ಮನೆ ಜ್ಯೋತಿಷ್ಯ ಗ್ರಹಗಳ ಪ್ರಭಾವ

ಗ್ರಹಗಳ ಪ್ರಭಾವ

0

ವಿಜ್ಞಾನಿಗಳು ಸೂರ್ಯನನ್ನು ನಕ್ಷತ್ರವೆಂದು ತಿಳಿದು ಉಳಿದ ಬುಧ, ಶುಕ್ರ, ಭೂಮಿ, ಗುರು, ಶನಿ, ಯುರೇನಸ್, ನೆಚ್ಚೂನ್, ಪ್ಲೋಟೋಗಳನ್ನ ನವಗ್ರಹಗಳೆಂದು ಕರೆದಿದ್ದಾರೆ. ಭಾರತೀಯ ಜ್ಯೋತಿರ್ವಿಜ್ಞಾನವು ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತುಗಳು ನವಗ್ರಹಗಳನ್ನು ತಿಳಿಸುತ್ತದೆ. ಈ ಎಲ್ಲಾ ಗ್ರಹ ನಕ್ಷತ್ರ ಉಪಗ್ರಹಗಳ ವಿವರವಾದ ಮಾಹಿತಿಯೊಂದಿಗೆ ಅವುಗಳ ಪ್ರಭಾವವನ್ನು ಇಲ್ಲಿ ವಿವರಿಸಲಾಗಿದೆ.

೧. ಸೂರ್ಯ :-

ಅಪಾರವಾದ ತೇಜಃ ಪುಂಜವಾದ ಸೂರ್ಯನು ಸೌರ ಮಂಡಲದ ಎಲ್ಲಾ ಗ್ರಹಗಳ ಮೇಲೆ ಪ್ರಭಾವ ಬೀರುವನು ತನ್ನ ಗುರುತ್ವಾಕರ್ಷಣ ಶಕ್ತಿಯಿಂದ ಎಲ್ಲಾ ಗ್ರಹಗಳು ತನ್ನನ್ನು ಸುತ್ತುವಂತೆ ಆಕರ್ಷಿಸುವನು. ಸೂರ್ಯನು ಭೂಮಿಯಿಂದ 9,29,56,524 ಮೈಲುಗಳಷ್ಟು ದೂರದಲ್ಲಿದ್ದಾನೆ. ಅನಂತವಾದ ಬ್ರಹ್ಮಾಂಡದಲ್ಲಿರುವ ಸ್ಥಿರವಾದ ಹಲವು ನಕ್ಷತ್ರಗಳಲ್ಲಿ ಸೂರ್ಯನು ಸಹ ಒಬ್ಬನಾಗಿದ್ದಾನೆ.

 ಸೂರ್ಯನು ಭೂಮಿಗೆ ಸಮೀಪದಲ್ಲಿರುವ ಕಾರಣ ಪ್ರಕಾಶಮಾನವಾಗಿ ತಾಪವನ್ನುಂಟು ಮಾಡುವವನಾಗಿದ್ದಾನೆ. ಎಲ್ಲ ಜೀವ ಜಗತ್ತಿಗೆ ಸೂರ್ಯನೇ ದೀಪದಂತೆ, ಪ್ರಾಣದಂತೆ ಇದ್ದಾನೆ. ಸೂರ್ಯನಿಗಿಂತಲೂ ಪ್ರಕಾಶಮಾನವಾದ ಅನೇಕ ನಕ್ಷತ್ರಗಳಿವೆ. ಆದರೆ ದೂರವಿರುವುದರಿಂದಾಗಿ ಅವುಗಳ ಬೆಳಕು ಭೂಮಿಗೆ ತಲುಪುವುದಿಲ್ಲ.

ಎಲ್ಲಾ ಗ್ರಹಗಳ ಮುಖ್ಯಸ್ಥನಾದ ಸೂರ್ಯನು ತೇಜಸ್ವಿ ಗ್ರಹಗಳ ರಾಜ ಎಂದಿದ್ದಾರೆ. ವಾಸ್ತವಿಕವಾಗಿ ಸೂರ್ಯನಲ್ಲಿ ಜಲಜನಕವೇ ತುಂಬಿರುವುದು. ಪ್ರತಿದಿನವೂ ಕೋಟಿ ಟನ್ ಗಳಷ್ಟು ʼಲಾವಾʼ ರಸವು ಹೊರಬೀಳುವುದು. ಇಷ್ಟೊಂದು ಶಕ್ತಿಯನ್ನು ಬಿಡುಗಡೆ ಮಾಡುತ್ತಿದ್ದ ಸೂರ್ಯಗೋಳವು ಆಕಸ್ಮಿಕವಾಗಿ ತಂಪಾಗತೊಡಗಿದರೆ, ಭೂಮಿ ಸಹಿತ ಎಲ್ಲಾ ಗ್ರಹಗಳಲ್ಲಿನ ವಾತಾವರಣ ಬದಲಾಗುವುದು. ವಾಯುಮಂಡಲಕ್ಕೆ ಧಕ್ಕೆ ಉಂಟಾಗುವುದು. ಇಷ್ಟೊಂದು ಶಕ್ತಿಯನ್ನು ಹೊರಗೆ ಬಿಡುತ್ತಿರುವ ಸೌರಗೋಳದ ವಿಶೇಷವೂ ಆಶ್ಚರ್ಯವನ್ನು ಉಂಟುಮಾಡುವುದು. ಎಲ್ಲಾ ಗ್ರಹಗಳಲ್ಲೂ ಸೂರ್ಯನಿಗೆ ಇರುವ ಶ್ರೇಷ್ಠತೆ ಗಮನಿಸಿದ ಪ್ರಾಚೀನರು, ಸೂರ್ಯನನ್ನು ಜಗತ್ತಿಗೆ ಜೀವಾತ್ಮ ಎಂದು ಎಂದಿದ್ದಾರೆ. ಭಾರತೀಯ ಪುರಾಣಗಳಲ್ಲಿ ಈ ರೀತಿಯಲ್ಲಿ ಉಲ್ಲೇಖವು ಕಂಡುಬರುವುದು.

ದಕ್ಷ ಪ್ರಜಾಪತಿಗೆ ಇಬ್ಬರು ಕನ್ಯೆಯರಿದ್ದರು. ದಿತಿ ಮತ್ತು ಅದಿತಿ ಎಂದು  ಅವರ ಹೆಸರು. ದಕ್ಷನು ಕಶ್ಯಪ ಮುನಿಗೆ ಅವರಿಬ್ಬರನ್ನು ಮದುವೆ ಮಾಡಿಕೊಟ್ಟನು. ಅದಿತಿಯ ಮಕ್ಕಳನ್ನು ಆದಿತ್ಯರೆಂದು ಕರೆದರು. ಹೀಗೆ ಸೂರ್ಯನಿಗೆ ವೇದಗಳಲ್ಲಿ ʼಆದಿತ್ಯʼ ಎಂಬ ಹೆಸರು ಇರುವುದೆಂದು ತಿಳಿಯುವುದು. ಸೂರ್ಯನಿಗೆ ಸಂಜ್ಞಾ ಮತ್ತು ಛಾಯಾ ಎಂಬ ಇಬ್ಬರು ಪತ್ನಿಯರಿದ್ದರು. ಶನಿಯು ಛಾಯಾಳ ಮಗನೆoದು ತಿಳಿಯಲಾಗಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ವಿಶ್ವಾಸಪಾತ್ರ ಶೂರ, ವೀರ, ಕ್ಷತ್ರಿಯ ಜಾತಿಯವನು, ಸದೃಢವಾದ ಕಡಿಮೆ ಕೂದಲಿರುವ, ಪಿತ್ತ ಪ್ರಕೃತಿಯ, ಪಿಂಗಲ ಬಣ್ಣದ ಯುವಗ್ರಹವೆಂದು ನಂಬಲಾಗಿದೆ. ಸೂರ್ಯಗ್ರಹದಿಂದ ಬಂಗಾರ, ತಾಮ್ರ, ಧಾತುಗಳನ್ನು, ತಂದೆ. ಶರೀರದದೃಢತೆ, ಆರೋಗ್ಯ, ಸಹಕಾರ, ಅಧಿಕಾರ, ರಾಜ್ಯಲಕ್ಷ್ಮಿ, ಪ್ರಕೃತಿ ಸಂಪತ್, ಧರ್ಮ ಮತ್ತು ಅಧಿಕಾರಿಗಳ ಮೇಲೆ ಕಾರ್ಯಕಾರಕ ಗ್ರಹವೆಂದು ತಿಳಿಯಲಾಗಿದೆ.

ಉದಾರತೆ, ಪ್ರಾಮಾಣಿಕತನ, ಪ್ರಸಿದ್ಧಿ, ಪ್ರಭಾವಶಾಲಿ ವ್ಯಕ್ತಿಗಳು ಸೂರ್ಯನ ಶ್ರೇಷ್ಠ ಪ್ರಭಾವಗಳೆಂದು, ಹೃದಯರೋಗ, ಅಜೀರ್ಣ, ಕಲೆ ಮತ್ತು ಕಣ್ಣುಬೇನೆಗಳು ಪಿತ್ತರೊಗಗಳು, ಸರಕಾರದ ಅಸ್ಥಿರತೆ, ತಂದೆಯಿಂದಾದ ಸುಖ ಮುಂತಾದವುಗಳನ್ನು ಸೂರ್ಯನಿಂದಾದ ಕೆಟ್ಟ ಪರಿಣಾಮಗಳೆಂದು ತಿಳಿಯಲಾಗಿದೆ.

ಸೂರ್ಯನು ಪ್ರಭಾವ ರಹಿತನಾದರೆ, ಕ್ಷಯಾ, ಮಂದಾಗ್ನಿ ರಕ್ತದೊತ್ತಡ, ಮೂಲವ್ಯಾಧಿ, ಮಧುಮೇಹ, ಹಳದಿರೋಗ, ಜ್ವರ, ಕಾಲರಾ ರೋಗಗಳನ್ನು ಉಂಟುಮಾಡುವನು. ಶಕ್ತಿಶಾಲಿಯಾಗಿ ಪ್ರಬಲನಾಗಿದ್ದರೆ, ತಂದೆಯಿಂದ ಲಾಭಗಳಿಸಿದವ. ಸರಕಾರಿ ನೌಕರ, ಪ್ರಸಿದ್ಧಿ ಬಯಸಿದವ, ಚಿಕಿತ್ಸೆ ಮತ್ತು ಯೋಗ ಮತ್ತು ಆಡಳಿತ ನಡೆಸುವವನಾಗಬಹುದಾಗಿದೆ.

ಸೂರ್ಯನು ದಿನನಿತ್ಯ ತಿರುಗುತ್ತಿದ್ದು 12 ರಾಶಿಗಳಲ್ಲಿ 12 ತಿಂಗಳು ಸಂಚರಿಸುತ್ತಾನೆ. ಸಿಂಹ ರಾಶಿಯ ಸ್ವಾಮಿಯಾದ ಸೂರ್ಯನು ಮೇಷ ರಾಶಿಯಲ್ಲಿದ್ದಾಗ ವಿಶೇಷ ಫಲ ನೀಡುವನು. ತುಲಾರಾಶಿಯ ಸೂರ್ಯನಿಗೆ ಕೆಟ್ಟರಾಶಿಯಾಗಿದೆ. ಭಾರತೀಯರು ಸೂರ್ಯನಿಗೆ ʼ1ʼ ಅಂಕ ನೀಡಿದ್ದಾರೆ. ಪಾಶ್ಚತ್ಯರು 4 ಅಂಕ ನೀಡಿದ್ದಾರೆ.

ಸೂರ್ಯನು ನಕ್ಷತ್ರ ಮಂಡಲದ ಕೃತಿಕಾ, ಉತ್ತರಪಾಲ್ಗುಣಿ ಮತ್ತು ಉತ್ತರಷಾಡ ನಕ್ಷತ್ರಗಳ ಅಧಿಪತಿಯಾಗಿದ್ದಾನೆ. ಭೂಮಿಯಲ್ಲಿ ಸೂರ್ಯನ ಪ್ರಭಾವದಿಂದ ಎಲ್ಲಾ ಪ್ರಕಾರ ಧಾನ್ಯಗಳು, ಧಾತುಗಳು, ಪೆಟ್ರೋಲ್ ಮುಂತಾದ ತೈಲಗಳು ಉತ್ಪತ್ತಿಯಾಗುವವು. ಬಲಿಷ್ಠವಾದ ಸೂರ್ಯನಿರುವ ಜಾತಕವುಳ್ಳವನು, ಶ್ರೇಷ್ಠಕುಲದವನಾಗಿ, ಉದಾರನಾಗಿ, ಮಹಾರಾಜನಂತಿರುತ್ತಾನೆ. ನಟ, ಸರಕಾರಿ ಅಧಿಕಾರಿ, ರಸಾಯನಶಾಸ್ತ್ರ ವೈದ್ಯ ಅಥವಾ ಶ್ರೇಷ್ಠ ವ್ಯಕ್ತಿಯಾಗುವನು. ಶುಕ್ರ ಮತ್ತು ಶನಿ ಸೂರ್ಯನ ವೈರಿಗಳಾಗಿದ್ದಾರೆ.

ಮೂಲದಲ್ಲಿ ಸೂರ್ಯನಿದ್ದರೂ, ಭಾಗ್ಯಸ್ಥಾನದಲ್ಲಿ ಶುಕ್ರ ಅಥವಾ ಶನಿ ಬರಲು ದುರ್ಘಟನೆಗಳಾಗಬಹುದಾಗಿದೆ. ಸೂರ್ಯನಿಂದಾಗ ಬಹುದಾದ ದುಷ್ಟ ಪ್ರಭಾವಗಳನ್ನು ದೂರಮಾಡಲು ಪಿತೃಪೂಜೆ, ಶ್ರದ್ಧಾಕರ್ಮ, ಅಥವಾ ರತ್ನಗಳನ್ನು ಧರಿಸುವುದು ಶ್ರೇಷ್ಠ ಕಾರ್ಯಗಳಾಗಿವೆ. ಸೂರ್ಯನ ದಿಶೆಯಲ್ಲಿ ವ್ಯಕ್ತಿಯು ಧೈರ್ಯ, ಪ್ರಾಮಾಣಿಕತನ ಮತ್ತು ಎಚ್ಚರಿಕೆಯಿಂದ ಇರಬೇಕಾಗುವುದು. ಸೂರ್ಯನಿಗೆ  ಕೆಂಪುವಸ್ತ್ರ ಶ್ರೇಷ್ಠವು. ರವಿವಾರವು ಸಪ್ತಾಹದ ಮೊದಲ ದಿನವಾಗಿದೆ. ಜುಲೈ 21 ರಿಂದ ಆಗಸ್ಟ್ 20ರವರೆಗೆ “ಗ್ರೀಷ್ಮ” ಕಾಲವು ಶ್ರೇಷ್ಠವಾಗಿರುವುದು.

-ಮುಂದುವರೆಯುತ್ತದೆ.