ಮನೆ ರಾಜ್ಯ ವಿದ್ಯೆ ಇಲ್ಲದೆ ಇದ್ದರೂ ಪ್ರಜ್ಞಾವಂತಿಕೆ ಬೇಕು: ಎಚ್‌.ಡಿ. ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ತಿರುಗೇಟು

ವಿದ್ಯೆ ಇಲ್ಲದೆ ಇದ್ದರೂ ಪ್ರಜ್ಞಾವಂತಿಕೆ ಬೇಕು: ಎಚ್‌.ಡಿ. ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ತಿರುಗೇಟು

0

ಮೈಸೂರು: ‘ವಿದ್ಯೆ ಇಲ್ಲದೆ ಇದ್ದರೂ ಪ್ರಜ್ಞಾವಂತಿಕೆ ಬೇಕು. ಸಾಮಾನ್ಯ ಜ್ಞಾನವಿರಬೇಕು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ರಾಮನಗರದ ಇತಿಹಾಸವನ್ನು ತಂದೆ ಎಚ್‌.ಡಿ. ದೇವೇಗೌಡರನ್ನು ಕೇಳಿ ತಿಳಿದುಕೊಳ್ಳಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ಆದಿಚುಂಚನಗಿರಿ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಹಾಗೂ ಕೆಂಪೇಗೌಡರು ಜನಿಸಿದ್ದು ರಾಮನಗರದಲ್ಲಿ. ನಾವೆಲ್ಲರೂ ಬೆಂಗಳೂರಿನವರು. ಮಂಡ್ಯಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಮಾಡಿದರೂ ಮೈಸೂರು ವಿಶ್ವವಿದ್ಯಾಲಯವೇ ಬಹಳ ಮುಖ್ಯ. ಇದೂ ಅದೇ ರೀತಿಯೇ ಎಂದು ಪ್ರತಿಪಾದಿಸಿದರು.

ಮಾಗಡಿ, ರಾಮನಗರ, ಚನ್ನಪಟ್ಟಣದ ಬಹಳ ಜನರು ಆಸ್ತಿ ಮಾರುತ್ತಿದ್ದಾರೆ. ಆಸ್ತಿ ಮಾರಿಕೊಳ್ಳಬೇಡಿ, ಉಳಿಸಿಕೊಳ್ಳಿ ಎಂದು ಹೇಳಿದ್ದೇನೆ. ನಾನು ಕನಕಪುರ ಪ್ರವೇಶಿಸಿದ ಮೇಲೆ ಭೂಮಿ ಬೆಲೆ ಏನಾಯಿತು ಎಂಬುದು ಜನರಿಗೆ ಗೊತ್ತಿದೆ. ಇಡೀ ರಾಮನಗರ ಜಿಲ್ಲೆಯೇ ಬೆಂಗಳೂರಿಗೆ ಸೇರಿದ್ದು. ಮಾಗಡಿ, ಚನ್ನಪಟ್ಟಣ ಸೇರಿ ಎಲ್ಲವೂ ಬೆಂಗಳೂರಿನದ್ದೇ. ಈ ವಿಚಾರದಲ್ಲಿ ನನಗೇನೂ ಆತುರವಿಲ್ಲ. ಕುಮಾರಸ್ವಾಮಿ ಹೇಳಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಮತ್ತು ನಮ್ಮ ಸರ್ಕಾರದಿಂದ ಏನು ಮಾಡುತ್ತೇವೆಯೋ ಅದು ಮುಖ್ಯ ಎಂದು ಪ್ರತಿಕ್ರಿಯಿಸಿದರು.

ಇಲ್ಲಿ ಯಾರು ಯಾರದ್ದನ್ನೂ ಕಸಿದುಕೊಳ್ಳಲು ಹೋಗುವುದಿಲ್ಲ. ರಾಮನಗರ ಮಾಡಿದ್ದ ಕ್ರೆಡಿಟ್ ಅನ್ನು ಕುಮಾರಸ್ವಾಮಿ ಅವರೇ ಇಟ್ಟುಕೊಳ್ಳಲಿ. ಇನ್ನೊಬ್ಬ ತಲೆ ಕೆಟ್ಟ ಬಿಜೆಪಿ ಎಂಎಲ್‌ ಸಿ ಏನೇನೋ ಮಾತನಾಡುತ್ತಾನೆ. ಏಕೆ ಅಷ್ಟು ಆತುರ? ವಿಜಯದಶಮಿಯ ದಿನ ಶುಭ ಮುಹೂರ್ತ ಹಾಗೂ ಶುಭ ಗಳಿಗೆಯಲ್ಲಿ ಈ ಮಾತು ಹೇಳಿದ್ದೇನೆ ಎಂದರು.

ಹಿಂದಿನ ಲೇಖನಬಂಡೀಪುರ ಅರಣ್ಯ ರಸ್ತೆಯಲ್ಲಿ ಉರುಳಿ ಬಿದ್ದ ಬಸ್: ಹಲವರಿಗೆ ಗಾಯ
ಮುಂದಿನ ಲೇಖನಮೈಸೂರು ದಸರೆಗೆ ಹೊಸ ನೋಟ ಕೊಡಬೇಕು, ಈ ಬಗ್ಗೆ ಸಿಎಂ ಜೊತೆ ಚರ್ಚಿಸುವೆ: ಡಿಸಿಎಂ ಡಿ.ಕೆ.ಶಿವಕುಮಾರ್