ಮನೆ ಮನೆ ಮದ್ದು ಗಾಯಗಳು

ಗಾಯಗಳು

0
  1. ಗಾಯಗಳಾದಾಗ ಜೇನುತುಪ್ಪವನ್ನು ಹಚ್ಚುತ್ತಾ ಬಂದರೆ ಗಾಯದ ಕಲೆಗಳು ನಿಲ್ಲುವುದಿಲ್ಲ. ಬೇವಿನ ಸೊಪ್ಪನ್ನು ಅರೆದು ಹಚ್ಚುವುದರಿಂದ ಗಾಯ ಗುಣವಾಗುತ್ತದೆ.
  2. ಗಾಯವಾಗಿ ಊತವಿದ್ದಾಗ ಬಿಸಿಯಾದ ಹುಣಸೇ ಗೊಜ್ಜಿನ ಕಾಪಟ ಗುಣಕಾರಿ, ಓಮಿನ ಕಾಳನ್ನು ಎಣ್ಣೆಯಲ್ಲಿ ಹಾಕಿ ಕಾಯಿಸಿ ಅದನ್ನು ಲೇಪನ ಮಾಡಿದರೆ ನೋವು ಬಾವು ನಿವಾರಣೆ ; ನಿಂಬೆರಸದಲ್ಲಿ ಓಮು ಅರೆದು ಊತವಾಗಿರುವ ಜಾಗಕ್ಕೆ ಪಟ್ಟು ಹಾಕಬಹುದು ಎಳ್ಳೆಣ್ಣೆಯನ್ನು ಗಾಯಕ್ಕೆ ಹಚ್ಚಿದರೆ ಗಾಯ ಮಾಯುವುದು.
  3. ಸುಟ್ಟಗಾಯಕ್ಕೆ ಜೇನುತುಪ್ಪ ಸವರುತ್ತಿದ್ದರೆ ಮಾಯುವುದು. ಆಲೂಗಡ್ಡೆ ಬೇಯಿಸಿದ ನೀರಿನಿಂದ ತೊಳೆದು ಅದನ್ನು ನುಣ್ಣಗೆ ಅರೆದು ಹಚ್ಚುವುದರಿಂದ ಗುಣವಾಗುವುದು.ಅದಕ್ಕೆ ಅರಿಶಿನ ಪುಡಿಯನ್ನು ಬೆರೆಸಿದ ಪೇಸ್ಟ್ ಅನ್ನು ಗಾಯದ ಮೇಲೆ ಹಚ್ಚಿದರೆ ಗುಣವಾಗುವುದು.
  4. ಏಟು ಬಿದ್ದು ಊದಿದ ಭಾಗಕ್ಕೆ ನುಗ್ಗೆ ಸೊಪ್ಪಿನ ಶಾಖ ಕೊಟ್ಟರೆ ಗುಣ ಕಂಡುಬರುತ್ತದೆ.ಶ್ರೀಗಂಧದ ಚೆಕ್ಕೆಯನ್ನು ತೇದು ಗಾಯಗಳಿಗೆ ಲೇಪಿಸಿದರೆ ಗುಣವಾಗುತ್ತದೆ. ಅದರ ಶಾಖ ಕೊಟ್ಟರೆ ಊತ ನಿವಾರಣೆಯಾಗುತ್ತದೆ.
  5. ಯಾವ ಗಾಯವಾದರೂ ಸ್ವಮೂತ್ರದಿಂದ ತೊಳೆದು,ಅದನ್ನು ಅಗಾಗ ಅದರ ಮೇಲೆ ಹಚ್ಚುತ್ತಿದ್ದರೆ ಶ್ರೀಘ್ರ ಮಾಯವಾಗುತ್ತದೆ.
  6. ಅರಿಶಿನದ ಜೊತೆಯಲ್ಲಿ ಸಬ್ಬಸಿಗೆ ಸೊಪ್ಪನ್ನು ಅರೆದು ಗಾಯದ ಮೇಲೆ ಹಚ್ಚುವುದರಿಂದ ಊತ ನೋವು ನಿವಾರಣೆ ಆಗುವುದು.
  7. ಬೇವಿನ ಎಲೆ ಗರಿಕೆ, ಎಳ್ಳು ಸೇರಿಸಿ, ಅರಿಶಿನ ಕರ್ಪೂರ ಮಿಶ್ರ ಮಾಡಿ ಗಾಯಗಳಿಗೆ ಲೇಪಿಸಿದರೆ ಮಾಯುವುದು
  8. ಮಾವಿನ ಎಲೆ ಸುಟ್ಟು ಭಸ್ಮವನ್ನು ರಕ್ತ ಸೋರುವಾಗ ಹಾಕಿದರೆ ರಕ್ತ ಕಟ್ಟುತ್ತದೆ.
  9. ಹೊಂಗೆಬೀಜ, ಹಿಪ್ಪೇಬೀಜ, ಬೆಳ್ಳುಳ್ಳಿ ಅರೆದು ಗಾಯಕ್ಕೆ ಕಟ್ಟುವುದರಿಂದ ಬೇಗ ಗುಣವಾಗುವುದು.
  10. ಪರಂಗಿ ಕಾಯಿಯ ಹಾಲು ಗಾಯದ ಮೇಲೆ ಸವರುವುದು. ಬಾಳೇಕಾಯಿ ಕತ್ತರಿಸಿದ ದ್ರವಗಳು ಕಾಯದ ಮೇಲೆ ಲೇಪಿಸುವುದರಿಂದ ಗುಣವಾಗುವುದು.