ಮೈಸೂರು: ಚಾಮರಾಜ ಹಾಗೂ ಕೃಷ್ಣರಾಜ ಕ್ಷೇತ್ರದ ಚುನಾವಣಾ ವೀಕ್ಷಕರಾದ ಧೀರಜ್ ಗುಪ್ತ ಅವರ ಅಧ್ಯಕ್ಷತೆಯಲ್ಲಿ ನೀತಿ ಸಂಹಿತೆ ಹಾಗೂ ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಿ ನೀತಿ ಸಂಹಿತೆ ಯಾವುದೇ ರೀತಿಯಿಂದಲು ಉಲ್ಲಂಘನೆಯಾಗಬಾರದು ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನವಣಾ ವೆಚ್ಚದ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ತಿಳಿಸಿದರು.
ಏ.26 ರಂದು ಸೆಕ್ಟರ್ ಅಧಿಕಾರಿ ಮತ್ತು ಮಾಸ್ಟರ್ ಟ್ರೈನರ್ಗಳ ಜೊತೆ 80 ವರ್ಷದ ಮೇಲ್ಪಟ್ಟವರಿಗೆ ಮತದಾನ ಮಾಡಿಸುವ ವಿಷಯದ ಕುರಿತು ಸಭೆ ನಡೆಸಿ ವಯಸ್ಸಾದವರು ಮತಗಟ್ಟೆಗೆ ಬರಲಾಗದಿದ್ದರೆ ಅಂತವರನ್ನು ಕರೆತರಲು ವ್ಹೀಲ್ ಚೇರ್ ಬಳಸಿಕೊಳ್ಳಿ, ಮತಗಟ್ಟೆಗಳ 100 ಮೀ. ಸುತ್ತಾ ಚುನಾವಣಾ ಅಭ್ಯರ್ಥಿಗಳು ಪ್ರಚಾರ ಕೈಗೊಳ್ಳದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಅಭ್ಯರ್ಥಿಗಳು ಹಾಗೂ ಏಜೆಂಟರ್ ಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.