ಮನೆ ಮನೆ ಮದ್ದು ಬಸಳೆ ಸೊಪ್ಪು

ಬಸಳೆ ಸೊಪ್ಪು

0

 ಔಷಧೀಯ ಗುಣಗಳು :

Join Our Whatsapp Group

೧ ಬಸಳೆ ಸೊಪ್ಪಿನ ಸೇವನೆಯಿಂದ ಹಸಿವು ಹೆಚ್ಚುತ್ತದೆ.

೧ ಮಲಬದ್ಧತೆಯಿಂದ ಬಳಲುವವರಿಗೆ ಬಸಳೆಸೊಪ್ಪಿನ ಪಲ್ಯದ ಸೇವನೆ ಒಳ್ಳೆಯದು.

೧ ದೇಹದ ತೂಕ ಹೆಚ್ಚಾಗಬೇಕೆನ್ನುವವರು ಬಸಳೆ ಸೊಪ್ಪನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು.

★ಆಮಶಂಕೆಯಿಂದ ಬಳಲುವವರು ಬಸಳೆಸೊಪ್ಪಿನ ರಸ ಸೇವನೆ ಮಾಡುವುದರಿಂದ ಆಮ ಬೀಳುವುದು ನಿಲ್ಲುತ್ತದೆ. ಪ್ರತಿ ಮೂರು ಗಂಟೆಗಳಿಗೊಮ್ಮೆ ಬಸಳೆಸೊಪ್ಪಿನ ರಸವನ್ನು ಮಜ್ಜಿಗೆಯೊಂದಿಗೆ ಕುಡಿಯಬೇಕು.

★ಬಸಳೆ ಸೊಪ್ಪು ಜ್ವರ ನಿವಾರಕ ಮತ್ತು ಶಕ್ತಿವರ್ಧಕವಾಗಿಯೂ ಕೆಲಸ ಮಾಡುತ್ತದೆ.

★ಸ್ವರ ಒಡೆದಿದ್ದರೆ ಬಸಳೆ ಸೊಪ್ಪಿನ ರಸವನ್ನು ಜೇನುತುಪ್ಪದೊಂದಿಗೆ ಸೇವನೆ ಮಾಡಬೇಕು.

★ಕುರುಗಳಾಗಿರುವಾಗ ಬಸಳೆಯನ್ನು ಜಜ್ಜಿ ಮೇಲೆ ಲೇಪಿಸುವುದರಿಂದ ಕುರು ಬೇಗನೇ

ಪಕ್ವವಾಗುತ್ತದೆ.

★ಸುಟ್ಟಗಾಯ ಮತ್ತು ಬೊಬ್ಬೆಗಳಾಗಿರುವಾಗ ಬಸಳೆ ಎಲೆಯ ರಸವನ್ನು ಬೆಣ್ಣೆಯಲ್ಲಿ ಮಿಶ್ರ ಮಾಡಿ ಲೇಪಿಸಬೇಕು.

★ಮೇಲಿಂದ ಮೇಲೆ ತಲೆನೋವು ಬರುತ್ತಿದ್ದಲ್ಲಿ ಬಸಳೆಯ ಲೋಳೆಯಂತಹ ರಸವನ್ನು ಹಣೆಯ ಮೇಲೆ ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ.

★ ಬಾಯಿಹುಣ್ಣಿನಿಂದ ಬಳಲುವವರು ಬಸಳೆಯ ಎಲೆಗಳನ್ನು ಅಗಿದು ತಿನ್ನಬೇಕು ಬಸಳೆ ಬಾಯಿಯ ದುರ್ಗಂಧವನ್ನು ನಿವಾರಿಸುತ್ತದೆ.

★ಬಾಣಂತಿಯರು ಬಸಳೆಸೊಪ್ಪನ್ನು ಆಹಾರದಲ್ಲಿ ಹೆಚ್ಚು ಬಳಸುವುದರಿಂದ ಎದೆಹಾಲಿನ ಉತ್ಪತಿ ಹೆಚ್ಚುತ್ತದೆ.

★ಕ್ಯಾನ್ಸರ್ ನಿಯಂತ್ರಣ : ಬಸಳೆಯಲ್ಲಿ ಫೈಟೊಕೆಮಿಕಲ್ಸ್ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್ ಇದ್ದು ಇವು ಕ್ಯಾನ್ಸರ್ ನಿಯಂತ್ರಿಸುವಲ್ಲಿ ಸಹಕಾರಿಯಾಗಬಲ್ಲವು

 ಅಡುಗೆ

 ಸಲಾಡ್ : ಈರುಳ್ಳಿ, ಗಜ್ಜರಿ (ಕ್ಯಾರಟ್), ಸೌತೆಕಾಯಿ, ಮೂಲಂಗಿಗಳನ್ನು ತುರಿದು ಅದರೊಂದಿಗೆ ಬಸಳೆಯನ್ನು ಸಣ್ಣಗೆ ಹೆಚ್ಚಿಕೊಂಡು ನಿಂಬೆರಸ, ಉಪ್ಪು, ಕೊತ್ತಂಬರಿ ಸೊಪ್ಪು ಬೆರೆಸಿ ಸಲಾಡ್ ತಯಾರಿಸಬೇಕು.

 ಬಸಳೆ ಸೊಪ್ಪು ಮತ್ತು ತರಕಾರಿ ಸಾರು : ಬಸಳೆಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳುವುದು 2 ಆಲೂಗೆಡ್ಡೆ ಅಥವಾ ಬೀನ್ಸ್ ಅಥವಾ ಕ್ಯಾರಟ್, 2 ಈರುಳ್ಳಿಯನ್ನು ಸಾಧಾರಣ  ಗಾತ್ರಕ್ಕೆ ಹೆಚ್ಚಿಕೊಳ್ಳಬೇಕು ಟೊಮ್ಯಾಟೊ ಕೂಡ ಹೆಚ್ಚಿಕೊಳ್ಳಬೇಕು ಒಂದು ಬಟ್ಟಲು ತೆಂಗಿನತುರಿ, ಒಂದು ತುಂಡು ಶುಂಠಿ, 4 ಎಸಳು ಬೆಳ್ಳುಳ್ಳಿ, ಒಂದು ಚಿಕ್ಕತುಂಡು ಚಿಕ್ಕ ಒಂದು ಲವಂಗ, 4 ಚಮಚ ಗಸಗಸೆ, 1 ಚಮಚ ಖಾರದ ಪುಡಿ, 2 ಚಮಚ ದನಿಯಾ ಪು ಒಂದು ಲವೆ ಕೊಳ್ಳಬೇಕು. ಈರುಳ್ಳಿಯನ್ನು ಒಗ್ಗರಣೆಗೆ ಹಾಕಿ ಕೆಂಪಾದ, ಮೇಲೆ ಸೊಪು ಹಾಕಿ ಬಾಡಿಸಿಕೊಳ್ಳಬೇಕು. ಚೆನ್ನಾಗಿ ಬಾಡಿದ ಮೇಲೆ ಬೇಯಿಸಿದ ತರಕಾರಿ, ಟೊಮ್ಯಾಟೊ ಹಾಕಿ ಬಾಡಿಸಿ, ರುಬ್ಬಿದ ಮಸಾಲೆ ಮತ್ತು ಉಪ್ಪು ಹಾಕಬೇಕು.

 ಬಸಳೆ ದೋಸೆ : ಒಂದು ಗಂಟೆ ನೆನೆಸಿದ ಅಕ್ಕಿಯೊಂದಿಗೆ ಬಸಳೆ ಸೊಪ್ಪನ್ನು ರುಬ್ಬಿಕೊಂಡು ಉಪ್ಪು ಸೇರಿಸಿ ದೋಸೆಹಿಟ್ಟಿನ ಹದಕ್ಕೆ ಬೆರೆಸಿ, ದೋಸೆ ಹುಯ್ಯಬೇಕು. ಇದು ತಯಾರಿಸಲು ಸುಲಭ ಮತ್ತು ಆರೋಗ್ಯಕ್ಕೂ ಒಳ್ಳೆಯದು.

 ಬಸಳೆ ದಂಟಿನ ಸಾಂಬಾರ್ : ಬಸಳೆಯ ಬಲಿತ ಕಾಂಡಗಳನ್ನು ಕತ್ತರಿಸಿ ಉದ್ದನೆಯ ತುಂಡುಗಳನ್ನಾಗಿ ಮಾಡಿ ಒಗ್ಗರಣೆ ಹಾಕಿ ಬೇಯಿಸಿಕೊಳ್ಳಬೇಕು. ನಂತರ 1 ಬಟ್ಟಲು ತೆಂಗಿನ ತುರಿ, ಈರುಳ್ಳಿ, ಟೊಮ್ಯಾಟೊ, ಬೆಳ್ಳುಳ್ಳಿ 4 ಎಸಳು, ಚಕ್ಕೆ, ಲವಂಗ, jಒಣಮೆಣಸಿನ ಪುಡಿ, ಧನಿಯಾ ಪುಡಿ, ಎಲ್ಲವನ್ನೂ ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿದ ಮಸಾಲೆ, ಬೇಯಿಸಿದ ದಂಟು, ತಕ್ಕಷ್ಟು ನೀರು, ಉಪ್ಪು ಬೆರೆಸಿ ಕುದಿಸಬೇಕು. ಈ ಸಾಂಬಾರ್ ಚಪಾತಿ, ದೋಸೆ, ರೊಟ್ಟಿ, ಅನ್ನದೊಂದಿಗೆ ತಿನ್ನಲು ಬಲು ರುಚಿಕರವಾಗಿರುತ್ತದೆ.

 ಬಸಳೆ ಸೊಪ್ಪಿನ ಕೂಟು : ಬಸಳೆ ಸೊಪ್ಪನ್ನು ಚೆನ್ನಾಗಿ ತೊಳೆದು ಬೇಳೆಯೊಂದಿಗೆ

ಬೇಯಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಖಾರದ ಪುಡಿ, ಬೆಲ್ಲ, ಹುಣಸೆಹುಳಿ, ಉಪ್ಪು ಹಾಕಿ ಕುದಿಸಬೇಕು. ಅಲ್ಲದೇ ಒಂದು ಚಮಚೆ ಕೊತ್ತಂಬರಿ ಬೀಜ, ಒಂದು ಚಮಚೆ ಉದ್ದಿನಬೇಳೆ. ಕಾಲು ಚಮಚೆ ಮೆಂತ್ಯ, ಸ್ವಲ್ಪ ಜೀರಿಗೆ, 4-5 ಒಣಮೆಣಸಿನಕಾಯಿಯನ್ನು ಚೆನ್ನಾಗಿ ಹುರಿದು ಒಂದು ಬಟ್ಟಲು ತೆಂಗಿನ ತುರಿಯೊಂದಿಗೆ ರುಬ್ಬಿ ಸೊಪ್ಪಿಗೆ ಸೇರಿಸಿ ನಂತರ ಒಗ್ಗರಣೆ ಕೊಡಬೇಕು. ಒಗ್ಗರಣೆಗೆ ಹಿಂಗು ಅಥವಾ ಬೆಳ್ಳುಳ್ಳಿ ಹಾಕಬಹುದು. ಈ ಕೂಟು ಗಟ್ಟಿಯಾಗಿದ್ದಲ್ಲಿ ರುಚಿ ಹೆಚ್ಚು

 ಇಡ್ಲಿ: ನೆನೆಯಿಸಿದ ಅಕ್ಕಿಯೊಂದಿಗೆ ಉದ್ದಿನಬೇಳೆ ಬದಲು ಬಸಳೆಯೊಂದಿಗೆ ರುಬ್ಬಿ ಹಿಟ್ಟು ತಯಾರಿಸಿಕೊಂಡು ಇಡ್ಲಿ ತಯಾರಿಸಿಕೊಳ್ಳಬಹುದು.

 ಉದುರು ಪಲ್ಯ : ನೆನೆಸಿದ ಕಡಲೆಬೇಳೆಯನ್ನು ತರಿತರಿಯಾಗಿ ರುಬ್ಬಿ ಬಸಳೆಸೊಪ್ಪನ್ನು ಸಣ್ಣಗೆ ಹೆಚ್ಚಿಕೊಂಡು, ಪಾತ್ರೆಯನ್ನು ಒಲೆಯ ಮೇಲಿಟ್ಟು ಒಗ್ಗರಣೆಗೆ ಎಣ್ಣೆ ಹಾಕಿ ಅದಕ್ಕೆ ಹಸಿಮೆಣಸಿನಕಾಯಿ, ಕರಿಬೇವು, ಅರಿಶಿನ ಹಾಕಿ ಬಾಡಿಸಿ ಸೊಪ್ಪು ಹಾಕಬೇಕು. ಸೊಪ್ಪು ಬೆಂದ ನಂತರ ತರಿತರಿಯಾಗಿ ರುಬ್ಬಿದ ಕಡಲೆಬೇಳೆಯನ್ನು ಬೆರೆಸಿ ಸ್ವಲ್ಪ ಹೊತ್ತು ಬೇಯಿಸಬೇಕು. ಧನಿಯಾ ಪುಡಿ, ಖಾರದ ಪಡಿ, ಜೀರಿಗೆ ಪುಡಿ ಬೆರೆಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಬೇಕು.

 ಇತರ ಭಾಷೆಗಳಲ್ಲಿ

ಹಿಂದಿ.    —ಲಾಲ್‌ ಬಚ್ಚು

ತಮಿಳು  — ಶಿವಪ್ಪವಸ್ಥಕೀರೈ, ಸಿಗಪ್ಪು ಪಸ

ತೆಲುಗು    —ಯರ್ರ ಬಸಲಿ

ఇంగ్లిష్    —ಇಂಡಿಯನ್ ಸ್ಪಿನಾಚ್

ವೈಜ್ಞಾನಿಕ ಹೆಸರು   —Basella rubra L alba L.