ಮನೆ ಅಂತಾರಾಷ್ಟ್ರೀಯ ಅಮೇರಿಕಾದಲ್ಲಿ ನಡೆದ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಬಲಿ

ಅಮೇರಿಕಾದಲ್ಲಿ ನಡೆದ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಬಲಿ

0

ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ಉತ್ತರ ಭಾರತದ ವೈದ್ಯಕೀಯ ವಿದ್ಯಾರ್ಥಿ ಆದಿತ್ಯ ಅದ್ಲಾಖಾ ಅವರು ಕಾರಿನಲ್ಲಿದ್ದಾಗ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆದಿತ್ಯ ಎರಡು ದಿನಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ನವೆಂಬರ್ 9 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ, ಸಿನ್ಸಿನಾಟಿ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾಲಯ ಪ್ರಕಟಣೆ ಹೊರಡಿಸಿದೆ.

ಹ್ಯಾಮಿಲ್ಟನ್ ಕೌಂಟಿ ಕರೋನರ್ ಕಚೇರಿಯು ಡಾಕ್ಟರೇಟ್ ವಿದ್ಯಾರ್ಥಿ ಆದಿತ್ಯ ಸಾವಿನ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದೆ.

ಈ ವರ್ಷ ನವೆಂಬರ್ 9 ರಂದು ಘಟ್ಟ ಪ್ರದೇಶದಲ್ಲಿ ಕಾರು ಚಲಾಯಿಸುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಕಾರು ನಿಯಂತ್ರಣ ತಪ್ಪಿ ತಡೆಗೋಡೆ ಡಿಕ್ಕಿ ಹೊಡೆದಿದೆ. ಬೆಳಗ್ಗೆ 6:20ರ ಸುಮಾರಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕಾರಿನಲ್ಲಿ ಬುಲೆಟ್ ನಿಂದ ಗಾಯಗೊಂಡ ವ್ಯಕ್ತಿ ದೂರವಾಣಿ 911 (ಅಮೆರಿಕನ್ ಆಂಬ್ಯುಲೆನ್ಸ್ ಸಂಖ್ಯೆ) ಗೆ ಕರೆ ಮಾಡಿದ್ದು, ಅವರನ್ನು ಕನ್ನಿಂಗ್ಹ್ಯಾಮ್​ಗೆ ಸ್ಥಳಾಂತರಿಸಲಾಯಿತು. ಇದರ ನಂತರ, ಅವರ ಸ್ಥಿತಿ ಗಂಭೀರವಾದ ಕಾರಣ, ಅವರನ್ನು ತಕ್ಷಣವೇ ಯುಸಿ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಎರಡು ದಿನಗಳ ನಂತರ ಸಾವನ್ನಪ್ಪಿದ್ದಾರೆ ಎಂದು ಹ್ಯಾಮಿಲ್ಟನ್ ಕೌಂಟಿ ಕರೋನರ್ ಕಚೇರಿ ಖಚಿತಪಡಿಸಿದೆ.

ಗುಂಡಿನ ದಾಳಿ ವಿಷಯದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

2018 ರಲ್ಲಿ, ಆದಿತ್ಯ ಅದ್ಲಾಖಾ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ರಾಜಾಸ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದಲ್ಲಿ ಬ್ಯಾಚುಲರ್ ಪದವಿಯನ್ನು ಅಧ್ಯಯನ ಮಾಡಿದರು. ನಂತರ 2020 ರಲ್ಲಿ, ಅವರು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನಿಂದ ಶರೀರಶಾಸ್ತ್ರ ಅಥವಾ ವೈದ್ಯಕೀಯದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಅವರು ಆಣ್ವಿಕ ಮತ್ತು ಅಭಿವೃದ್ಧಿ ಜೀವಶಾಸ್ತ್ರದಲ್ಲಿ ಪಿಎಚ್‌ ಡಿಗಾಗಿ ಅಮೆರಿಕಕ್ಕೆ ಹೋದರು.