / ಎಸ್ ಟಿ / ವಿಕಲಚೇತನ ಅಭ್ಯರ್ಥಿಗಳಿಗೆ ಅನ್ವಯವಾಗಲಿವೆ.

ಅಪ್ಲಿಕೇಶನ್ ಶುಲ್ಕ ವಿವರ

ಜೆನೆರಲ್ ಕೆಟಗರಿ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ರೂ.200.

SC / ST/ PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ರಿಜಿಸ್ಟ್ರೇಷನ್ ಪಡೆಯುವುದು ಹೇಗೆ?

– ಆಯೋಗದ ಒಟಿಆರ್ಪಿ ವೆಬ್ ಸೈಟ್ https://upsconline.nic.in/upsc/OTRP/index.php ಗೆ ಭೇಟಿ ನೀಡಿ.

– ಮೊದಲು ಸಂಪರ್ಕ ಮಾಹಿತಿಗಳನ್ನು ನೀಡಿ ರಿಜಿಸ್ಟ್ರೇಷನ್ ಪಡೆಯಿರಿ.

– ಈಗಾಗಲೇ ರಿಜಿಸ್ಟ್ರೇಷನ್ ಪಡೆದಿರುವವರು ‘Already Registered’ ಎಂದಿರುವಲ್ಲಿ ಕ್ಲಿಕ್ ಮಾಡಿ.

– ನಂತರ ಲಾಗಿನ್ ಡೀಟೇಲ್ಸ್ ನೀಡಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಿ.

– ಅರ್ಜಿ ಪೂರ್ಣಗೊಂಡ ನಂತರ ಮುಂದಿನ ರೆಫರೆನ್ಸ್ಗಾಗಿ ಸೇವ್ ಮಾಡಿಕೊಳ್ಳಿ.

ಐಇಎಸ್ / ಐಎಸ್ಎಸ್ ಹುದ್ದೆಗಳಿಗೆ ಆರಂಭಿಕ ಬೇಸಿಕ್ ಪೇ ರೂ.56,100 ಇರುತ್ತದೆ. ಇದರ ಜತೆಗೆ ಟಿಎ, ಡಿಎ, ಹೆಚ್ಆರ್ ಎ ಸೇರಿ ಇತರೆ ಎಲ್ಲ ಭತ್ಯೆಗಳು ಸೇರಿಕೊಳ್ಳಲಿವೆ.