ಮನೆ ರಾಜ್ಯ ಇಂದಿರಾ ಕ್ಯಾಂಟೀನ್‌ಗೆ ಸಂಕಷ್ಟ, ಬಾಕಿ ಹೊರೆಯಿಂದ ಮುಚ್ಚುವ ಸ್ಥಿತಿ..!

ಇಂದಿರಾ ಕ್ಯಾಂಟೀನ್‌ಗೆ ಸಂಕಷ್ಟ, ಬಾಕಿ ಹೊರೆಯಿಂದ ಮುಚ್ಚುವ ಸ್ಥಿತಿ..!

0

ಮೈಸೂರು : ಬಡವರು, ಕೂಲಿ ಕಾರ್ಮಿಕರು, ಕೆಲಸಗಾರರಿಗೆ ಸ್ವಚ್ಛ, ಪೌಷ್ಟಿಕ ಆಹಾರವನ್ನು ಕಡಿಮೆ ದರದಲ್ಲಿಒದಗಿಸಿ ಹಸಿವು ಮುಕ್ತ ಕರ್ನಾಟಕ ನಿರ್ಮಿಸುವ ಆಶಯದೊಂದಿಗೆ ರಾಜ್ಯಾದ್ಯಂತ ಆರಂಭವಾದ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಇಂದಿರಾ ಕ್ಯಾಂಟೀನ್‌, ಮೈಸೂರಿನಲ್ಲೇ ಗಂಭೀರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

26 ಕ್ಯಾಂಟೀನ್‌ ಗುತ್ತಿಗೆದಾರರಿಗೆ ಒಟ್ಟು 4.49 ಕೋಟಿ ರೂ. ಪಾವತಿಸಬೇಕಿದೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ14, ತಾಲೂಕು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ12 ಸೇರಿ ಒಟ್ಟು ಜಿಲ್ಲೆಯಲ್ಲಿ26 ಕ್ಯಾಂಟನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾ ನಗರಾಭಿವೃದ್ಧಿ ಕೋಶದ (ಡಿಯುಡಿಸಿ) ಮಾಹಿತಿ ಪ್ರಕಾರ ಜಿಲ್ಲೆಯ ಈ ಎಲ್ಲಬ ಕ್ಯಾಂಟೀನ್‌ಗಳ ಗುತ್ತಿಗೆದಾರರಿಗೆ 4.49 ಕೋಟಿ ರೂ. ಬಾಕಿ ಮೊತ್ತ ಪಾವತಿಸಬೇಕಿದೆ.

ಅದರಲ್ಲಿಯೂ ಮುಖ್ಯವಾಗಿ ನಗರ ವ್ಯಾಪ್ತಿಯ 6 ಕ್ಯಾಂಟೀಧಿನ್‌ಗಳ ಗುತ್ತಿಗೆದಾರರಿಗೆ ಅಕ್ಟೋಬರ್‌ 2024ರಿಂದ ಜನವರಿ 2026ರವರೆಗೆ ಒಂದು ವರ್ಷ ಐದು ತಿಂಗಳಿಗೆ 2.82 ಕೋಟಿ ರೂ. ಹಣ ಪಾವತಿಸಬೇಕಿದೆ. ಹೀಗಾಗಿ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಯಾಂಟೀನ್‌ಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟಾಗಿದ್ದು, ಆಹಾರದ ಗುಣಮಟ್ಟ, ಪೂರೈಕೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಎದುರಾಗಿದೆ. ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ಗಳು ಹಲವು ಬಾರಿ ಹಣಕಾಸಿನ ಕೊರತೆ, ಬಾಕಿ ಪಾವತಿ ಸಮಸ್ಯೆಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ.

ಬೆಂಗಳೂರಿನಲ್ಲಿಕೂಡ ಇತ್ತೀಚೆಗೆ ಲಕ್ಷಾಂತರ ರೂ. ಬಾಕಿಯಿಂದ ಕೆಲವು ಕ್ಯಾಂಟೀನ್‌ಗಳು ತಾತ್ಕಾಲಿಕವಾಗಿ ಮುಚ್ಚಿವೆ. ಇದೀಗ ಸಿಎಂ ಸಿದ್ದರಾಮಯ್ಯ ಅವರ ತಧಿವರು ಜಿಲ್ಲೆಯಲ್ಲಿಯೂ ಇಂದಿರಾ ಕ್ಯಾಂಟೀಧಿನ್‌ ಕಾರ್ಯನಿರ್ವಹಣೆಗೆ ಹಣಕಾಸಿನ ಕೊರತೆ ಎದುರಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿಕೆಲ ಕ್ಯಾಂಟೀಧಿನ್‌ಗಳನ್ನು ಮುಚ್ಚಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.

2017 ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಧಿಖ್ಯಧಿಮಂತ್ರಿ ಆಗಿರುವಾಗ ಆರಂಭವಾದ ಈ ಯೋಜನೆಯು ಬಡವರಿಗೆ 5 ರೂ.ಗಧಿಳಿಗೆ ತಿಂಡಿ, 10 ರೂ.ಧಿಗಧಿಳಿಗೆ ಊಟ ಒದಗಿಸುತ್ತದೆ. ಆದರೆ, ರಾಜ್ಯಾದ್ಯಂತ ಹಣಕಾಸಿನ ಕೊರತೆ, ಅನುದಾನದ ವಿಳಂಬ, ಗುತ್ತಿಗೆದಾರರಿಗೆ ಬಾಕಿ ಪಾವತಿ ಸಮಸ್ಯೆಗಳು ಪದೇಪದೆ ಕಾಡುತ್ತಿವೆ. 2026ರ ಬಜೆಟ್‌ನಲ್ಲಿವಿದ್ಯಾರ್ಥಿ ಇಂದಿರಾ ಕ್ಯಾಂಟೀನ್‌ಗಳು ಘೋಷಣೆಯಾದರೂ, ಈಗಾಗಲೇ ಇರುವ ಕ್ಯಾಂಟೀನ್‌ಗಳ ನಿರ್ವಹಣೆಯಲ್ಲಿಸಮಸ್ಯೆಗಳು ಮುಂದುವರೆದಿವೆ.