ಮನೆ ರಾಜ್ಯ ಇಂಡಸ್ ಕಂಪನಿ ಮೊಬೈಲ್ ನೆಟ್​​ ವರ್ಕ್ ಟವರ್ ಬೆಂಕಿಗಾಹುತಿ

ಇಂಡಸ್ ಕಂಪನಿ ಮೊಬೈಲ್ ನೆಟ್​​ ವರ್ಕ್ ಟವರ್ ಬೆಂಕಿಗಾಹುತಿ

0

ಆನೇಕಲ್: ಇಂಡಸ್ ಕಂಪನಿಯ ಮೊಬೈಲ್ ನೆಟ್​​ ವರ್ಕ್ ಟವರ್ ಬೆಂಕಿಗಾಹುತಿ ಆಗಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿ ನಡೆದಿದೆ.

ಜನರೇಟರ್​ ರೂಮ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಇಡೀ ಟವರ್​ಗೆ ಬೆಂಕಿ ವ್ಯಾಪಿಸಿತ್ತು. ಜನರೇಟರ್​ ಗೆ ತುಂಬಿಸಿದ್ದ ಡಿಸೇಲ್​ ಗೆ ಬೆಂಕಿ ತಗುಲಿ ಟವರ್ ಹೊತ್ತಿ ಉರಿದಿತ್ತು.

ಶಾರ್ಟ್ ಸರ್ಕ್ಯೂಟ್ ​ನಿಂದ ಬೆಂಕಿ ಹೊತ್ತಿಕೊಂಡಿರುವುದಾಗಿ ಶಂಕಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ವಾಹನದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

ಸ್ಥಳಕ್ಕೆ ಜಿಗಣಿ ಪೊಲೀಸ್ ಠಾಣೆ ಸಿಬ್ಬಂದಿಗಳು ದೌಡಾಯಿಸಿದ್ದಾರೆ.

ಹಿಂದಿನ ಲೇಖನ“ಮೆಹಬೂಬಾ’ ಸಿನಿಮಾ ವಿಮರ್ಶೆ
ಮುಂದಿನ ಲೇಖನಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ: ಸರ್ಕಾರದ ಸುತ್ತೋಲೆ ಪಾಲಿಸದ ಸಂಸ್ಥೆಗಳನ್ನು ಮುಚ್ಚಬಾರದು ಎಂದ ಹೈಕೋರ್ಟ್