ವಿದೇಶ ಪ್ರವಾಸ ಎಂದಾಕ್ಷಣ ಅನೇಕ ರೋಮಾಂಚಕ ತಾಣಗಳು ಕಣ್ಣಿನ ಮುಂದೆ ಹಾದು ಹೋಗುತ್ತವೆ. ಇನ್ನು, ವಿದೇಶ ಪ್ರವಾಸ ಜೇಬಿಗೆ ಸಂಪೂರ್ಣವಾಗಿ ಕತ್ತರಿ ಎಂಬುದು ಕೂಡ ಅಷ್ಟೇ ಸತ್ಯ. ನಿಮ್ಮ ವಿದೇಶ ಪ್ರವಾಸದ ಬಯಕೆಯನ್ನು ಸಕಾರಗೊಳಿಸಲು ಭಾರತೀಯ ರೈಲ್ವೆ ಶ್ರಮಿಸುತ್ತಿದೆ. ಅದೇನೆಂದರೆ, IRCTC ಯು ಕೈಗೆಟುವ ಬೆಲೆಯಲ್ಲಿ ದುಬೈ ಪ್ರವಾಸ ಮಾಡಿಸುತ್ತದೆ.
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) 5 ದಿನಗಳು ಹಾಗು 4 ರಾತ್ರಿಗಳ ದುಬೈ ಪ್ರವಾಸ ಪರಿಚಯಿಸಿದೆ.
ದುಬೈ ಪ್ರವಾಸ
IRCTCಯ ಈ ದುಬೈ ಪ್ರವಾಸವು ಈಗಾಗಲೇ ಹೇಳಿದಂತೆ 5 ದಿನಗಳು ಹಾಗು 4 ರಾತ್ರಿಗಳ ಪ್ರವಾಸವಾಗಿದೆ. ಈ ಅದ್ಭುತವಾದ ದೇಶಕ್ಕೆ ನೀವು ಮಾರ್ಚ್ 11 ರಿಂದ 15 ರವರೆಗೆ ಪ್ರವಾಸ ಮಾಡುತ್ತೀರಿ.
ಪ್ಯಾಕೇಜ್ನ ಪ್ರಕಾರ, ನೀವು ವಿಮಾನದಲ್ಲಿ ಪ್ರಯಾಣಿಸುತ್ತೀರಿ. ಆಹಾರ, ವಸತಿ ಸೇರಿದಂತೆ ಅನೇಕ ಪ್ರಯಾಣ ವಿಮಾ ಸೌಲಭ್ಯಗಳನ್ನು ಪಡೆಯುತ್ತಿರಿ.
ಟಿಕೆಟ್ ಬೆಲೆ ಎಷ್ಟು?
ಪ್ಯಾಕೇಜ್ನ ಪ್ರಕಾರ, ಇಬ್ಬರು ಅಥವಾ ಮೂವರು ಒಟ್ಟಿಗೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದರೆ ವ್ಯಕ್ತಿಗೆ 85,100 ರೂಪಾಯಿಗಳು, ಅದೇ ಒಬ್ಬ ವ್ಯಕ್ತಿ ಮಾತ್ರ ಟಿಕೆಟ್ ಬುಕ್ ಮಾಡಿದರೆ 101800 ರೂಪಾಯಿ.
ಒಂದು ವೇಳೆ ನೀವು ಮಗುವಿನೊಂದಿಗೆ ಪ್ರಯಾಣಿಸಲು ಯೋಜಿಸಿದರೆ ಹಾಸಿಗೆ ಸಹಿತ 84400 ಹಾಗೆಯೇ ಹಾಸಿಗೆ ರಹಿತ 73300 ರೂಪಾಯಿಗಳಾಗಿರುತ್ತದೆ.
ಪ್ಯಾಕೇಜ್ನ ಟಿಕೆಟ್ ಬೆಲೆಯಲ್ಲಿ ಇವೆಲ್ಲಾ ಸೇಪರ್ಡೆಗೊಳ್ಳುವುದಿಲ್ಲ
ವಿಮಾನ ನಿಲ್ದಾಣ ತೆರಿಗೆ ಅಥವಾ ಇಂಧನ ಸರ್ಚಾರ್ಜ್ನಲ್ಲಿ ಯಾವುದೇ ಹೆಚ್ಚಳ.
ಆಹಾರವನ್ನು ಈಗಾಗಲೇ ನಿಗದಿ ಪಡಿಸಲಾಗಿರುತ್ತದೆ. ವಿಶೇಷವಾದ ಮೆನುವಿನ ಆಯ್ಕೆಗಳು ಲಭ್ಯವಿಲ್ಲ.
ಚಾಲಕರು, ಮಾರ್ಗದರ್ಶಿಗಳು, ಪ್ರತಿನಿಧಿಗಳು ಇತ್ಯಾದಿಗಳಿಗೆ ಎಲ್ಲಾ ರೀತಿಯ ಸಲಹೆಗಳು.
ನೆಚ್ಚಿನ ಆಹಾರ, ಲಾಂಡ್ರಿ, ಮದ್ಯ, ಆಹಾರ ಮತ್ತು ಪಾನೀಯಗಳಂತಹ ಯಾವುದೇ ವೈಯಕ್ತಿಕ ವೆಚ್ಚಗಳು ಪ್ಯಾಕೇಜ್ನ ಅಡಿಯಲ್ಲಿ ಬರುವುದಿಲ್ಲ. ಇದೆಲ್ಲಾ ವೈಯಕ್ತಿಕ ಖರ್ಚುಗಳಾಗಿವೆ.
JPEG ನಲ್ಲಿರುವ ಪಾಸ್ ಪೋರ್ಟ್ ನ ಕಲರ್ ಸ್ಕ್ಯಾನ್ ಮಾಡಿದ ನಕಲು. ಇದು ಪ್ರವೇಶದ ದಿನಾಂಕದಿಂದ 6 ತಿಂಗಳವರೆಗೆ ಮಾನ್ಯವಾಗಿರುತ್ತದೆ.
ಬುಕಿಂಗ್ ಸಮಯದಲ್ಲಿ ಪ್ಯಾನ್ ಕಾರ್ಡ್ನ ಫೋಟೋಕಾಪಿ. JPEG ಸ್ವರೂಪದಲ್ಲಿ ಸ್ಕ್ಯಾನ್ ಮಾಡಿದ ಪ್ರತಿ.
JPEG ಸ್ವರೂಪದಲ್ಲಿ ಅರ್ಜಿದಾರರ ಛಾಯಾಚಿತ್ರದ ಬಣ್ಣದ ಸ್ಕ್ಯಾನ್ ಮಾಡಿದ ಪ್ರತಿ. ಛಾಯಾಚಿತ್ರವು 3 ತಿಂಗಳಿಗಿಂತ ಹೆಚ್ಚು ಹಳೆಯದಾಗಿರಬಾರದು, ಅದರ ಗಾತ್ರವು 3.5×4.5 ಸೆಂ.
ಛಾಯಾಚಿತ್ರದ ಹಿನ್ನೆಲೆ ಬಿಳಿಯಾಗಿರಬೇಕು ಮತ್ತು ನಿಮ್ಮ ಮುಖ ನಿಖರವಾಗಿ 80% ಗೋಚರಿಸಬೇಕು.