ಮನೆ ದೇವಸ್ಥಾನ  ಭಾರತ ಭವಿಷ್ಯ ಪವಿತ್ರ ಕ್ಷೇತ್ರಗಳು: ಭಾಗ ಎರಡು

 ಭಾರತ ಭವಿಷ್ಯ ಪವಿತ್ರ ಕ್ಷೇತ್ರಗಳು: ಭಾಗ ಎರಡು

0

    ಸರಸ್ವತಿ ನದಿಯಲ್ಲಿ ಮೂರು ದಿನಗಳು ಸ್ನಾನ ಮಾಡುವುದರಿಂದ ಸಮಸ್ತ ಪಾಪ ಪರಿಹಾರವಾಗಿ ಪರಿಶುದ್ಧರಾಗುವರು.ನರ್ಮದಾ ನದಿಯ ದರ್ಶನ ಪಾತ್ರದಿಂದಲೇ ಪುಣ್ಯಪ್ರಾಪ್ತಿ ತಾಪಿ ನದಿಯ ಹೆಸರನ್ನು ಸ್ಮರಿಸಿದರೆ ಸಾಕು, ಎಷ್ಟೊ ಪುಣ್ಯ ಲಭಿಸುವುದು. ಗಂಗಾ ‘ಸ್ನಾನ ತುಂಗಾ ಪಾನ ’ಎಂಬ ನಾನ್ನುಡಿ ಯೊಂದು ನದಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ.

Join Our Whatsapp Group

      ನದಿಯ ಸ್ಥಾನದ ಬಗ್ಗೆ ಒಂದು ಮುಖ್ಯ ಸಂಗತಿಯನ್ನು ಅರಿತಿರುವುದು ಅಗತ್ಯ. ನದಿಯು ಸಮುದ್ರಕ್ಕೆ ಸೇರುವ ಸ್ಥಳದಲ್ಲಿ ಮಳೆಗಾಲದ ಎರಡು ತಿಂಗಳುಗಳ ಕಾಲ, ಸೂರ್ಯನನ್ನು ಕರ್ನಾಟಕ ಮತ್ತು ಸಿಂಹರಾಶಿಗಳಲ್ಲಿರುವಾಗ ಸ್ಥಾನ ಮತ್ತು ತರ್ಪಣವನ್ನು ನಿಷೇಧಿಸಲಾಗಿದೆ ಏಕೆಂದರೆ ಆ ಕಾಲದಲ್ಲಿ ನದಿಯು ರಸಜ್ವಾಲೆಯಾಗಿರುವುದು. ಅಂದರೆ ಅಶುದ್ಧವಾಗಿರುವುದು. ಆದರೆ ಉಪಾಕರ್ಮದ ವೇಳೆಯಲ್ಲಿ,ಗ್ರಹಣ ಕಾಲದಲ್ಲಿ ಮತ್ತು ಮರಣ ಸಂಸ್ಕಾರದ ಸಮಯದಲ್ಲಿ ಸ್ನಾನ ಮಾಡುವುದಕ್ಕೆ ಯಾವ ಅಭ್ಯಂತರವೂ ಇಲ್ಲ.ಇಂತಹ ಇನ್ನು ಅನೇಕ ಅಮೂಲ್ಯ ಸಂಗತಿಗಳು ವಾಯು ಪುರಾಣದಲ್ಲಿವೆ.

.    . ಪವಿತ್ರ ಕ್ಷೇತ್ರಗಳಲ್ಲಿ ಎರಡು ವಿಧಗಳುಂಟು. ಒಂದು ತಾನಾಗಿಯೇ ಪವಿತ್ರವಾಗಿರುವುದು. ಇನ್ನೊಂದು ಮಾನವನ ನಿರ್ಮಿತ. ಮೊದಲನೆಯ ಗುಂಪಿಗೆ ಕೇದಾರ, ಬದರಿ,ಹರಿದ್ವಾರ, ಕಾಶಿ, ಪ್ರಯಾಗ, ಗಾಯಾ, ರಾಮೇಶ್ವರ ಕನ್ಯಾಕುಮಾರಿ, ತಿರುಪತಿ, ಶ್ರೀಶೈಲ, ಗೋಕರ್ಣ, ಮುರುಡೇಶ್ವರ, ಧರ್ಮಸ್ಥಳ,ಕಳಸ,ಹೊರನಾಡು, ಮೊದಲಾದ ಕ್ಷೇತ್ರಗಳು ಸೇರುತ್ತವೆ, ಎರಡನೆಯ ಗುಂಪಿಗೆ ಅಯೋಧ್ಯಾ, ಮಥುರಾ, ಕಂಚಿ,ಶ್ರೀರಂಗ ಮಧುರೆ ತಂಜಾವೂರು ಮೊದಲಾದವು ಸೇರುತ್ತವೆ.

    ಶ್ರದ್ಧಾಭಕ್ತಿಗಳಿಲ್ಲದ ನದಿ ಸ್ತನದಿಂದ ಯಾವ ಪ್ರಯೋಜನವೂ ಇಲ್ಲ. ಮನಸ್ಸು ಶುದ್ದಗೊಳಿಸಿ ಸಂಯಮದಿಂದ ವರ್ತಿಸಿ,ಇಷ್ಟ ದೇವತೆಗಳನ್ನು ಧ್ಯಾನಿಸಿ, ಶ್ರದ್ಧಾ ಭಕ್ತಿಗಳಿದ್ದರೆ ಮಾತ್ರ ಮುಕ್ತಿ ಲಭಿಸುವುದು ಎಂದು ಕಾಶಿ ಖಂಡಲ್ಲಿ ಹೇಳಿದೆ. ಕುರುಕ್ಷೇತ್ರದ ಯುದ್ಧವಾದ ಬಳಿಕ ಪಂಚ ಪಾಂಡವರು ತಾವು ಬಂದು ಬಳಗ, ಹಿರಿಯರು, ಗುರುಗಳು ಮೊದಲಾದವನ್ನು ವಧಿಸಿ ಮಾಡಿದ ಪಾಪ ಕಾರ್ಯಗಳ ಪರಿಹಾರಾರ್ಥವಾಗಿ ಭಾರತದ ಪರಿಕ್ರಮಣವನ್ನು  ಅಂದರೆ ಇಡೀ ಭರತ ಖಂಡದಲ್ಲೆಲ್ಲಾ ಸಂಚರಿಸಿ, ಎಲ್ಲಾ ಪುಣ್ಯಕ್ಷೇತ್ರ ದರ್ಶನ ಮಾಡಿದರು. ಇದೇ ರೀತಿ ಬಲರಾಮನು ಬ್ರಹ್ಮಹತ್ಯಾ ದೋಷ ಪರಿಹಾರಕ್ಕೆ  ತೀರ್ಥಯಾತ್ರೆ ಮಾಡಿದನೆಂದು ಭಗವಂತ ಉಲ್ಲೇಂಗಿಸುತ್ತದೆ. ಕಾರ್ತವೀರ್ಯಾರ್ಜುನನನ್ನು ಕೊಂದ ದೋಷ ನಿವಾರಣೆಗಾಗಿ ಪರಶು ಪರಶುರಾಮನೂ ಸಹ  ಇಂತಹ ಪರಿಕ್ರಮಣ ಯಾತ್ರೆಯನ್ನು ಕೈಗೊಂಡಿದ್ದನು ವಿದುರನು  ದೈವ ಸಾಕ್ಷಾತ್ಕಾರಕ್ಕಾಗಿ ತೀರ್ಥಯಾತ್ರೆ ಮಾಡಿದನೆಂದು ಮಹಾಭಾರತದಲ್ಲಿ ಉಲ್ಲೇಖವಿದೆ. ಇದೇ ಪ್ರಕಾರ ಅನೇಕ ಆಚಾರ್ಯರೂ, ಯೋಗಿಗಳೂ, ತಪಸ್ಸಿಗಳೂ ಪರಿಕ್ರಮಣ ಯಾತ್ರೆ ಕೈಗೊಂಡ ಉಲ್ಲೇಖವಿದೆ.

   ಭಗವತದಲ್ಲಿ ಮತ್ತೊಂದು ಗಹನ ವಿಚಾರ ಪ್ರಸ್ತಾಪಿಸಲ್ಪಟ್ಟಿದೆ.ಇದರ ಪ್ರಕಾರ ಭರತ ವರ್ಷ ಅಥವಾ ಜಂಬೂದ್ವೀಪದಲ್ಲಿ ಹುಟ್ಟುವುದು ಶ್ರೇಯಸ್ಕರ  ಭರತಖಂಡದಲ್ಲಿ ಕೆಲವೇ ವರ್ಷಗಳು ಬದುಕಿದ್ದರು ಬ್ರಹ್ಮ ಪದವಿಯನ್ನು ಪಡೆಯಲು ಸಾಧ್ಯವುಂಟು.ಮೋಕ್ಷ ಪಡೆಯಲು ಇಲ್ಲಿ ಮಾತ್ರ ಸಾಧ್ಯ ತತ್ವಮಸಿ  ಅಹಂ ಬ್ರಹ್ಮಾಸ್ಮಿ.ಪ್ರಜ್ಞಾನಂ ಬ್ರಹ್ಮ ಮುಂತಾದ ಮಹಾಕಾವ್ಯಗಳು ಬರ ಭಾರತದಲ್ಲಿ ಮಾತ್ರ ಲಭ್ಯ.ಈ ಶಂಕರ ಭಾಗವತ್ಪಾದರು ತಮ್ಮ ವಿವೇಕ ಚೂಡಾಮಣಿಯಲ್ಲಿ  ಭರತ ಖಂಡದಲ್ಲಿ ಮಾನವನ ಜನ್ಮ ದೊರೆತದ್ದೇ ಆದರೆ ಅದೊಂದು ಪುಣ್ಯ ವಿಶೇಷ ಎಂದು ಹೇಳಿದ್ದಾರೆ.