ಮನೆ ಉದ್ಯೋಗ ಜನವರಿಯಲ್ಲೇ ಅಪ್ಲೈ ಮಾಡಬೇಕಾದ ಸ್ಕಾಲರ್’ಶಿಪ್’ಗಳ ಮಾಹಿತಿ

ಜನವರಿಯಲ್ಲೇ ಅಪ್ಲೈ ಮಾಡಬೇಕಾದ ಸ್ಕಾಲರ್’ಶಿಪ್’ಗಳ ಮಾಹಿತಿ

0

ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಹಲವಾರು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಅದೇ ರೀತಿ ಇಲ್ಲಿ ನೀಡಿರುವ ಕೆಲವು ಸ್ಕಾಲರ್’ಶಿಪ್’ಗಳು ನಿಮಗೆ ಈ ತಿಂಗಳೇ ಲಭ್ಯವಾಗಲಿದೆ. ಜನವರಿ ಹಾಗೂ ಫೆಬ್ರವರಿ ಅವಧಿಯಲ್ಲಿ ನೀವು ಅಪ್ಲೈ ಮಾಡಬಹುದಾದ ಕೆಲವು ಸ್ಕಾಲರ್ ಶಿಪ್ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಕೂಡಲೇ ಅಪ್ಲೈ ಮಾಡಿ ಈ ಸ್ಕಾಲರ್ಶಿಪ್ ನಿಮ್ಮದಾಗಿಸಿಕೊಳ್ಳಿ.

ಉತ್ತಮ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್  ನಿಮಗೆ ಗೌರವಾನ್ವಿತ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಲು ಸಹಾಯವಾಗುತ್ತದೆ. ಶೈಕ್ಷಣಿಕ ವೆಚ್ಚ ನಿಭಾಯಿಸಲು ಇದು ನಿಮಗೆ ನೆರವಾಗುತ್ತದೆ.  ಉನ್ನತ ದರ್ಜೆಯ ಶಿಕ್ಷಣ ಪಡೆದುಕೊಂಡು ನಿಮ್ಮ ವೃತ್ತಿ ಜೀವನವನ್ನು ಸುಲಭವಾಗಿಸಲು ಇದು ಸಹಾಯ ಮಾಡುತ್ತದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದು ತುಂಬಾ ಪ್ರಯೋಜನವಾಗಲಿದೆ.

1. ಟೆಕ್ನಿಪ್ ಎನರ್ಜಿಸ್ ಇಂಡಿಯಾ ಸ್ಕಾಲರ್’ಶಿಪ್ ಪ್ರೋಗ್ರಾಂ 2022-23:

ಟೆಕ್ನಿಪ್ ಎನರ್ಜಿಸ್ ಇಂಡಿಯಾ ದೆಹಲಿ NCR, ಬಿಹಾರ, ಅಸ್ಸಾಂ, ರಾಜಸ್ಥಾನ, ಚೆನ್ನೈ ಮತ್ತು ಮುಂಬೈನ  ಮಹಿಳಾ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ. ವಿದ್ಯಾರ್ಥಿನಿಯರು ಪ್ರಸ್ತುತ BE/BTech ಕೋರ್ಸ್’ಗಳ ಮೊದಲ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದರೆ ಈ ಸ್ಕಾಲರ್’ಶಿಪ್ ಲಭಿಸುತ್ತದೆ.

ಅರ್ಹತೆ :

1, ದೆಹಲಿ NCR, ಬಿಹಾರ, ಅಸ್ಸಾಂ, ರಾಜಸ್ಥಾನ, ಚೆನ್ನೈ ಮತ್ತು ಮುಂಬೈನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮಾತ್ರ ನೀಡಲಾಗುತ್ತದೆ.

2. ಅರ್ಜಿದಾರರು ಪ್ರಸ್ತುತ ಬಿಇ/ಬಿಟೆಕ್ (ಕೆಮಿಕಲ್, ಎಲೆಕ್ಟ್ರಿಕಲ್, ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್) ಕೋರ್ಸ್ಗಳ ಮೊದಲ ವರ್ಷಕ್ಕೆ ದಾಖಲಾಗಿರಬೇಕು.

3. 12ನೇ ತರಗತಿಯಲ್ಲಿ ಶೇ.70 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.

4. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ INR 4,00,000 ಗಿಂತ ಹೆಚ್ಚಿರಬಾರದು.

ವಿದ್ಯಾರ್ಥಿ ವೇತನದ ಮೊತ್ತ: INR 30,000

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2023

ಅಪ್ಲಿಕೇಶನ್ ಮೋಡ್: ಆನ್’ಲೈನ್ ಅಪ್ಲಿಕೇಶನ್’ಗಳು ಮಾತ್ರ

2. MBA ಮತ್ತು MA ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ 2022 ಕ್ರೆಡಿಟ್ ಸ್ಯೂಸ್ ಸ್ಕಾಲರ್’ಶಿಪ್:

ಆಯ್ದ ಸಂಸ್ಥೆಗಳಲ್ಲಿ MBA/MA (ಅರ್ಥಶಾಸ್ತ್ರ) ಕೋರ್ಸ್ಗಳಿಗೆ ದಾಖಲಾದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿವೇತನವು ಅಗತ್ಯ ಹಣಕಾಸಿನ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಅರ್ಹತೆ:

1. ಅಭ್ಯರ್ಥಿಗಳು ಗೊತ್ತುಪಡಿಸಿದ ಸಂಸ್ಥೆಗಳಲ್ಲಿ  MBA/MA (ಅರ್ಥಶಾಸ್ತ್ರ) ಕೋರ್ಸ್ ಮಾಡುತ್ತಿರಬೇಕು.

2. 12 ನೇ ತರಗತಿ ಅಥವಾ ಪದವಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನಿಷ್ಠ 60% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.

3. ಕುಟುಂಬದ ಆದಾಯವನ್ನು ವಾರ್ಷಿಕ INR 500,000 ಕ್ಕಿಂತ ಕಡಿಮೆ ಇರಬೇಕು

4. ವಿದ್ಯಾರ್ಥಿ ವೇತನದ ಮೊತ್ತ: ಒಟ್ಟು ಶುಲ್ಕದ 80%  ಅಥವಾ INR 200,000

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2023

ಅಪ್ಲಿಕೇಶನ್ ಮೋಡ್: ಆನ್’ಲೈನ್ ಅಪ್ಲಿಕೇಶನ್’ಗಳು ಮಾತ್ರ

3. ಚಾಲಕರ ಮಕ್ಕಳಿಗಾಗಿ ಸಕ್ಷಮ್ ಸ್ಕಾಲರ್’ಶಿಪ್

ಮಹೀಂದ್ರಾ ಫೈನಾನ್ಸ್ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ತೆಲಂಗಾಣಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆದಷ್ಟು ಬೇಗ ಅರ್ಜಿ ಸಲ್ಲಿಸಿದರೆ ಮಾತ್ರ ನೀವು ಈ ವಿದ್ಯಾರ್ಥಿವೇತನ ಪಡೆಯಬಹುದು. ಚಾಲನಾ ಪರವಾನಗಿಯನ್ನು ಹೊಂದಿರುವ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತದೆ. ಟ್ಯಾಕ್ಸಿ, ಜೀಪ್, ಕಾರು ವ್ಯಾನ್’ಗಳಂತಹ ಪಿಕಪ್, ಮ್ಯಾಜಿಕ್, ಸ್ಕೂಲ್ ವ್ಯಾನ್ ಮುಂತಾದ ಸಣ್ಣ ವಾಣಿಜ್ಯ ವಾಹನಗಳ ಚಾಲಕರ ಮಕ್ಕಳು ಇದಕ್ಕೆ ಅಪ್ಲೈ ಮಾಡಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02-2023