ಮನೆ ಪೌರಾಣಿಕ ಮಹಾಶಿವರಾತ್ರಿ ಹಬ್ಬ ಹುಟ್ಟಿದ ಕುರಿತು ಮಾಹಿತಿ

ಮಹಾಶಿವರಾತ್ರಿ ಹಬ್ಬ ಹುಟ್ಟಿದ ಕುರಿತು ಮಾಹಿತಿ

0

ಸ್ನೇಹಿತರೆ, ಹಿಂದೂ ಮೈಥಾಲಜಿಯ ಪ್ರಕಾರ ಈ ಭೂಮಂಡಲದಲ್ಲಿ ಅನೇಕ ಪ್ರಳಯಗಳು ಸಂಭವಿಸಿದೆ. ಅಂತಹ ಪ್ರಳಯಗಳಲ್ಲಿ ಕೊನೆಯ ಪ್ರಳಯ ಸಂಭವಿಸಿದಾಗ ಶ್ರೀಮಹಾವಿಷ್ಣು ಆದಿಶೇಷನ ಮೇಲೆ ಯೋಗ ನಿದ್ರೆಯಲ್ಲಿ ಇರುತ್ತಾರೆ. ಅಲ್ಲಿಗೆ ಬ್ರಹ್ಮದೇವರು ಆಗಮಿಸುತ್ತಾರೆ ಆದರೆ ಅದನ್ನು ವಿಷ್ಣು ಗಮನಿಸುವುದಿಲ್ಲ,

ಈ ಸಮಸ್ತ ಸೃಷ್ಟಿಗೆ ಸೃಷ್ಟಿಕರ್ತ ನಾನು. ನಾನು ಬಂದರೆ ಸ್ವಲ್ಪ ಮರ್ಯಾದೆ ಇಲ್ಲದೆ ನಿದ್ರಿಸುತ್ತೀರಾ ಎಂದು ವಿಷ್ಣುವಿನೊಂದಿಗೆ ವಾಗ್ವದಕ್ಕೆ ಇಳಿಯುತ್ತಾರೆ ಬ್ರಹ್ಮ. ಮಹಾವಿಷ್ಣು ಸ್ಥಿತಿ ಕಾರಕ ಸಮಸ್ತ ಸೃಷ್ಟಿ ನಡೆಸುವವರು ಅವರು ನಗುತ್ತಾ ಬ್ರಹ್ಮ ನೀವು ನನ್ನ ನಾಭಿಯ ಕಮಲದಿಂದ ಜನಿಸಿದವರು.

ಆದ್ದರಿಂದ ನೀವು ನನ್ನನ್ನು ಗೌರವಿಸಬೇಕೇ ವಿನಹಃ ನಾನೇಕೆ ನಿಮ್ಮನ್ನು ಗೌರವಿಸಬೇಕು ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಅದೇ ರೀತಿ ಇಬ್ಬರ ನಡುವೆ ವಾಗ್ವಾದ ನಡೆಯುತ್ತದೆ ಹೀಗೆ ವಾಗ್ವಾದ ಹೆಚ್ಚಾಗಿ ಅದು ಯುದ್ಧಕ್ಕೆ ಬದಲಾಗುತ್ತದೆ. ಒಬ್ಬರ ವಿರುದ್ಧ ಮತ್ತೊಬ್ಬರು ಭಯಾನಕವಾದ ಆಸ್ತಿಗಳನ್ನು ಪ್ರಯೋಗಿಸಿಕೊಳ್ಳುತ್ತಾರೆ.

ಕೊನೆಗೆ ವಿಷ್ಣು ಬ್ರಹ್ಮನ ವಿರುದ್ಧ ಮಹೇಶ್ವರ ಅಸ್ತ್ರವನ್ನು ಪ್ರಯೋಗಿಸುತ್ತಾರೆ. ಬ್ರಹ್ಮದೇವರು ವಿಷ್ಣುವಿನ ವಿರುದ್ಧ ಪಾಶುಪತಾಸ್ತ್ರವನ್ನು ಪ್ರಯೋಗಿಸುತ್ತಾರೆ. ಅದನ್ನು ನೋಡಿ ಆತಂಕ ಪಟ್ಟ ದೇವತೆಗಳು ಹೇಗಾದರೂ ಅವರಿಬ್ಬರ ನಡುವಿನ ಹೋರಾಟ ನಿಲ್ಲಿಸಬೇಕು ಎಂದು ತೀರ್ಮಾನಿಸಿ ಶಿವನ ಬಳಿ ಪ್ರಾರ್ಥಿಸುತ್ತಾರೆ.

ಆಗ ಪರಮೇಶ್ವರ ಸಮಸ್ತ ಭೂತಗಣ ಪ್ರಮತಗಣಗಳೊಂದಿಗೆ ಯುದ್ಧ ನಡೆಯುತ್ತಿರುವ ಸ್ಥಳಕ್ಕೆ ಧಾವಿಸಿ ಬ್ರಹ್ಮ- ವಿಷ್ಣುವಿನಾ ನಡುವೆ ಅಗ್ನಿ ಸ್ತಂಭದಂತೆ ನಿಂತು ಅವರಿಬ್ಬರು ಪರಸ್ಪರ ಪ್ರಯೋಗಿಸಿಕೊಂಡಂತಹ ಅಸ್ತ್ರಗಳನ್ನು ತನ್ನೊಳಗೆ ಐಕ್ಯವಾಗಿಸಿಕೊಳ್ಳುತ್ತಾರೆ.

ಈ ಅದ್ಭುತಕ್ಕೆ ಆಶ್ಚರ್ಯಗೊಂಡ ಬ್ರಹ್ಮ ವಿಷ್ಣು ಆ ಕಂಬದ ಆದಿ-ಅಂತ್ಯ ನೋಡಲು ಒಬ್ಬರು ಮೇಲೆ ಮತ್ತೊಬ್ಬರು ಕೆಳಗೆ ಪ್ರಯಾಣಿಸುತ್ತಾರೆ. ಆದರೂ ಕೂಡ ಆ ಸ್ತಂಭದ ಆದಿ-ಅಂತ್ಯ ಪತ್ತೆಯಾಗುವುದಿಲ್ಲ. ಇನ್ನು ಹುಡುಕುವುದು ವ್ಯರ್ಥವೆಂದು ತೀರ್ಮಾನಿಸಿ ವಿಷ್ಣು ಪ್ರಯಾಣ ಶುರುಮಾಡಿದ ಸ್ಥಳಕ್ಕೆ ಹಿಂದಿರುಗುತ್ತಾರೆ. ಆದರೆ ಬ್ರಹ್ಮದೇವರು ಮಾತ್ರ ಇನ್ನು ಸ್ವಲ್ಪ ದೂರ ಪ್ರಯಾಣಿಸುತ್ತಾರೆ.

ಅಲ್ಲಿ ಅವರಿಗೆ ಕಾಮಧೇನು ಹಾಗೂ ತಾಳೆ ಹೂವು ಕಣ್ಣಿಗೆ ಬೀಳುತ್ತದೆ. ಬ್ರಹ್ಮದೇವರು ಅವರೊಂದಿಗೆ ನಾನು ಈ ಕಂಬದ ಅಂತ್ಯ ನೋಡಿದ್ದೇನೆ ಎಂದು ವಿಷ್ಣುವಿನ ಬಳಿ ಸುಳ್ಳನ್ನು ಹೇಳುವಂತೆ ಹೇಳುತ್ತಾರೆ. ಕಾಮಧೇನು ಹಾಗೂ ತಾಳೆ ಹೂವಿನೊಂದಿಗೆ ಹಿಂದಿರುಗಿ ಬಂದ ಬ್ರಹ್ಮದೇವರು ವಿಷ್ಣುವಿನೊಂದಿಗೆ ನಾನು ಈ ಕಂಬದ ಕೊನೆ ನೋಡಿದ್ದೇನೆ ಬೇಕಿದ್ದರೆ ಇವರಿಬ್ಬರ ಬಳಿ ಕೇಳಿ ಎನ್ನುತ್ತಾರೆ.

ವಿಷ್ಣುವಿನ ಮಾತಿಗೆ ಕಾಮಧೇನು ಹೌದು ಎನ್ನುವಂತೆ ತಲೆಯಾಡಿಸಿ ಇಲ್ಲವೆನ್ನುವಂತೆ ಬಾಲ ಅಲ್ಲಾಡಿಸುತ್ತದೆ. ಆದರೆ ತಾಳೆ ಹೂವು ಹೌದು ಎಂದು ಸುಳ್ಳನ್ನು ಹೇಳುತ್ತದೆ. ಆಗ ಪರಮೇಶ್ವರ ಅವರ ಮುಂದೆ ಪ್ರತ್ಯಕ್ಷವಾಗಿ ತನ್ನ ಮೂರನೇ ಕಣ್ಣಿನಿಂದ ವೀರಭದ್ರನನ್ನು ಸೃಷ್ಟಿಸಿ ಸುಳ್ಳು ಹೇಳುತ್ತೀಯ ಎಂದು ಬ್ರಹ್ಮನ ಐದನೇ ತಲೆಯನ್ನು ಕತ್ತರಿಸುತ್ತಾರೆ.

ನಂತರ ಬ್ರಹ್ಮದೇವರು ಶಿವನ ಬೇಡಿಕೊಂಡಾಗ ಮತ್ತೆ ತಲೆಯನ್ನು ಹಿಂದುರುಗಿಸುತ್ತಾರೆ. ಇನ್ನುಳಿದ ಮಹಾವಿಷ್ಣುವನ್ನು ಶಿವ ಮೆಚ್ಚಿಕೊಳ್ಳುತ್ತಾರೆ ಇನ್ನು ಸುಳ್ಳುಸಾಕ್ಷಿ ಹೇಳಿದ ತಾಳೆ ಹೂವನ್ನು ಇನ್ನು ಮುಂದೆ ನಿನಗೆ ಪೂಜೆಗಳಲ್ಲಿ ಸ್ಥಾನವಿಲ್ಲ ಎಂದು ಸೂಚಿಸುತ್ತಾರೆ. ತಪ್ಪಾಯಿತು ಎಂದು ಕ್ಷಮೆಯಾಚಿಸಿದಾಗ ಕೇವಲ ನನ್ನ ಪೂಜೆಗಳಲ್ಲಿ ಮಾತ್ರ ನಿನಗೆ ಸ್ಥಳವಿರುತ್ತದೆ ಎಂದು ವರ ನೀಡುತ್ತಾರೆ. ಕಾಮದೇನು ಇಲ್ಲ ಎಂದು ಬಾಲ ಅಲ್ಲಾಡಿಸಿದಕ್ಕೆ ನಿನ್ನ ಮುಖಕ್ಕಿಂತ ನಿನ್ನ ಹಿಂಬದಿಯ ಪೂಜೆಗೆ ಶ್ರೇಷ್ಠವೆಂದು ಹೇಳುತ್ತಾರೆ, ಆದ್ದರಿಂದ ಗಂಜಲ ಸಗಣಿ ಶ್ರೇಷ್ಠವಾಗುತ್ತದೆ. ಇದೆಲ್ಲಾ ನಡೆದ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.

ಹಿಂದಿನ ಲೇಖನಹೊಸ ಭಾರತದ ಉದಯಕ್ಕೆ ಸಂಸ್ಕೃತ ಅಡಿಪಾಯ: ಸುಬ್ರಮಣಿಯನ್‌ ಸ್ವಾಮಿ
ಮುಂದಿನ ಲೇಖನಮದ್ಯಪಾನದ ಕಾರಣಕ್ಕೆ ಶಿಸ್ತುಕ್ರಮ:  ಕರ್ತವ್ಯದಿಂದ ಬಿಡುಗಡೆಯಾಗಿದ್ದ ಯೋಧನಿಗೆ ಅಂಗವೈಕಲ್ಯ ಪಿಂಚಣಿ ನೀಡಿ: ಸುಪ್ರೀಂ