ಮನೆ ಕಾನೂನು ಸುಪ್ರೀಂ ಕೋರ್ಟ್, ಹೈಕೋರ್ಟ್’ಗಳಲ್ಲಿ ವಿವಿಧ ವಿಭಾಗಗಳಡಿ ಬಾಕಿ ಇರುವ ಪ್ರಕರಣಗಳ ಮಾಹಿತಿ

ಸುಪ್ರೀಂ ಕೋರ್ಟ್, ಹೈಕೋರ್ಟ್’ಗಳಲ್ಲಿ ವಿವಿಧ ವಿಭಾಗಗಳಡಿ ಬಾಕಿ ಇರುವ ಪ್ರಕರಣಗಳ ಮಾಹಿತಿ

0

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್’ಜೆಡಿಜಿ) ಪ್ರಕಾರ ಡಿಸೆಂಬರ್ 13, 2022ರವರೆಗೆ ಸಂವಿಧಾನ ಪೀಠದ  498 ಪ್ರಕರಣಗಳು ಸುಪ್ರೀಂ ಕೋರ್ಟ್’ನಲ್ಲಿ ಬಾಕಿ ಉಳಿದಿವೆ. ಅಂತೆಯೇ ಡಿಸೆಂಬರ್ 14, 2022ರ ಹೊತ್ತಿಗೆ, 959 ಚುನಾವಣಾ ಅರ್ಜಿಗಳು, 16,42,371 ರಿಟ್ ಅರ್ಜಿಗಳು, 10,063 ಪಿಐಎಲ್’ಗಳು ಮತ್ತು 28,469 ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ದೇಶದ ವಿವಿಧ ಹೈಕೋರ್ಟ್’ಗಳಲ್ಲಿ ಬಾಕಿ ಉಳಿದಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್’ಗಳ ವಿವಿಧ ವಿಭಾಗಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಂಸದ ಅಶೋಕ್ ಕುಮಾರ್ ರಾವತ್ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಈ ಮಾಹಿತಿ ನೀಡಿದ್ದಾರೆ.

4,331 ವಿಶೇಷ ಅನುಮತಿ ಅರ್ಜಿಗಳು (ಎಸ್’ಎಲ್ಪಿ), 2,870 ಸಾರ್ವಜನಿಕ ಹಿತಾಸಕ್ತಿ ದಾವೆಗಳು (ಪಿಐಎಲ್)   2,209 ರಿಟ್ ಅರ್ಜಿಗಳು ಹಾಗೂ  1,295 ನ್ಯಾಯಾಂಗ ನಿಂದನೆ ಅರ್ಜಿಗಳು ಸುಪ್ರೀಂ ಕೋರ್ಟ್’ನಲ್ಲಿ ಬಾಕಿ ಉಳಿದಿವೆ. ವಿವಿಧ ವರ್ಗಗಳಲ್ಲಿನ ಪ್ರಕರಣಗಳ ವಿವರಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

2019 ರಿಂದ ಸುಪ್ರೀಂ ಕೋರ್ಟ್ 84,981 ಎಸ್ಎಲ್ಪಿಗಳು, 3,098 ಪಿಐಎಲ್’ಗಳು ಹಾಗೂ 5,240 ರಿಟ್ ಅರ್ಜಿಗಳನ್ನು  ವಿಲೇವಾರಿ ಮಾಡಿದೆ. ವಿವಿಧ ವರ್ಗಗಳಲ್ಲಿನ ಪ್ರಕರಣಗಳ ವಿವರ ಇಂತಿದೆ:

ಡಿಸೆಂಬರ್ 14, 2022ರ ಹೊತ್ತಿಗೆ, 959 ಚುನಾವಣಾ ಅರ್ಜಿಗಳು, 16,42,371 ರಿಟ್ ಅರ್ಜಿಗಳು, 10,063 ಪಿಐಎಲ್’ಗಳು ಮತ್ತು 28,469 ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ದೇಶದ ವಿವಿಧ ಹೈಕೋರ್ಟ್’ಗಳಲ್ಲಿ ಬಾಕಿ ಉಳಿದಿದೆ.

2019ರಿಂದ, ಹೈಕೋರ್ಟ್’ಗಳಲ್ಲಿ 2,517 ಕಾರ್ಮಿಕ ಅರ್ಜಿಗಳು, 9,451 ಚುನಾವಣಾ ಅರ್ಜಿಗಳು, 1,11,92,733 ರಿಟ್ ಅರ್ಜಿಗಳು, 45,349  ಪಿಐಎಲ್ಗಳು ಹಾಗೂ 10,489 ನ್ಯಾಯಾಂಗ ನಿಂದನೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.