ಮನೆ ಅಪರಾಧ ಕೆನಡಾದಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ದಾಳಿ: ಪಂಜಾಬ್‌ನಲ್ಲಿ ಶೋಧ ನಡೆಸಿದ ಎನ್‌ಐಎ

ಕೆನಡಾದಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ದಾಳಿ: ಪಂಜಾಬ್‌ನಲ್ಲಿ ಶೋಧ ನಡೆಸಿದ ಎನ್‌ಐಎ

0

ನವದೆಹಲಿ: ಕೆನಡಾದಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ಖಾಲಿಸ್ತಾನ ಪರ ಬೆಂಬಲಿಗರು ದಾಳಿ ನಡೆಸಿದ್ದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂದು (ಶುಕ್ರವಾರ) ಪಂಜಾಬ್‌ನಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Our Whatsapp Group

ಈ ಪ್ರಕರಣ ಸಂಬಂಧ ಕಳೆದ ವರ್ಷ ಜೂನ್‌ನಲ್ಲಿ ಎಎನ್‌ಎ ಪ್ರಕರಣ ದಾಖಲಿಸಿಕೊಂಡಿತ್ತು. ತನಿಖೆಯ ಭಾಗವಾಗಿ ಪಂಜಾಬ್‌ನಲ್ಲಿ ಎನ್‌ಐಎ ಶೋಧ ನಡೆಸಿದೆ ಎಂದು ಅವರು ಹೇಳಿದ್ದಾರೆ.

2023ರ ಮಾರ್ಚ್ 23ರಂದು ಕೆನಡಾದ ಒಟ್ಟಾವಾದಲ್ಲಿ ಭಾರತದ ರಾಯಭಾರ ಕಚೇರಿ ಹೊರಗಡೆ ಖಾಲಿಸ್ತಾನ ಪರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು.

ಭಾರತ ವಿರೋಧ ಘೋಷಣೆ ಕೂಗಿದ್ದ ಖಾಲಿಸ್ತಾನ ಪರ ಬೆಂಬಲಿಗರು, ಭಾರತದ ಹೈಕಮಿಷನ್‌ ಕಟ್ಟಡಕ್ಕೆ ಎರಡು ಗ್ರೆನೇಡ್‌ಗಳನ್ನು ಎಸೆದಿದ್ದರು. ಅಲ್ಲದೆ ಗೋಡೆಯ ಮೇಲೆ ಖಾಲಿಸ್ತಾನ ಧ್ವಜಗಳನ್ನು ಕಟ್ಟಿದ್ದರು.