ಮನೆ ಅಪರಾಧ ಮನೆಗೆ ಕನ್ನ ಹಾಕಿ ಕಳವು ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳರ ಬಂಧನ

ಮನೆಗೆ ಕನ್ನ ಹಾಕಿ ಕಳವು ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳರ ಬಂಧನ

0

ಶ್ರೀರಂಗಪಟ್ಟಣ :ರಾತ್ರಿ ವೇಳೆಯಲ್ಲಿ  ವಿವಿಧ ಗ್ರಾಮಗಳಲ್ಲಿ ಮನೆಗೆ ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಹಿಡಿದು ಕಳ್ಳರಬಳಿ ಇದ್ದ ಸುಮಾರು 50ಲಕ್ಷ ಮೌಲ್ಯದ ರೂ.ಬೆಲೆ ಬಾಳುವ 785 ಗ್ರಾಂ ಚಿನ್ನದ ಒಡವೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Join Our Whatsapp Group

 ದಿನಾಂಕ ನ.10 ,2024ರಂದು ತಾಲೂಕಿನ ನಗುವನಹಳ್ಳಿ ಗ್ರಾಮದ ಪ್ರಕಾಶ್.ಎನ್ ಬಿನ್ ಲೇಟ್ ನಾರಾಯಣಪ್ಪ ರವರ ವಾಸದ ಮನೆಗೆ ಯಾರೋ ಕಳ್ಳರು ನುಗ್ಗಿ ಮನೆಯಲ್ಲಿಟ್ಟಿದ್ದ ಸುಮಾರು 50,00,000/- (ಐವತ್ತು ಲಕ್ಷ) ರೂಗಳು ಬೆಲೆಬಾಳುವ ಸುಮಾರು 785 ಗ್ರಾಂ ತೂಕದ ಚಿನ್ನದ ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರು ನೀಡಿದ ಮೇರೆಗೆ 235/2024 500 331(4), 305 2.2.2 -2023 0 ಕ್ರಮ ಕೈಗೊಳ್ಳಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಐ.ಪಿ.ಎಸ್.ಅಡಿಷನಲ್. ಎಸ್.ಪಿ.ಸಿ ಈ  ತಿಮ್ಮಯ್ಯ,2 ಅಡಿಷನಲ್ ಎಸ್‌ಪಿ. ಎಸ್.ಈ. ಗಂಗಾಧರಸ್ವಾಮಿ ಹಾಗೂ ಡಿವೈಎಸ್‌ಪಿ  ಮುರುಳಿ ಹೆಚ್.ಎಸ್ ರವರ ಮಾರ್ಗದರ್ಶ ನದಲ್ಲಿ ತನಿಖಾಧಿಕಾರಿ ಬಿ.ಜಿ.ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪಿ.ಎಸ್.ಐ ರಕ್ಷಿತ, ವಿ.ಎಸ್.ಐ ಮಂಜುನಾಥ ಹಾಗೂ ಸಿಬ್ಬಂದಿಗಳಾದ ಶ್ರೀನಿವಾಸಮೂರ್ತಿ, ಹಫೀಜ್ ಪಾಷ, ದಿನೇಶ, ಶಂಕರ, ಮುತ್ತುರಾಜ, ಜೀಪ್ ಚಾಲಕ ರವೀಂದ್ರ ಜಿಲ್ಲಾ ಪೊಲೀಸ್ ಕಚೇರಿಯ ರವಿಕಿರಣ, ಲೋಕೇಶ ರವರನ್ನೊಳಗೊಂಡ ತಂಡವನ್ನು ರಚನೆ ಮಾಡಿ , ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ-1 ಹಂಚ್ಯಾ ಗ್ರಾಮದ ಪ್ರಸಾದ್  ಈತನನ್ನು ದಸ್ತಗಿರಿ ಮಾಡಿ ಈತನಿಂದ ಸುಮಾರು 516 ಗ್ರಾಂ ತೂಕದ ಚಿನ್ನದ ವಡವೆಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಈ ಪ್ರಕರಣದಲ್ಲಿ ‘

ಭಾಗಿಯಾಗಿ ತಲೆ ಮರೆಸಿಕೊಂಡಿದ್ದ  ಮತ್ತೊಬ್ಬ ಆರೋಪಿ ಮಹಮ್ಮದ್ ಮುನ್ನುಹಮ್ಮದ್ ಮುನ್ನನನ್ನು ದಸ್ತಗಿರಿ ಮಾಡಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ಆರೋಪಿಯಿಂದ ಸುಮಾರು 9,00,000/- ( ಒಂಭತ್ತು ಲಕ್ಷ ಬೆಲೆ ಬಾಳುವ) ಸುಮಾರು 155 ಗ್ರಾಂ ತೂಕದ ಚಿನ್ನದ ವಡವೆಗಳನ್ನು ವಶಕ್ಕೆ ತೆಗೆದುಕೊಂಡು . ಈ ಪ್ರಕರಣದಲ್ಲಿ ಆರೋಪಿಯು ಕೃತ್ಯಕ್ಕೆ ಬಳಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್‌ಮತ್ತು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಇಬ್ಬರ ಪತ್ತೆ ಕಾರ್ಯದಲ್ಲಿ ಶ್ರಮಿಸಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿದ್ದಾರೆ.