ಭಾರತದಲ್ಲಿ ಹೀರೋ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ‘Xtreme 160R 4V’ ಬೈಕ್ ನ್ನು ಬಿಡುಗಡೆ ಮಾಡಿತ್ತು.
ಹೀರೋ ‘Xtreme 160R 4V’ ಬೈಕ್ ರೂಪಾಂತರಗಳಿಗೆ ಅನುಗುಣವಾಗಿ ಆನ್-ರೋಡ್ ಬೆಲೆ, ಸಾಲದ ಅವಧಿ, ಬಡ್ಡಿದರ, ಡೌನ್ ಪೇಮೆಂಟ್ ಹಾಗೂ ಇಎಂಐ ಆಯ್ಕೆಯನ್ನು ಹೊಂದಿದೆ.
ಇದು, ರೂ.1.41 ಲಕ್ಷ (ದೆಹಲಿ) ಆನ್-ರೋಡ್ ದರವನ್ನು ಪಡೆದಿದ್ದು, ನೀವು ರೂ.14,000 ಡೌನ್ ಪೇಮೆಂಟ್ ಪಾವತಿಸಿ ಈ ಬೈಕ್ ಖರೀದಿಸಿದರೆ, ಮೂರು ವರ್ಷದ ಅವಧಿಗೆ ಶೇಕಡ 10% ಬಡ್ಡಿದರಲ್ಲಿ ತಿಂಗಳಿಗೆ ರೂ.4,102 ಇಎಂಐ ಕಟ್ಟಬೇಕು
ಕನೆಕ್ಟೆಡ್ ರೂಪಾಂತರ ರೂ.1.47 ಆನ್-ರೋಡ್ ಬೆಲೆಯನ್ನು ಪಡೆದಿದ್ದು, 15,000 ಡೌನ್ ಪೇಮೆಂಟ್ ಕಟ್ಟಿ, ಈ ಬೈಕ್ ಖರೀದಿಸಿದರೆ, ಮೂರು ವರ್ಷದ ಅವಧಿಗೆ ಶೇಕಡ 10% ಬಡ್ಡಿದರದಲ್ಲಿ ರೂ.4,266 ಇಎಂಐ ಪಾವತಿಸಬೇಕು. ಪ್ರೀಮಿಯಂ ರೂಪಾಂತರ ರೂ.1.51 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.15,000 ಡೌನ್ ಪೇಮೆಂಟ್ ಪಾವತಿಸಿ, ಈ ಮಾದರಿಯನ್ನು ಖರೀದಿಸಿದರೆ, ಮೂರು ವರ್ಷದ ಅವಧಿಗೆ ಶೇಕಡ 10% ಬಡ್ಡಿದರದಲ್ಲಿ ರೂ.4,398 ಇಎಂಐ ಕಟ್ಟಬೇಕು
ಇದು, 163 ಸಿಸಿ ಸಾಮರ್ಥ್ಯದ ಎಂಜಿನ್ ಅನ್ನು ಹೊಂದಿದ್ದು, 16.6 bhp ಗರಿಷ್ಠ ಪವರ್ ಹಾಗೂ 14.6 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಈ ಬೈಕ್ ಪಡೆದುಕೊಂಡಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, LED ಲೈಟಿಂಗ್, ನೂತನ ಸ್ವಿಚ್ ಗೇರ್, ಹೀರೋ ಕನೆಕ್ಟ್ 2.0 ಮೂಲಕ ಬ್ಲೂಟೂತ್ ಸಂಪರ್ಕಿತ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನ್ನು ಹೊಂದಿದೆ.
ನೂತನ Xtreme ಬೈಕ್, ಮ್ಯಾಟ್ ಸ್ಲೇಟ್ ಬ್ಲಾಕ್, ನಿಯಾನ್ ನೈಟ್ ಸ್ಟಾರ್ ಹಾಗೂ ಬ್ಲೇಜಿಂಗ್ ಸ್ಪೋರ್ಟ್ಸ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಅತ್ಯಂತ ಅಗ್ಗದ ಬೆಲೆ, ಸೂಪರ್ ಮೈಲೇಜ್ ನೀಡುವ ಹೀರೋ HF ಡೀಲಕ್ಸ್ ಬೈಕಿನ ವಿಶೇಷತೆಗಳು ಹೀರೋ Xtreme 160R 4V ಬೈಕ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್ 37 ಎಂಎಂ ಅಪ್-ಸೈಡ್ ಡೌನ್ ಫೋರ್ಕ್, ರೇರ್ 7-ಸ್ಟೇಜ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ವಿಚಾರಕ್ಕೆ ಬರುವುದಾದರೆ, ಈ ಬೈಕ್, ಫ್ರಂಟ್ 276 ಎಂಎಂ, ರೇರ್ 220 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಹೊಸ ಹೀರೋ Xtreme 160R 4V ಬೈಕ್ ಗೆ ಟಿವಿಎಸ್ ಅಪಾಚೆ RTR 160 4V, ಬಜಾಜ್ ಪಲ್ಸರ್ ಎನ್160 ಮತ್ತು ಬಜಾಜ್ ಪಲ್ಸರ್ NS160 ಪ್ರತಿಸ್ಪರ್ಧಿಯಾಗಿವೆ. ಇನ್ನು, ಈ ಬೈಕ್‌ಗೆ ಇಎಂಐ ಆಯ್ಕೆ ತುಂಬಾ ಕಡಿಮೆ ಇರುವುದರಿಂದ ಆಸಕ್ತ ಗ್ರಾಹಕರು ಖರೀದಿಸಬಹುದಾಗಿದೆ.