ಮನೆ ರಾಜ್ಯ ಈಶಾನ್ಯ ಮಾರುತದ ಪ್ರಭಾವ – ಉಡುಪಿಯಲ್ಲಿ ಮಳೆ

ಈಶಾನ್ಯ ಮಾರುತದ ಪ್ರಭಾವ – ಉಡುಪಿಯಲ್ಲಿ ಮಳೆ

0

ಉಡುಪಿ : ಈಶಾನ್ಯ ಮಾರುತದ ಪ್ರಭಾವದಿಂದ ಕರಾವಳಿ ಜಿಲ್ಲೆ ಉಡುಪಿಯ ಹಲವೆಡೆ ತುಂತುರು ಮಳೆಯಾಗಿದೆ. ಮುಂದಿನ ಮೂರ್ನಾಲ್ಕು ದಿನ ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಮೊಂಥಾ ಚಂಡಮಾರುತ ಕಳೆದ ವಾರ ಜಿಲ್ಲೆಯಲ್ಲಿ ಮಳೆ ಸುರಿಸಿತ್ತು. ಆಮೇಲೆ ಎರಡು ದಿನ ಒಣಹವೆ ವಾತಾವರಣವಿತ್ತು. ಕಾರ್ಕಳ-ಹೆಬ್ರಿ ಭಾಗದಲ್ಲಿ ಕೆಲಕಾಲ ಗಾಳಿ ಮಳೆಯಾಗಿದೆ‌. ಉಡುಪಿ, ಕಾಪು, ಕುಂದಾಪುರ, ಬೈಂದೂರು ಕರಾವಳಿ ಭಾಗದಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ತುಂತುರು ಮಳೆಯಾಗಿದೆ.